ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಸಿಗುವ ಆರೋಗ್ಯ ಪ್ರಯೋಜನಗಳೇನು?

Bhavishya Shetty
Oct 01,2023

ಮೆಟ್ಟಿಲು vs ಲಿಫ್ಟ್

ಮೆಟ್ಟಿಲುಗಳಿಗೆ ಪರ್ಯಾಯವಾಗಿ ಬಂದಿರುವ ಎಲಿವೇಟರ್ ಅಥವಾ ಲಿಫ್ಟ್’ಗಳನ್ನು ಇತ್ತೀಚಿನ ದಿನಗಳಲ್ಲಿ ಯುವಜನತೆ ಅತಿಯಾಗಿ ಬಳಕೆ ಮಾಡುತ್ತಿರುವ ಯಂತ್ರ ಎಂದೇ ಹೇಳಬಹುದು.

ಅಪಾರ ಪ್ರಯೋಜನ

ಆದರೆ ಲಿಫ್ಟ್’ಗಳ ಬದಲಾಗಿ ಮೆಟ್ಟಿಲುಗಳನ್ನು ಹತ್ತಲು ಬಳಸಿದರೆ, ಆರೋಗ್ಯಕ್ಕೆ ಅಪಾರ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಈ ಬಗ್ಗೆ ನಾವಿಂದು ಮಾಹಿತಿಯನ್ನು ನೀಡಲಿದ್ದೇವೆ.

ಸ್ನಾಯುಗಳಿಗೆ ಬಲ

ಮೆಟ್ಟಿಲುಗಳನ್ನು ಹತ್ತುವುದರಿಂದ ಸ್ನಾಯುಗಳಿಗೆ ಬಲ ಸಿಗುತ್ತದೆ. ಜೊತೆಗೆ ಹೃದಯ ರಕ್ತನಾಳದ ಆರೋಗ್ಯವು ಸುಧಾರಿಸಲು ಇದು ಉತ್ತಮ ಮಾರ್ಗ ಎಂದು ಕೆಲವು ಅಧ್ಯಯನಗಳು ತಿಳಿಸಿವೆ.

ರಕ್ತ ಪಂಪ್ ಮಾಡಲು

ಮೆಟ್ಟಿಲುಗಳನ್ನು ಹತ್ತುವಾಗ ನಮ್ಮ ದೇಹದಲ್ಲಿ ಹೃದಯವು ರಕ್ತವನ್ನು ಹೆಚ್ಚು ವೇಗವಾಗಿ ಪಂಪ್ ಮಾಡಲು ಪ್ರಾರಂಭಿಸುತ್ತದೆ

ರಕ್ತ ಸಂಚಾರ

ಮೆಟ್ಟಿಲುಗಳನ್ನು ಹತ್ತುವಾಗ ಕಾಲಿನ ಸ್ನಾಯುಗಳಿಗೂ ರಕ್ತ ಸಂಚಾರ ಹೆಚ್ಚಾಗುತ್ತದೆ.

ಆಮ್ಲಜನಕ ವರ್ಗಾಯಿಸಲು...

ಅಷ್ಟೇ ಅಲ್ಲದೆ, ಮೆಟ್ಟಿಲು ಹತ್ತಿ ಇಳಿಯುವುದರಿಂದ ನಿಮ್ಮ ಶ್ವಾಸಕೋಶಗಳು ಗಾಳಿಯಿಂದ ಆಮ್ಲಜನಕವನ್ನು ಹೊರತೆಗೆಯಲು ಮತ್ತು ನಿಮ್ಮ ರಕ್ತಕ್ಕೆ ವರ್ಗಾಯಿಸಲು ಹೆಚ್ಚು ಶ್ರಮಿಸುತ್ತವೆ.

ಕ್ಯಾಲರಿ ಬರ್ನ್

ಜಾಗಿಂಗ್ ಮಾಡುವುದಕ್ಕಿಂತಲೂ ವೇಗವಾಗಿ ಕ್ಯಾಲರಿಗಳನ್ನು ಬರ್ನ್ ಮಾಡಲು ಈ ವಿಧಾನ ಬೆಸ್ಟ್ ಎಂದು ಕೆಲವು ಅಧ್ಯಯನಗಳು ಹೇಳಿವೆ.


(ಸೂಚನೆ: ಮೆಟ್ಟಿಲು ಹತ್ತಿ ಇಳಿಯುವಾಗ ಉಸಿರಾಟ ತೊಂದರೆಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.)

VIEW ALL

Read Next Story