ಆಲೂಗಡ್ಡೆ ಸಿಪ್ಪೆಯನ್ನು ಹೀಗೆಲ್ಲಾ ಉಪಯೋಗಿಸಬಹುದು!

ಆಲೂಗಡ್ಡೆ ಸಿಪ್ಪೆ

ಆಲೂಗಡ್ಡೆ ಸಿಪ್ಪೆ ನಿಷ್ಪ್ರಯೋಜಕ ಎಂದು ನೀವು ಕೂಡಾ ಎಸೆಯುತ್ತಿದ್ದರೆ ನೀವು ಬಹಳ ದೊಡ್ಡ ತಪ್ಪು ಮಾಡುತ್ತಿದ್ದೀರಿ.

ಸಿಂಕ್ ಸ್ವಚ್ಚಗೊಳಿಸಲು

ಅಡುಗೆ ಮನೆಯ ಸಿಂಕ್ ಕೊಳಕಾಗಿದ್ದರೆ ಅದರಲ್ಲಿ ನೀರ ಕಲೆಗಳು ನಿಂತಿದ್ದರೆ ಆಲೂಗಡ್ಡೆ ಸಿಪ್ಪೆ ಮೂಲಕ ಶುಚಿಗೊಳಿಸಬಹುದು.

ಸಿಂಕ್ ಸ್ವಚ್ಚಗೊಳಿಸಲು

ಆಲೂಗಡ್ಡೆ ಸಿಪ್ಪೆಯನ್ನು ಸಿಂಕ್ ನಲ್ಲಿ ಹಾಕಿ ಆ ಸಿಪ್ಪೆಯಿಂದಲೇ ಸ್ಕ್ರ್ಕಬ್ ರೀತಿಯಲ್ಲಿ ಉಜ್ಜಿ.

ಚಪ್ಪಲಿ ವಾಸನೆ ಹೋಗಲಾಡಿಸಲು

ಮಳೆಗಾಲದಲ್ಲಿ ಒದ್ದೆಯಾಗುವ ಕಾರಣದಿಂದ ಚಪ್ಪಲಿಯಿಂದ ಒಂದು ರೀತಿಯ ವಾಸನೆ ಬರುತ್ತದೆ.

ಚಪ್ಪಲಿ ವಾಸನೆ ಹೋಗಲಾಡಿಸಲು

ಆಲೂಗಡ್ಡೆ ಸಿಪ್ಪೆಯಿಂದ ಶೂಯಿಂದ ಬರುವ ವಾಸನೆಯನ್ನು ಕೂಡಾ ಹೋಗಲಾಡಿಸಬಹುದು. ಇದಕ್ಕಾಗಿ ಆಲೂಗಡ್ಡೆ ಮತ್ತು ಬೇಕಿಂಗ್ ಸೋಡಾವನ್ನು ಶೂ ನಲ್ಲಿ ಹಾಕಿ ರಾತ್ರಿ ಪೂರ್ತಿ ಇಡಬೇಕು.

ತುಕ್ಕು ತೆಗೆಯಲು

ಕಬ್ಬಿಣದ ಕಾವಲಿ ಅಥವಾ ಬಾಣಲೆಯಲ್ಲಿ ತುಕ್ಕು ಹಿಡಿದಿದ್ದರೆ ಆಲೂಗಡ್ಡೆ ಸಿಪ್ಪೆಯಿಂದ ಅದನ್ನು ಶುಚಿಗೊಳಿಸಬಹುದು.

ತುಕ್ಕು ತೆಗೆಯಲು

ಕಬ್ಬಿಣದ ಕಾವಲಿ ಅಥವಾ ಬಾಣಲೆ ಮೇಲೆ ಆಲೂಗಡ್ಡೆ ಸಿಪ್ಪೆಯ ಸಹಾಯದಿಂದ ಚೆನಾಗಿ ಉಜ್ಜಬೇಕು.

ಕನ್ನಡಿ ಶುಚಿಗೊಳಿಸಲು

ಆಲೂಗಡ್ಡೆ ಸಿಪ್ಪೆಯಿಂದ ಕನ್ನಡಿ, ಕಿಟಕಿ ಗಾಜನ್ನು ಉಜ್ಜಿ. ನಂತರ ಒದ್ದೆ ಬಟ್ಟೆಯಿಂದ ಶುಚಿಗೊಳಿಸಿ.

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story