ಹಿಂದೂ ಧರ್ಮದಲ್ಲಿ ನವರಾತ್ರಿಗೆ ವಿಶೇಷ ಮಹತ್ವವಿದೆ. ದುರ್ಗಾ ದೇವಿಯನ್ನು ಮೆಚ್ಚಿಸಲು, ಮಹಿಳೆಯರು ಹಲವಾರು ದಿನಗಳ ಮುಂಚಿತವಾಗಿ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. ಈ 9 ದಿನಗಳಲ್ಲಿ 9 ಬಣ್ಣದ ಬಟ್ಟೆಗಳನ್ನು ತೊಡುವುದು ಕೂಡಾ ಪದ್ಧತಿ.
ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಬಟ್ಟೆಯನ್ನು ಧರಿಸಲಾಗುತ್ತದೆ. ಹಳದಿ ಬಣ್ಣದ ಅನಾರ್ಕಲಿ ಸೂಟ್ ಎಲ್ಲರ ಗಮನ ಸೆಳೆಯುವಂತಿರುತ್ತದೆ.
ನವರಾತ್ರಿಯ ೨ನೆ ದಿನ ಹಸಿರು ಬಣ್ಣದ ಬಟ್ಟೆ. ಈ ದಿನ ಪೂಜೆ ಮಾಡುವಾಗ ಹಸಿರು ಬಣ್ಣದ ಬಟ್ಟೆ ಧರಿಸಲಾಗುತ್ತದೆ.
3 ನೇ ದಿನ ಬೂದು ಬಣ್ಣದ ಬಟ್ಟೆ ಧರಿಸಲಾಗುತ್ತದೆ. ಈ ದಿನ ಬೂದು ಬಣ್ಣದ ಸಿಂಪಲ್ ಬಟ್ಟೆ ಧರಿಸಿದರೆ ಚೆನ್ನಾಗಿರುತ್ತದೆ.
ಕೇಸರಿ ಬಣ್ಣದ ಸೂಟ್ ನೋಡಲು ಅದ್ಭುತವಾಗಿರುತ್ತದೆ. ನವರಾತ್ರಿಯ ನಾಲ್ಕನೇ ದಿನ ಕೇಸರಿ ಬಣ್ಣದ ಸೂಟ್ ಧರಿಸಬೇಕು.
ನವರಾತ್ರಿಯ ಐದನೇ ದಿನ ಬಿಳಿ ಬಣ್ಣದ ಬಟ್ಟೆಗೆ ಮಹತ್ವ. ಹೀಗಾಗಿ ಆ ದಿನ ಬಿಳಿ ಬಣ್ಣದ ಸೀರೆಯನ್ನು ಉಡಬಹುದು.
ಆರನೇ ದಿನ ಕೆಂಪು ಬಣ್ಣದ ಬಟ್ಟೆ ಧರಿಸಲಾಗುತ್ತದೆ. ಕೆಂಪು ಬಣ್ಣದ ಚೂಡಿದಾರ್ ಹಾಕಿದರೆ ಎಲ್ಲರ ನಡುವೆ ಎದ್ದು ಕಾಣುವಿರಿ.
ನವರಾತ್ರಿಯ ಏಳನೇ ದಿನ ನೀಲಿ ಬಣ್ಣದ ಬಟ್ಟೆ ತೊಡಬೇಕು. ನೀಲಿ ಬಣ್ಣದ ಪಲಾಜೋ ಎಲ್ಲರ ಗಮನ ಸೆಳೆಯುವುದು.
ನವರಾತ್ರಿಯ 8 ನೇ ದಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಲಾಗುತ್ತದೆ.
ನವರಾತ್ರಿಯ 9 ನೇ ದಿನ ನೇರಳೆ ಬಣ್ಣದ ಬಟ್ಟೆ ಧರಿಸಲಾಗುತ್ತದೆ.