ಕೂದಲು ಉದುರುವಿಕೆಗೆ ಹಲವು ಕಾರಣಗಳಿವೆ. ಅದರಲ್ಲಿ ಅನುವಂಶೀಯತೆ, ಪೋಷಕಾಂಶಗಳ ಕೊರತೆ ಹೀಗೆ ಹಲವು ಕಾರಣಗಳಿರಬಹುದು.
ಆದಾಗ್ಯೂ, ಗೊತ್ತೋ ಗೊತ್ತಿಲ್ಲದೆ ಮಾಡುವ ಕೆಲವು ತಪ್ಪುಗಳು ಅಥವಾ ದೈನಂದಿನ ಅಭ್ಯಾಸಗಳು ಕೂಡ ಕೂದಲು ಉದುರುವಿಕೆಗೆ ಪ್ರಮುಖ ಕಾರಣವಾಗಿದೆ.
ಕೆಲವು ದೈನಂದಿನ ಅಭ್ಯಾಸಗಳಿಗೆ ಕಡಿವಾಣ ಹಾಕುವುದರಿಂದ ಕೂದಲು ಉದುರುವಿಕೆ, ಸ್ಪ್ಲಿಟ್ ಹೇರ್, ತಲೆಹೊಟ್ಟಿನ ಸಮಸ್ಯೆಗಳನ್ನು ನಿವಾರಿಸಬಹುದು.
ತಲೆಗೆ ಸ್ನಾನ ಮಾಡುವಾಗ ತುಂಬಾ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡಬೇಡಿ. ಇದರಿಂದ ನೆತ್ತಿಯಲ್ಲಿ ನೈಸರ್ಗಿಕ ತೈಲ ಕಡಿಮೆಯಾಗುತ್ತದೆ.
ತುಂಬಾ ಒರಟಾದ ಬಾಚಣಿಗೆ ಬಳಕೆಯೂ ಕೂಡ ಕೂದಲುದುರುವಿಕೆಗೆ ಪ್ರಮುಖ ಕಾರಣ.
ಟ್ರೆಂಡ್‌ಗಳಿಗೆ ಅನುಗುಣವಾಗಿಯೇ ಸ್ಟೈಲಿಶ್ ಆಗಿ ಕಾಣುವ ಹೇರ್ ಸ್ಟೈಲ್ ಮಾಡಲು ಬಿಗಿಯಾದ ಕೇಶವಿನ್ಯಾಸ ಮಾಡುವುದು ಕೂಡ ಕೂದಲುದುರುವಿಕೆಗೆ ಕಾರಣ.
ಕೂದಲು ನೇರವಾಗಿ ಕೂರಬೇಕೆಂತಲೋ, ಇಲ್ಲವೇ ಶೈನಿಂಗ್ ಕಾಣಲೆಂದು ಬಳಸುವ ಸ್ಟೈಲಿಂಗ್ ಜೆಲ್‌ಗಳು ಮತ್ತು ಸ್ಪ್ರೇಗಳನ್ನು ಬಳಸುವುದರಿಂದ ಇದು ಕೇಶರಾಶಿಯನ್ನು ಗಟ್ಟಿಯಾಗಿ, ಜಿಗುಟಾಗಿಸುವುದರಿಂದಲೂ ಕೂದಲು ಉದುರುತ್ತದೆ.
ನಿಯಮಿತವಾಗಿ ಕೂದಲಿಗೆ ಎಣ್ಣೆ ಹಾಕದಿರುವುದರಿಂದ ಕೂದಲಿನ ಕಿರುಚೀಲಗಳು ಹಾನಿಗೊಳಗಾಗುತ್ತವೆ.
ಒದ್ದೆ ಕೂದಲನ್ನು ಬಾಚುವುದರಿಂದಲೂ ಕೂದಲು ಉದುರುತ್ತದೆ.
ನಿಯಮಿತವಾಗಿ ಕೂದಲಿಗೆ ಎಣ್ಣೆ ಹಾಕಿ. ಕೊಬ್ಬರಿ ಎಣ್ಣೆ, ಆಲಿವ್, ಆಮ್ಲಾ ಎಣ್ಣೆಗಳಿಂದ ಕೂದಲಿನ ಕಿರುಚೀಲ ಪೋಷಿಸಿ, ಕೂದಲುದುರುವಿಕೆಯನ್ನು ನಿಯಂತ್ರಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.