ನೆಮ್ಮದಿಯ ನಿದ್ದೆಗೆ ಉತ್ತಮ ಮನೆಮದ್ದುಗಳು

ರಾತ್ರಿ ಶಾಂತಿಯುತವಾಗಿ ನೆಮ್ಮದಿಯಿಂದ ಮಲಗಲು ಇಲ್ಲಿವೆ ಉತ್ತಮ ಮನೆ ಮದ್ದು, ಇದನ್ನು ಅನುಸರಿಸಿದರೆ ನೀವು ನೆಮ್ಮದಿಯ ನಿದ್ದೆಯನ್ನು ನಿಮ್ಮದಾಗಿಸಿಕೊಳ್ಳಬಹುದು.

ಅತಿಯಾದ ಸ್ಮಾರ್ಟ್ ಫೋನ್ ಬಳಕೆ, ಒತ್ತಡ, ಕೆಲಸದ ಹೊರೆ, ಕೌಟುಂಬಿಕ ಹೊರೆ ಹೀಗೆ ಕೆಲವು ಕಾರಣಗಳಿಂದ ನೆಮ್ಮದಿಯ ನಿದ್ದೆ ಬರುವುದಿಲ್ಲ.

ರಾತ್ರಿ ಮಲಗುವ ಮುನ್ನ ಒಂದು ಲೋಟದಷ್ಟು ಹಾಲಿನಲ್ಲಿ ಎರಡು ಮೂರು ಏಲಕ್ಕಿಗಳನ್ನ ಕುದಿಸಿ, ಅದು ತಣ್ಣಗಾದ ಮೇಲೆ ಹಾಲನ್ನು ಕುಡಿದು ಮಲಗುವುದರಿಂದ ನೆಮ್ಮದಿಯ ನಿದ್ದೆ ಪಡೆಯಬಹುದು

ರಾತ್ರಿ ಮಲಗು ಮುನ್ನ ಬಾಳೆಹಣ್ಣನ್ನು ತಿನ್ನುವುದು ಒಳ್ಳೆಯದು ಮತ್ತು ಇದು ನಿದ್ರಾಹೀನತೆಯನ್ನು ನಿವಾರಿಸುತ್ತದೆ.

ಪ್ರತಿದಿನ ಮಲಗುವ ಮೊದಲು ಜೀರಿಗೆಯನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ನಿದ್ರಾಹೀನತೆ ಕಡಿಮೆಯಾಗುತ್ತದೆ.

ರಾತ್ರಿ ಮಲಗುವ ಮುನ್ನ ಒಂದು ಲೋಟ ಹಸುವಿನ ಹಾಲನ್ನು ಕುದಿಸಿ ಕುಡಿಯುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ

ರಾತ್ರಿ ಹೆಚ್ಚಾಗಿ ತಿನ್ನೋದು ಮತ್ತು ಮೈದಾ ಮಾಂಸ ದಂತಹ ಆಹಾರವನ್ನು ತಿನ್ನೋದು ಕಡಿಮೆ ಮಾಡುವುದು ಒಳ್ಳೆಯದು

ಸಂಜೆ ಏಳು ಗಂಟೆ ಸಮಯದಲ್ಲಿ ಚಹಾ ಕಾಫಿ ಮತ್ತು ಎನರ್ಜಿ ಡ್ರಿಂಕ್ಸ್ ಅನ್ನು ಕುಡಿಯುವುದು ಕಡಿಮೆ ಮಾಡಿದರೆ ನಿದ್ದೆ ಚೆನ್ನಾಗಿ ಬರುತ್ತದೆ

VIEW ALL

Read Next Story