ಒತ್ತಡ, ಮೊಡವೆ, ಸುಕ್ಕು ನಿವಾರಣೆಗೆ ಪರಿಣಾಮಕಾರಿ ಪರಿಹಾರ

ಮಸಾಜ್

ನಿಯಮಿತವಾಗಿ ಫೇಶಿಯಲ್ ಮಸಾಜ್ ಮಾಡುವುದರಿಂದ ಚರ್ಮದ ರಕ್ತ ಸಂಚಾರ ಸುಗಮವಾಗಿ ಇದು ಚರ್ಮಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರವನ್ನು ನೀಡಬಲ್ಲದು.

ಚರ್ಮದ ಆರೈಕೆ

ಚರ್ಮದ ಆರೈಕೆಗೆ ಫೇಶಿಯಲ್ ಮಸಾಜ್ ತುಂಬಾ ಅಗತ್ಯ. ಇದು ಮುಖದಲ್ಲಿ ಊತವನ್ನು ಕಡಿಮೆ ಮಾಡುವುದರ ಜೊತೆಗೆ, ಚರ್ಮದ ಮೇಲಿನ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕೂಡ ಕಡಿಮೆ ಮಾಡಬಲ್ಲದು ಎಂದು ಹೇಳಲಾಗುತ್ತದೆ.

ಕ್ಲಿಯರ್ ಸ್ಕಿನ್

ನಿಯಮಿತವಾಗಿ ಮುಖಕ್ಕೆ ಮಸಾಜ್ ಮಾಡುವುದರಿಂದ ಇದು ಚರ್ಮದ ಮೈಲ್ಮೈನಲ್ಲಿ ಮೂಡಿರುವ ಬಿರುಕುಗಳನ್ನು ನಿವಾರಿಸಿ, ಚರ್ಮವನ್ನು ಸ್ವಚ್ಛಗೊಳಿಸುತ್ತದೆ. ಇದರಿಂದ ಸ್ಪಷ್ಟವಾದ ಚರ್ಮವನ್ನು ನಿಮ್ಮದಾಗಿಸಬಹುದು.

ಸೈನಸ್ ನಿಂದ ಮುಕ್ತಿ

ಮುಖಕ್ಕೆ ಮಸಾಜ್ ಮಾಡುವುದರಿಂದ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸೈನಸ್, ತಲೆ ನೋವಿನಂತಹ ಸಮಸ್ಯೆಗಳಿಂದಲೂ ಪರಿಹಾರವನ್ನು ಪಡೆಯಬಹುದು.

ಸುಕ್ಕು ನಿವಾರಣೆ

ನಿಯಮಿತವಾಗಿ ಮುಖಕ್ಕೆ ಮಸಾಜ್ ಮಾಡುವುದರಿಂದ ಇದು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಮುಖದಲ್ಲಿ ಸುಕ್ಕುಗಳ ನಿವಾರಣೆಯಾಗಿ ತ್ವಚೆ ಯಂಗ್ ಆಗಿ ಕಾಣಿಸುತ್ತದೆ.

ರಕ್ತ ಪರಿಚಲನೆ

ಮುಖಕ್ಕೆ ಮಸಾಜ್ ಮಾಡುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸಿ ಮುಖದಲ್ಲಿ ಅದರಲ್ಲೂ ವಿಶೇಷವಾಗಿ ಕಣ್ಣಿನ ಸುತ್ತ ಕಾಣಿಸಿಕೊಳ್ಳುವ ಊತವನ್ನು ನಿವಾರಿಸಬಲ್ಲದು.

ಮೊಡವೆ

ಆಗಾಗ್ಗೆ ಮುಖಕ್ಕೆ ಮಸಾಜ್ ಮಾಡುವುದರಿಂದ ಚರ್ಮವು ಸ್ವಚ್ಛವಾಗಿ ಮುಖದಲ್ಲಿ ರಕ್ತದ ಹರಿವು ಹೆಚ್ಚಾಗುತ್ತದೆ. ಇದರಿಂದ ಮುಖದಲ್ಲಿ ಮೂಡುವ ಮೊಡವೆಗಳಿಂದಲೂ ಪರಿಹಾರ ಪಡೆಯಬಹುದು.

ಡಬಲ್ ಚಿನ್

ಮುಖಕ್ಕೆ ನಿಯಮಿತವಾಗಿ ಮಸಾಜ್ ಮಾಡುವುದರಿಂದ ಮುಖದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕೊಬ್ಬು ಕರಗಿ, ಡಬಲ್ ಚಿನ್ ಸಮಸ್ಯೆಯನ್ನು ನಿವಾರಿಸುತ್ತದೆ.

ಸೂಚನೆ

ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

VIEW ALL

Read Next Story