ಮುಖವನ್ನು ಕಾಂತಿಯುತವಾಗಿಸಲು ಕಡಲೆ ಹಿಟ್ಟು ಸುಲಭವಾದ ಮನೆಮದ್ದು. ಇದನ್ನು ಮುಖಕ್ಕೆ ಹಚ್ಚುವುದರಿಂದ ತ್ವಚೆ ನೈಸರ್ಗಿಕವಾಗಿ ಕಾಂತಿಯುತವಾಗುತ್ತದೆ.
ಒಂದು ಚಮಚ ಕಡಲೆ ಹಿಟ್ಟು ತೆಗೆದುಕೊಂಡು ಅಗತ್ಯಕ್ಕೆ ಅನುಗುಣವಾಗಿ ಹಸಿ ಹಾಲು ತೆಗೆದುಕೊಂಡು ಮಿಕ್ಸ್ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ.
ಒಂದು ಚಮಚ ಕಡಲೆ ಹಿಟ್ಟು ತೆಗೆದುಕೊಂಡು ಅದನ್ನು ಒಂದು ಟೊಮೇಟೊ ರಸದೊಂದಿಗೆ ಬೆರೆಸಿ, ಟೊಮೇಟೊ ಬದಲು ರೋಸ್ ವಾಟರ್ ಅಥವಾ ನಿಂಬೆ ರಸವನ್ನು ಕೂಡಾ ಬಳಸಬಹುದು.
ಕಡಲೆ ಹಿಟ್ಟು, ಮೊಸರು, ಜೇನು ತುಪ್ಪವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ.
ಒಂದು ಚಮಚ ಕಡಲೆ ಹಿಟ್ಟಿನ ಜೊತೆ ಒಂದು ಚಮಚ ಆಲೋವಿರಾ ಜೆಲ್ ಅನ್ನು ಬಳಸಿ. ನಂತರ ಈ ಮಿಶ್ರಣವನ್ನು ಮುಖದಮೇಲೆ ಹಚ್ಚಿ.
ಒಂದು ಚಮಚ ಕಡಲೆ ಹಿಟ್ಟು ಮತ್ತು ಒಂದು ಚಮಚ ಮುಲ್ತಾನಿ ಮಿಟ್ಟಿ ಯನ್ನು ಬೆರೆಸಿ ರೋಸ್ ವಾಟರ್ ಹಾಕಿ ಮಿಶ್ರಣ ತಯಾರಿಸಿಕೊಳ್ಳಿ. ನಂತರ ಇದನ್ನೂ ಮುಖದ ಮೇಲೆ ಹಚ್ಚಿ.
ಒಂದು ಚಮಚ ಕಡಲೆ ಹಿಟ್ಟು ಮತ್ತು ಅರಶಿನ ಬೆರೆಸಿ ಮುಖಕ್ಕೆ ಹಚ್ಚಿದರೆ ಸುಕ್ಕು ನಿವಾರಣೆಯಾಗುತ್ತದೆ.
ಕಡಲೆ ಹಿಟ್ಟು ಎಲ್ಲಾ ರೀತಿಯ ತ್ವಚೆಗೂ ಬಳಸಬಹುದು.
ನೀವು ಕೂಡಾ ಕಡಲೆ ಹಿಟ್ಟನ್ನು ಮೇಲೆ ತಿಳಿಸಿದ ವಸ್ತುಗಳೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ.