ಆರಂಭದಲ್ಲಿ ಕೂದಲು ಉದುರುವಿಕೆಯನ್ನು ಲಘುವಾಗಿ ತೆಗೆದುಕೊಂಡರೆ, ನಂತರ ಆ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಬಹುದು. ಕೂದಲ ರಕ್ಷಣೆಯ ದಿನಚರಿಯಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದು, ತಲೆ ಮಸಾಜ್ ಮತ್ತು ನಿಯಮಿತವಾಗಿ ಕೂದಲು ತೊಳೆವುದು ಅಗತ್ಯ.
ಬೋಳುತಲೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನಾವಿಂದು ಉತ್ತಮ ಎಣ್ಣೆಯೊಂದನ್ನು ಪರಿಚಯಿಸುತ್ತಿದ್ದೇವೆ, ಇದು ಕೂದಲಿನ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಬೋಳುತಲೆಯಲ್ಲೂ ಕೂದಲು ಬೆಳೆಯಲು ಸಹಾಯ ಮಾಡುತ್ತದೆ.
ಅರ್ಗಾನ್ ಎಣ್ಣೆ (Argan oil)ಯು ಕೂದಲಿಗೆ ಉತ್ತಮ. ಈ ಎಣ್ಣೆಯು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ವಿಟಮಿನ್ ಇ ಅನ್ನು ಹೊಂದಿರುತ್ತದೆ, ಇದು ಕೂದಲಿಗೆ ತೇವಾಂಶ, ಹೊಳಪು ಮತ್ತು ಶಕ್ತಿಯನ್ನು ತರಲು ಕೆಲಸ ಮಾಡುತ್ತದೆ.
ಕ್ಯಾಸ್ಟರ್ ಆಯಿಲ್ ಕೂಡ ಬೋಳು ತಲೆ ಸಮಸ್ಯೆಯಿಂದ ಮುಕ್ತಿ ನೀಡುತ್ತದೆ. ಇದರಲ್ಲಿ ರಿಕೊನೊಲೈಕ್ ಎಂಬ ಅಂಶವಿದ್ದು, ಕೂದಲು ಉದುರುವುದು ಮತ್ತು ಒಡೆಯುವುದನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಈ ಎಣ್ಣೆಯಿಂದ ತಲೆಗೆ ಮಸಾಜ್ ಮಾಡಿದರೆ ರಕ್ತ ಸಂಚಾರ ಚೆನ್ನಾಗಿ ಆಗುತ್ತದೆ.
ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳಿವೆ, ಇದು ಕೂದಲನ್ನು ದಪ್ಪವಾಗಿಸುವುದಲ್ಲದೆ, ಎಣ್ಣೆ ಹಾಕುವುದರಿಂದ ತಲೆಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ.
ಬಾದಾಮಿ ಎಣ್ಣೆಯು ಕೂದಲನ್ನು ಕಪ್ಪು, ದಪ್ಪ ಮತ್ತು ಸುಂದರವಾಗಿಸುವ ಅಂಶಗಳನ್ನು ಒಳಗೊಂಡಿದೆ. ಮೆಹಂದಿ ಎಣ್ಣೆಯನ್ನು ಸಹ ಬಳಕೆ ಮಾಡಬಹುದು. ಇದು ಕೂದಲಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.