ನೀವು ಸೇವಿಸುವ ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿನೋಡಿ. 21 ದಿನಗಳಲ್ಲಿ 7 ಕೆಜಿ ತೂಕ ಕಳೆದುಕೊಳ್ಳುವುದು ಖಂಡಿತಾ ಸಾಧ್ಯವಾಗುತ್ತದೆ.
ನಿಮ್ಮ ದಿನವನ್ನು ಗಟ್ ಕ್ಲೀನಿಂಗ್ ಜ್ಯೂಸ್ ನಿಂದ ಆರಂಭಿಸಿ. ಬೆಳ್ಳಿಗೆ ಸ್ಮೂಥಿ ಸೇವಿಸಿದರೆ ಕೊಲೆಜನ್ ಹೆಚ್ಚಾಗುವುದು.
ಇನ್ನು ಮಧ್ಯಾಹ್ನ ಊಟದಲ್ಲಿ 100 ಗ್ರಾಂ ಮೊಸರು, ಕಿನ್ನಾವೋ, ಮತ್ತು ಹಸಿ ಬೀಟ್ರೂಟ್ ಅನ್ನು ಸೇವಿಸಬೇಕು. ಇಷ್ಟು ತಿಂದರೆ ದೇಹಕ್ಕೆ ಬೇಕಾಗುವ ಪ್ರೋಟೀನ್, ಫೈಬರ್, ಐರನ್, ಮಿನರಲ್ ಸಿಗುತ್ತದೆ.
ಸಂಜೆ ೨೦ ನಿಮಿಷ ವ್ಯಾಯಾಮ ಮಾಡಿ. ಇದು ಬೊಜ್ಜು ಕರಗಿಸಲು ತೂಕ ಇಳಿಸಲು ಸಹಾಯ ಮಾಡುತ್ತದೆ.
ವ್ಯಾಯಾಮದ ನಂತರ ಒಂದು ಚಮಚ ವ್ಹಿಟ್ ಪ್ರೋಟೀನ್ ಸೇವಿಸಬೇಕು. ಸಂಜೆ ೬ ಗಂಟೆಗೆ ೨೦೦ ಗ್ರಾಂ ಬಿಳಿ ಕಡಲೆ ಕಾಳಿನ ಪಾಸ್ತಾ ಸೇವಿಸಬಹುದು.
ತೂಕ ಕಳೆದುಕೊಳ್ಳಬೇಕಾದರೆ ರಾತ್ರಿ ೮ ಗಂಟೆಯ ಒಳಗೆ ಭೋಜನ ಮುಗಿಸಿ ಬಿಡಬೇಕು. ಇನ್ನು ರಾತ್ರಿ ಆಂಟಿ ಬ್ಲೋಟಿಂಗ್ ಟೀ ಸೇವಿಸಿದರೆ ಒಳ್ಳೆಯದು.
ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಆಹಾರ ಸೇವಿಸುವ ಸಲಹೆ ತಜ್ಞರದ್ದು. ಆಹಾರ ಸೇವಿಸಲು ರಾತ್ರಿಯಿಂದ ಬೆಳಗ್ಗಿನವರೆಗೆ ೧೫ ಗಂಟೆಗಳ ಕಾಲ ಗ್ಯಾಪ್ ಇರಬೇಕು.
ಈ ಆಹಾರ ಪದ್ದತಿಯನ್ನು ಅನುಸರಿಸುವ ಮೂಲಕವೇ 21 ದಿನಗಳಲ್ಲಿ 7 ಕೆಜಿ ತೂಕ ಕಳೆದುಕೊಂಡಿರುವುದಾಗಿ ಹೇಳುತ್ತಾರೆ ರೀಚಾ ಎನ್ನುವ ಮಹಿಳೆ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.