ಈ ಒಂದು ವಸ್ತುವನ್ನುಗುಲಾಬಿ ಗಿಡಕ್ಕೆ ಹಾಕಿದರೆ ಎಲೆಯೂ ಕಾಣದಂತೆ ಅರಳಿ ನಿಲ್ಲುವುದು ಹೂವು

Ranjitha R K
Aug 15,2024

ಅರಳಿ ನಿಲ್ಲುವುದು ಹೂವು

ಗುಲಾಬಿ ಗಿಡದ ಬುಡಕ್ಕೆ ಈ ವಸ್ತು ಹಾಕಿದರೆ ಗಿಡ ತುಂಬಾ ಹೂವು ಅರಳಿ ನಿಲ್ಲುವುದು.

ಪ್ರಯೋಜನಕಾರಿ

ಕಲ್ಲು ಉಪ್ಪಿನಲ್ಲಿ ಮೆಗ್ನಿಶಿಯಂ ಮತ್ತು ಗಂಧಕದ ಅಂಶ ಹೆಚ್ಚಾಗಿ ಇರುತ್ತದೆ. ಇದು ಸಸ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಉತ್ತಮ ಗೊಬ್ಬರ

ಕಲ್ಲು ಉಪ್ಪು ಸಸ್ಯಗಳಿಗೆ ಗೊಬ್ಬರವಾಗಿ ಕೆಲಸ ಮಾಡುತ್ತದೆ.ಗುಲಾಬಿ ಗಿಡಕ್ಕೆ ಇದು ಹೆಚ್ಚು ಉಪಯುಕ್ತ.

ಹೀಗೆ ಬಳಸಿ

೪ ರಿಂದ ೫ ಚಮಚ ಕಲ್ಲು ಉಪ್ಪನ್ನು ನೀರಿನಲ್ಲಿ ಮಿಶ್ರಣ ಮಾಡಿ ಬಾಳೆ ಹಣ್ಣಿನ ಸಿಪ್ಪೆಯನ್ನು ಈ ನೀರಿಗೆ ಸೇರಿಸಿ.ರಾತ್ರಿಯಿಡಿ ಇದನ್ನು ಹಾಗೆಯೇ ಬಿಟ್ಟು ಬೆಳಿಗ್ಗೆ ಗಿಡಕ್ಕೆ ಹಾಕಿ.

ವಾರಕ್ಕೊಮ್ಮೆ ಹಾಕಿ

ವಾರಕ್ಕೊಮ್ಮೆ ಗುಲಾಬಿ ಗಿಡಕ್ಕೆ ಈ ಮಿಶ್ರಣವನ್ನು ಹಾಕಬೇಕು. ಹೀಗೆ ಮಾಡುತ್ತಾ ಬಂದರೆ ಗಿಡ ತುಂಬಾ ಹೂವು ಅರಳಿ ನಿಲ್ಲುತ್ತದೆ.

ಕಲ್ಲುಪ್ಪು ಮತ್ತು ಸ್ಪಟಿಕ

ಇನ್ನು ಕಲ್ಲುಪ್ಪು ಮತ್ತು ಸ್ಪಟಿಕದ ಪುಡಿಯನ್ನು ಕೂಡಾ ಮಿಶ್ರಣವನ್ನು ಗುಲಾಬಿ ಗಿಡಕ್ಕೆ ಹಾಕುವುದರಿಂದಲೂ ಗಿಡ ತುಂಬಾ ಹೂವು ಎದ್ದು ನಿಲ್ಲುತ್ತದೆ.

ಕೀಟಕ್ಕೆ ಮದ್ದು

ಇದನ್ನು ಗಿಡಕ್ಕೆ ಹಾಕುವುದರಿಂದ ಕೀಟಗಳು ಕೂಡಾ ಆಗುವುದಿಲ್ಲ.

ಕಲ್ಲುಪ್ಪು ಮತ್ತು ಸ್ಪಟಿಕ

ಕಲ್ಲುಪ್ಪು ಮತ್ತು ಸ್ಪಟಿಕದ ಪುಡಿಯನ್ನು ಕೂಡಾ ವಾರಕ್ಕೆ ಎರಡು ಬಾರಿ ಗಿಡಕ್ಕೆ ಹಾಕಿದರೆ ಸಹಕಾರಿಯಾಗಿದೆ.


ಸೂಚನೆ:ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ.ಜೀ ಕನ್ನಡ ನ್ಯೂಸ್ ಅದನ್ನು ಅನುಮೋದಿಸುವುದಿಲ್ಲ.

VIEW ALL

Read Next Story