1. ಬೆಳ್ಳುಳ್ಳಿ ಮಳೆಗಾಲದ ಋತುವಿಯನಲ್ಲಿ ಅತಿ ಹೆಚ್ಚು ಬಳಸಲಾಗುತ್ತದೆ. ಗಂಟಲು ಮತ್ತು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ
2. ಬೆಳ್ಳುಳ್ಳಿಯಲ್ಲಿ ಆಂಟಿಸೇಪ್ಟಿಕ್ ಗುಣಗಳಿರುತ್ತವೆ, ಹೊಟ್ಟೆಯಲ್ಲಿ ಹುಳುವಿನ ಸಮಸ್ಯೆ ಇದ್ದಾಗ, ಹಸಿ ಬೆಳ್ಳುಳ್ಳಿ ಸೇವನೆಯಿಂದ ಆರಾಮ ಸಿಗುತ್ತದೆ.
3. ನೆಗಡಿ, ಕೆಮ್ಮು, ಕಫ ಇತ್ಯಾದಿ ಸಮಸ್ಯೆಗಳಲ್ಲಿ ಬೆಳ್ಳುಳ್ಳಿ ಬೇಗ ಉಪಶಮನ ನೀಡುತ್ತದೆ.
4. ಬೆಳ್ಳುಳ್ಳಿಯಲ್ಲಿಯೂ ಕೂಡ ಎಫ್ರೋಡಿಸಿಯಕ್ ಕಂಡುಬರುತ್ತದೆ. ಲೈಂಗಿಕ ಇಚ್ಛೆಯನ್ನು ಹೆಚ್ಚಿಸುವ ಕೆಲಸ ಇದು ಮಾಡುತ್ತದೆ.
5. ಬೆಳ್ಳುಳ್ಳಿಯಲ್ಲಿ ಎಲಿಸಿನ್ ಹೆಸರಿನ ಪದಾರ್ಥ ಇರುತ್ತದೆ. ಇದು ಪುರುಷರಲ್ಲಿ ಮೇಲ್ ಹಾರ್ಮೋನ್ ಅನ್ನು ಸಕ್ರೀಯಗೊಳಿಸುತ್ತದೆ.
6. ಬೆಳ್ಳುಳ್ಳಿ ಬಳಕೆಯಿಂದ ಪುರುಷರಲ್ಲಿ ಎರೆಕ್ಟೈಲ್ ಡಿಸ್ಫಂಕ್ಷನ್ ಸಮಸ್ಯೆಯ ಅಪಾಯ ಕೂಡ ದೂರಾಗುತ್ತದೆ.
7. ಬೆಳ್ಳುಳ್ಳಿಯಲ್ಲಿ ಭಾರಿ ಪ್ರಮಾಣದಲ್ಲಿ ವಿಟಮಿನ್ ಗಳು ಹಾಗೂ ಸೇಲೆನಿಯಮ್ ಗಳು ಕಂಡುಬರುತ್ತವೆ. ಅವುಗಳಿಂದ ವೀರ್ಯಾಣುಗಳ ಗುಣಮಟ್ಟ ಸುಧಾರಿಸುತ್ತದೆ.
8. ಒಂದು ದಿನದಲ್ಲಿ ನಾವು 4 ಗ್ರಾಂ ಹಸಿ ಬೆಳ್ಳುಳ್ಳಿ ಅಂದರೆ ಒಂದರಿಂದ ಎರಡು ಕುಡಿಗಳನ್ನು ಸೇವಿಸಬೇಕು. ಕರ್ರಿ ಮಾಡುವಾಗಲೂ ಕೂಡ 5 ರಿಂದ 7 ಬೆಳ್ಳುಳ್ಳಿ ಕುಡಿಗಳನ್ನು ಬಳಸಬೇಕು.
9. ಬೆಳ್ಳುಳ್ಳಿಯಲ್ಲಿ ಹಲವು ರೀತಿಯ ಔಷಧೀಯ ಗುಣಗಳಿರುತ್ತವೆ. ರೋಗಗಳಿಂದ ಉಪಶಮನ ನೀಡುವ ಕೆಲಸವನ್ನು ಅವು ಮಾಡುತ್ತವೆ.
10. ಹಾಗೆ ನೋಡಿದರೆ ನೀವು ಅದನ್ನು ಯಾವಾಗ ಬೇಕಾದರೂ ಸೇವಿಸಬಹುದು. ಆದರೆ, ಖಾಲಿ ಹೊಟ್ಟೆ ಸೇವಿಸುವುದು ಹೆಚ್ಚು ಲಾಭಕಾರಿಯಾಗಿದೆ. ಹೀಗಾಗಿ ಬೆಳಗ್ಗೆ ಎದ್ದು 2 ಕುಡಿಗಳನ್ನು ತಿನ್ನುವುದು ಲೇಸು.