ಎಷ್ಟೇ ಪ್ರಯತ್ನಿಸಿದರೂ ಹಳದಿ ಹಲ್ಲುಗಳಿಂದ ಪರಿಹಾರ ಸಿಗುತ್ತಿಲ್ಲ ಎಂದಾದರೆ ನಿಮ್ಮ ಮನೆಯಲ್ಲಿರುವ ಈ ವಸ್ತುಗಳನ್ನು ಒಮ್ಮೆ ಬಳಸಿ ನೋಡಿ...
ಆಪಲ್ ಸೈಡರ್ ವಿನೆಗರ್, 1/4 ಭಾಗ ನಿಂಬೆ ರಸ ಬೆರೆಸಿ ಬ್ರಶ್ ಮಾಡಿ, ತಣ್ಣೀರಿನಲ್ಲಿ ಚೆನ್ನಾಗಿ ಮೌತ್ ವಾಶ್ ಮಾಡಿದರೆ ಹಲ್ಲುಗಳಲ್ಲಿರುವ ಕಠಿಣ ಕಲೆಗಳಿಂದ ಪರಿಹಾರ ಸಿಗಲಿದೆ.
ಬೇಕಿಂಗ್ ಸೋಡಾ ಬಳಸಿ ಹಲ್ಲುಜ್ಜಿದರೆ ತಂಬಾಕು ಕಲೆ ಸುಲಭವಾಗಿ ಮಾಯವಾಗಿ ಹಲ್ಲು ಫಳ ಫಳ ಹೊಳೆಯುತ್ತದೆ.
ಬಾಳೆಹಣ್ಣಿನ ಸಿಪ್ಪೆಯಿಂದ ಹಲ್ಲುಗಳನ್ನು ಉಜ್ಜಿ ಹತ್ತು ನಿಮಿಷ ಬಿಟ್ಟು ಹಲ್ಲುಜ್ಜಿದರೆ ಹಲ್ಲುಗಳು ಬೆಳ್ಳಗೆ ಹೊಳೆಯುತ್ತವೆ.
ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಹಲ್ಲಿನ ಮೇಲೆ ಉಜ್ಜುವುದರಿಂದ ಹಳದಿ ಹಲ್ಲುಗಳನ್ನು ಬೆಳ್ಳಗಾಗಿಸುತ್ತವೆ.
ಕಲ್ಲಿದ್ದಲಿನ ಧೂಳಿನ ಪಾತ್ರೆಯಲ್ಲಿ ಟೂತ್ ಬ್ರಶ್ ಅಡ್ಡಿ ಹಲ್ಲು ಉಜ್ಜಿ ಬೆಚ್ಚಗಿನ ನೀರಿನಿಂದ ಮೌತ್ ವಾಶ್ ಮಾಡಿದರೆ ಕಲೆ ನಿವಾರಣೆ ಅಷ್ಟೇ ಅಲ್ಲ ಬಾಯಿಂದ ಬ್ಯಾಕ್ಟೀರಿಯಾವು ಹೊರಹೋಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.