ಸರಿಯಾದ ಆಹಾರ ಪದ್ಧತಿಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ತುಂಬಾ ಸಿಹಿ ಇರುವ ವಸ್ತುಗಳಿಂದ ದೂರವಿರಿ. ಇದನ್ನು ತಿನ್ನುವುದರಿಂದ ನಮ್ಮ ಮೆದುಳಿನ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಬಹವುದು.
ಹೆಚ್ಚಿನ ಕೊಬ್ಬಿನ ಆಹಾರಗಳಿಂದ ದೂರವಿರಿ. ಇದು ದೇಹದ ಕೊಬ್ಬನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ನರಗಳೂ ದುರ್ಬಲವಾಗುತ್ತವೆ.
ಸಂಸ್ಕರಿಸಿದ ಆಹಾರಗಳು ದೇಹ ಮತ್ತು ಮೆದುಳಿನಲ್ಲಿ ಉರಿಯೂತವನ್ನು ಉಂಟುಮಾಡುತ್ತವೆ.
ನೀವು ಮದ್ಯ ಸೇವಿಸುತ್ತಿದ್ದರೇ ಇಂದೇ ನಿಲ್ಲಿಸಿ. ಇದರಿಂದ ಖಿನ್ನತೆ ಮತ್ತು ಆತಂಕದಂತಹ ಸಮಸ್ಯೆಗಳು ಉಂಟಾಗುತ್ತವೆ.
ಕೆಫೀನ್ ದೇಹಕ್ಕೆ ಒಳ್ಳೆಯದಲ್ಲ. ಇದು ನಿಮ್ಮ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.