ಮೊಡವೆಯಿಂದ ಸನ್‌ಟಾನ್‌ವರೆಗೂ ಚರ್ಮಕ್ಕೆ ಬಲು ಉಪಯೋಗಿ ಟೊಮಾಟೊ

ಟೊಮಾಟೊ

ಬಿಪಿ ನಿಯಂತ್ರಣ, ದೃಷ್ಟಿ ಸುಧಾರಣೆ ಜೊತೆಗೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿರುವ ಟೊಮಾಟೊ ಚರ್ಮದ ಆರೈಕೆಯಲ್ಲೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಟೊಮಾಟೊದಲ್ಲಿ ಚರ್ಮದ ಗುಟ್ಟು

ಟೊಮಾಟೊ ಬಳಕೆಯಿಂದ ಬಹಳ ಸುಲಭವಾಗಿ ಚರ್ಮದ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.

ಮೊಡವೆ

ಟೊಮಾಟೊ ತಿರುಳನ್ನು ಮುಖಕ್ಕೆ ಮಸಾಜ್ ಮಾಡುವುದರಿಂದ ಮೊಡವೆ ನಿವಾರಣೆಯಾಗುತ್ತದೆ.

ಚರ್ಮದ ರಂಧ್ರಗಳು

ನಿಯಮಿತವಾಗಿ ಟೊಮಾಟೊ ರಸದಿಂದ ಮುಖಕ್ಕೆ ಮಸಾಜ್ ಮಾಡಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿದರೆ ಸ್ವಚ್ಛ, ಕೋಮಲ, ರಂಧ್ರಮುಕ್ತ ಚರ್ಮ ಹೊಂದಬಹುದು.

ಆಯ್ಲಿ ಸ್ಕಿನ್

ಟೊಮಾಟೊವನ್ನು ಅರ್ಧ ಓಳು ಮಾಡಿ ಇದರಲ್ಲಿ ಚಿಟಿಕೆ ಅರಿಶಿನ, ಅಕ್ಕಿ ಹಿಟ್ಟು ಬೆರೆಸಿ ಮುಖಕ್ಕೆ ಸ್ಕ್ರಬ್ ಮಾಡಿದರೆ ಆಯ್ಲಿ ಸ್ಕಿನ್ ನಿವಾರಿಸಬಹುದು.

ಚರ್ಮದ ಕಲೆಗಳು

ಟೊಮಾಟೊ ಜೊತೆಗೆ ಓಟ್ ಮಿಲ್, ಮೊಸರು ಬೆರೆಸಿ ಮುಖಕ್ಕೆ ಫೇಸ್ ಪ್ಯಾಕ್ ರೀತಿ ಬಳಸುವುದರಿಂದ ಚರ್ಮದ ಕಲೆಗಳು ಮಾಯವಾಗುತ್ತವೆ.

ಸನ್‌ಟಾನ್‌

ನಿಮ್ಮ ಸ್ಕಿನ್ ಟ್ಯಾಣ್ ಆಗಿದ್ದರೆ ಟೊಮಾಟೊ ಮ್ಯಾಶ್ ಮಾಡಿ ಇದರಲ್ಲಿ ಮೊಸರು ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷಗಳ ಬಳಿಕ ಫೇಸ್ ವಾಶ್ ಮಾಡಿ.

ಡೆಡ್ ಸ್ಕಿನ್

ಟೊಮಾಟೊವನ್ನು ಮಧ್ಯಕ್ಕೆ ಕತ್ತರಿಸಿ ಸ್ವಲ್ಪ ಸಕ್ಕರೆ ಹಾಕಿ ಇದರಿಂದ ಸ್ಕ್ರಬ್ ಮಾಡಿದರೆ ಡೆಡ್ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.

ಸೂಚನೆ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story