ತೆಳ್ಳಗಿರುವ ಹುಬ್ಬು ಕಪ್ಪಾಗಿ, ದಪ್ಪವಾಗಿ ಸುಂದರವಾಗಿ ಕಾಣಲು ರಾತ್ರಿ ಮಲಗುವ ಮುನ್ನ ಇದನ್ನು ಹಚ್ಚಿ

Bhavishya Shetty
Sep 24,2024

ಹುಬ್ಬು

ಪ್ರತಿಯೊಬ್ಬ ಮಹಿಳೆ ತನ್ನ ಹುಬ್ಬುಗಳು ನೈಸರ್ಗಿಕವಾಗಿ ಕಪ್ಪು ಮತ್ತು ಸುಂದರವಾಗಿರಬೇಕು ಎಂದು ಬಯಸುತ್ತಾಳೆ. ಆದರೆ, ಕೆಲವೊಮ್ಮೆ ಪ್ಲಕ್ಕಿಂಗ್ ಅಥವಾ ಥ್ರೆಡಿಂಗ್ ಹುಬ್ಬುಗಳು ತೆಳುವಾಗಿ ಇರುವಂತೆ ತೋರಲು ಕಾರಣವಾಗುತ್ತದೆ. ಅಥವಾ ಅನೇಕ ಮಹಿಳೆಯರು ಹುಟ್ಟಿನಿಂದಲೇ ತೆಳುವಾದ ಹುಬ್ಬುಗಳನ್ನು ಹೊಂದಿರುತ್ತಾರೆ.

ಅದ್ಭುತ ವಿಧಾನ

ಹುಬ್ಬುಗಳು ದಪ್ಪ ಮತ್ತು ದಟ್ಟವಾಗಿ ಕಾಣುವಂತೆ ಮಾಡಲು ಐಬ್ರೋ ಪೆನ್ಸಿಲ್‌ನ ಸಹಾಯವನ್ನು ಕೂಡ ಕೆಲವರು ತೆಗೆದುಕೊಳ್ಳುತ್ತಾರೆ. ಆದರೆ ನಾವಿಲ್ಲಿ ಹೇಳಹೊರಟಿರುವ ಅದ್ಭುತ ವಿಧಾನಗಳ ಸಹಾಯದಿಂದ ಸುಲಭವಾಗಿ ಕಪ್ಪು ಮತ್ತು ದಪ್ಪ ಹುಬ್ಬುಗಳನ್ನು ಪಡೆಯಬಹುದು.

ಕ್ಯಾಸ್ಟರ್ ಆಯಿಲ್

ಕೂದಲಿನ ಬೆಳವಣಿಗೆಗೆ ಕ್ಯಾಸ್ಟರ್ ಆಯಿಲ್ ಅತ್ಯುತ್ತಮ ಆಯ್ಕೆ. ರಿಸಿನೋಲಿಕ್ ಆಮ್ಲವು ಕ್ಯಾಸ್ಟರ್ ಆಯಿಲ್‌ನಲ್ಲಿ ಕಂಡುಬರುತ್ತದೆ. ವಿಟಮಿನ್ ಇ, ಒಮೆಗಾ -6 ಕೊಬ್ಬಿನಾಮ್ಲಗಳು ಮತ್ತು ಇತರ ಹಲವು ಪೋಷಕಾಂಶಗಳು ಕ್ಯಾಸ್ಟರ್ ಆಯಿಲ್‌ನಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಕೂದಲಿನ ಬೆಳವಣಿಗೆಯಲ್ಲಿ ಪರಿಣಾಮಕಾರಿ. ಹೀಗಾಗಿ ಈ ಎಣ್ಣೆಯನ್ನು ಹುಬ್ಬುಗಳ ಮೇಲೆ ಹತ್ತಿ ಅಥವಾ ಬೆರಳುಗಳ ಸಹಾಯದಿಂದ ಹಚ್ಚಿದರೆ ಸ್ವಲ್ಪ ಸಮಯದೊಳಗೆ ಕಪ್ಪು ಮತ್ತು ದಪ್ಪ ಹುಬ್ಬು ನಿಮ್ಮದಾಗುತ್ತದೆ

ಈರುಳ್ಳಿ ರಸ

ಹುಬ್ಬುಗಳು ದಪ್ಪವಾಗಲು, ನೀವು ಈರುಳ್ಳಿ ರಸದ ಸಹಾಯವನ್ನು ಸಹ ತೆಗೆದುಕೊಳ್ಳಬಹುದು. ಈರುಳ್ಳಿಯು ಗಂಧಕವನ್ನು ಹೊಂದಿದ್ದು ಹುಬ್ಬನ್ನು ದಪ್ಪವಾಗಿಸಲು ಪರಿಣಾಮಕಾರಿ. ಇದಕ್ಕಾಗಿ ಹತ್ತಿಯ ಸಹಾಯದಿಂದ ಪ್ರತಿದಿನ ಸ್ವಲ್ಪ ಈರುಳ್ಳಿ ರಸವನ್ನು ಹುಬ್ಬಿನ ಮೇಲೆ ಹಚ್ಚಬೇಕು. 2 ರಿಂದ 3 ವಾರಗಳಲ್ಲಿ ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ.

ಆಲಿವ್ ಎಣ್ಣೆ

ಫೀನಾಲಿಕ್ ಸಂಯುಕ್ತಗಳು ಆಲಿವ್ ಎಣ್ಣೆಯಲ್ಲಿ ಹೇರಳವಾಗಿ ಕಂಡುಬರುತ್ತವೆ. ಇದು ಹುಬ್ಬನ್ನು ಕಪ್ಪು ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ.

ಹಸಿ ಹಾಲು

ಪ್ರತಿದಿನ ಹುಬ್ಬುಗಳ ಮೇಲೆ ಹಸಿ ಹಾಲನ್ನು ಹಚ್ಚುವುದರಿಂದ ಅದ್ಭುತ ಫಲಿತಾಂಶಗಳನ್ನು ಪಡೆಯಬಹುದು. ಇದರಿಂದ ಆ ಭಾಗದಲ್ಲಿ ಕೂದಲಿನ ಬೆಳವಣಿಗೆ ಹೆಚ್ಚುವುದಲ್ಲದೆ ಕೂದಲು ಹೊಳೆಯುತ್ತದೆ. ಈ ರೀತಿಯಾಗಿ ನಿಮ್ಮ ಹುಬ್ಬುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ.

ಮೊಟ್ಟೆಯ ಹಳದಿ

ಇದೆಲ್ಲದರ ಹೊರತಾಗಿ, ವಾರಕ್ಕೆ ಎರಡು ಬಾರಿ ಹುಬ್ಬುಗಳ ಮೇಲೆ ಮೊಟ್ಟೆಯ ಹಳದಿಯನ್ನು ಹಚ್ಚಬಹುದು. ಮೊಟ್ಟೆಯ ಹಳದಿ ಲೋಳೆಯು ಪ್ರೋಟೀನ್ ಮತ್ತು ಬಯೋಟಿನ್‌ನ ಸಮೃದ್ಧ ಮೂಲವಾಗಿದೆ. ಇವೆರಡೂ ಕೂದಲಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.

ಸೂಚನೆ:

ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ. ಅವುಗಳನ್ನು ಕಾರ್ಯಗತಗೊಳಿಸುವ ಮೊದಲು ಸಂಬಂಧಪಟ್ಟ ತಜ್ಞರನ್ನು ಸಂಪರ್ಕಿಸಿ.

VIEW ALL

Read Next Story