ಕೇರಳ

ರೋಮ್ಯಾಂಟಿಕ್ ಬೀಚ್‌ಗಳಿಂದ ಹಿಡಿದು ಮಂತ್ರಮುಗ್ಧಗೊಳಿಸುವ ಕಣಿವೆಗಳಲ್ಲಿ ಮುಳುಗಿರುವ ಗಿರಿಧಾಮಗಳವರೆಗೆ, ತೂಗಾಡುವ ತೆಂಗಿನ ತೋಟಗಳಿಂದ ಹಿಡಿದು ಹಿನ್ನೀರಿನ ಸುಂದರ ನೋಟಗಳವರೆಗೆ, ಕೇರಳವು ಎಲ್ಲವನ್ನೂ ಹೊಂದಿದೆ.

ಡಾರ್ಜಿಲಿಂಗ್

ನೀವೂ ಬೇಸಿಗೆಯಲ್ಲಿ ಹನಿಮೂನ್‌ಗಾಗಿ ತಂಪಾದ ಸ್ಥಳಕ್ಕೆ ಹೋಗಬೇಕಾದರೆ, ನೀವು ಡಾರ್ಜಿಲಿಂಗ್‌ಗೆ ಹೋಗಬೇಕು. ಇದು ಭಾರತದ ಈಶಾನ್ಯದಲ್ಲಿದೆ.

ಮನಾಲಿ

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿರುವ ಮನಾಲಿ ನಗರವು ಅತ್ಯುತ್ತಮ ಹನಿಮೂನ್ ತಾಣವೆಂದು ಹೆಸರುವಾಸಿಯಾಗಿದೆ

ಲೇಹ್‌ ಲಡಾಖ್‌

ಹನಿಮೂನ್‌ ಆಗಲಿ ಟ್ರಿಪ್‌ ಆಗಲಿ ಎಲ್ಲರೂ ಹೇಳೋ ಮೊದಲ ಜಾಗ ಅಂದರೆ ಅದು ಲಡಾಖ್‌. ಇಲ್ಲಿನ ಅದ್ಭುತವಾದ ಮಂಜುಗಡ್ಡೆಯ ಕಣಿವೆಗಳಿಗೆ ಮನಸ್ಸು ಪ್ರಶಾಂತವಾಗುತ್ತದೆ.

ಅಂಡಮಾನ್-ನಿಕೋಬಾರ್

ಅಂಡಮಾನ್-ನಿಕೋಬಾರ್ ದ್ವೀಪಗಳನ್ನು ಭಾರತದಲ್ಲಿ ಹನಿಮೂನ್ ಜೋಡಿಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಬೇಸಿಗೆ ಕಾಲದಲ್ಲಿ ಅಂಡಮಾನ್ ನಿಮಗೆ ಪರಿಪೂರ್ಣ ಮಧುಚಂದ್ರದ ತಾಣವಾಗಿದೆ.

ಮೇಘಾಲಯ

ಮೇಘಾಲಯವು ತನ್ನ ನೈಸರ್ಗಿಕ ಸೌಂದರ್ಯ, ಆಹ್ಲಾದಕರ ಹವಾಮಾನ, ಜಲಪಾತಗಳು, ಹುಲ್ಲುಗಾವಲುಗಳು ಮತ್ತು ಇತರ ಪ್ರವಾಸಿ ಸ್ಥಳಗಳಿಗೆ ಹೆಸರುವಾಸಿಯಾದ ಮತ್ತು ಬೇಸಿಗೆ ಕಾಲದಲ್ಲಿ ಹನಿಮೂನ್‌ ನ ಭಾರತದ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ

ಗುಲ್ಮಾರ್ಗ್

ಭಾರತದ ಮಿನಿ ಸ್ವಿಟ್ಜರ್ಲೆಂಡ್ ಎಂದೇ ಖ್ಯಾತಿ ಪಡೆದಿರುವ ಗುಲ್ಮಾರ್ಗ್ ನವ ದಂಪತಿಗಳಿಗೆ ವಿಶೇಷ ಸ್ಥಳಗಳಲ್ಲಿ ಒಂದಾಗಿದೆ. ವಿಶೇಷವಾಗಿ ಗುಲ್ಮಾರ್ಗ್ ದೇಶದ ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.

ಔಲಿ

ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ. ಇದು ಉತ್ತರಾಖಂಡದ ಗರ್ವಾಲ್ ಪ್ರದೇಶದ ಚಮೋಲಿ ಜಿಲ್ಲೆಯಲ್ಲಿರುವ ಅದ್ಭುತವಾದ ಹಿಮಾಲಯ ತಾಣವಾಗಿದೆ.

VIEW ALL

Read Next Story