White Hair remedies: ಡೈ-ದುಬಾರಿ ಆಯಿಲ್‌ ಏನು ಬೇಡ! ತೆಂಗಿನ ಎಣ್ಣೆಯಿಂದ 2 ನಿಮಿಷ ಈ ರೀತಿ ಮಸಾಜ್‌ ಮಾಡಿ ಸಾಕು ಬೇರಿನಿಂದಲೇ ಕೂದಲು ಕಪ್ಪಾಗುತ್ತದೆ


ಬಿಳಿಕೂದಲು ದೊಡ್ಡವರಿರಲಿ, ಚಿಕ್ಕವರಿರಲಿ ಎಲ್ಲರನ್ನೂ ಕಾಡುತ್ತಿರುವ ಸಮಸ್ಯೆ. 50 ಮತ್ತು 60 ವರ್ಷ ಮೇಲ್ಪಟ್ಟವರು ಕೂಡ ತಮ್ಮ ಬಿಳಿ ಕೂದಲನ್ನು ಮುಚ್ಚಲು ಡೈ ಬಳಸುತ್ತಾರೆ. ಕೂದಲು ಕಪ್ಪಾಗಿ ಹೊಳೆಯುತ್ತಿದ್ದರೆ ವಯಸ್ಸಾದವರೂ ಯೌವನದ ಭಾವ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆಯನ್ನು ಆಹಾರ ತಯಾರಿಕೆಯಲ್ಲಿ, ತ್ವಚೆ ಮತ್ತು ಕೂದಲಿನ ಆರೈಕೆಯಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಈ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ ಂದುಕೊಂಡರೆ ಅದು ತಪ್ಪು, ಎಲ್ಲರನ್ನೂ ಕಾಡುತ್ತಿರುವ ಬಿಳಿ ಕೂದಲಿನ ಸಮಸ್ಯೆಗೆ ತೆಂಗಿನೆಣ್ಣೆ ಚೆಕ್ ನೀಡುತ್ತದೆ. ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತದೆ.

ತೆಂಗಿನ ಎಣ್ಣೆ, ಗೋರಂಟಿ ಎಲೆ

ತೆಂಗಿನೆಣ್ಣೆಯಲ್ಲಿ ಗೋರಂಟಿ ಎಲೆಗಳನ್ನು ಮಿಕ್ಸ್‌ ಮಾಡಿ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಇದಕ್ಕಾಗಿ, ಮೂರು ಚಮಚ ತೆಂಗಿನ ಎಣ್ಣೆಯಲ್ಲಿ ಸ್ವಲ್ಪ ಗೋರಂಟಿ ಎಲೆಗಳನ್ನು ಹಾಕಿ ಒಲೆಯ ಮೇಲೆ ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಈ ಎಣ್ಣೆಯನ್ನು ತಲೆಗೆ ಹಚ್ಚಿ. ಕೂದಲಿನ ಬುಡವನ್ನು ಚೆನ್ನಾಗಿ ಮಸಾಜ್ ಮಾಡಿ.

ನೈಸರ್ಗಿಕ ಎಣ್ಣೆ

ಈ ಎಣ್ಣೆಯನ್ನು ಸುಮಾರು 40 ನಿಮಿಷದಿಂದ 1 ಗಂಟೆಯವರೆಗೆ ಇರಿಸಿ ಮತ್ತು ನಂತರ ನಿಮ್ಮ ತಲೆಯನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೊಮ್ಮೆ ಈ ಕ್ರಮವನ್ನು ಅನುಸರಿಸಿ ಇದರಿಂದ ಕೆಲವೇ ದಿನಗಲಲ್ಲಿ ನೈಸರ್ಗಿಕವಾಗಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಬಿಳಿ ಕೂದಲು ಶಾಶ್ವತವಾಗಿ ನಿವಾರಣೆಯಾಗುತ್ತದೆ.

ತೆಂಗಿನ ಎಣ್ಣೆ, ನಿಂಬೆ ರಸ

ಬೂದು ಕೂದಲಿನ ಸಮಸ್ಯೆಯನ್ನು ಹೋಗಲಾಡಿಸಲು ತೆಂಗಿನ ಎಣ್ಣೆಯಲ್ಲಿ ನಿಂಬೆಯ ರಸವನ್ನು ಬೆರಸಿ ಹಚ್ಚುವುದು ತುಂಬಾ ಉಪಯುಕ್ತ. ಮೂರು ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಸಮಾನ ಪ್ರಮಾಣದ ನಿಂಬೆ ರಸವನ್ನು ಸೇರಿಸಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ ಕೂದಲಿನ ಬುಡಕ್ಕೆ ಚೆನ್ನಾಗಿ ಮಸಾಜ್ ಮಾಡಿ. ಒಂದು ಗಂಟೆ ಕಾಲ ಹಾಗೆ ಇಟ್ಟು ನಂತರ ತಲೆ ತೊಳೆಯಿರಿ. ವಾರಕ್ಕೊಮ್ಮೆ ಇದನ್ನು ಬಳಸುವುದರಿಂದ ಬಿಳಿ ಕೂದಲಿನ ಸಮಸ್ಯೆ ಕಡಿಮೆಯಾಗುತ್ತದೆ.

ತೆಂಗಿನ ಎಣ್ಣೆ, ನೆಲ್ಲಿಕಾಯಿ

ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿಯನ್ನು ಬೆರಸಿ ಕೂದಲಿಗೆ ಹಚ್ಚುವುದರಿಂದ ಇದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಇದು ಬಿಳಿ ಕೂದಲು ಹೋಗಲಾಡಿಸುವ ಮ್ಯಾಜಿಕ್ ಮಾಡುತ್ತದೆ.

ನೆಲ್ಲಿಕಾಯಿ ಪುಡಿ

ಮೂರು ಚಮಚ ತೆಂಗಿನ ಎಣ್ಣೆಯಲ್ಲಿ ಎರಡು ಚಮಚ ನೆಲ್ಲಿಕಾಯಿ ಪುಡಿಯನ್ನು ಮಿಶ್ರಣ ಮಾಡಿ. ಕಡಿಮೆ ಉರಿಯಲ್ಲಿ ಬೇಯಿಸಿ. ರಾತ್ರಿಯಲ್ಲಿ ಇದನ್ನು ನೆತ್ತಿಯ ಮೇಲೆ ಹಚ್ಚಿ ಮತ್ತು ರಾತ್ರಿಯಿಡೀ ಇರಿಸಿ. ಮರುದಿನ ಬೆಳಿಗ್ಗೆ ನಿಮ್ಮ ತಲೆಯನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ.

ವಿಟಮಿನ್-ಸಿ

ವಿಟಮಿನ್-ಸಿ ಯಿಂದ ಸಮೃದ್ಧವಾಗಿರುವ ಈ ಎಣ್ಣೆಯು ಕೂದಲನ್ನು ಕಪ್ಪಾಗಿಸಲು ಮಾತ್ರವಲ್ಲದೆ ಕೂದಲನ್ನು ಗಟ್ಟಿಯಾಗಿ ಮತ್ತು ದಪ್ಪವಾಗಿಸಲು ಸಹಾಯ ಮಾಡುತ್ತದೆ.


ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

VIEW ALL

Read Next Story