ಸೂರ್ಯ ದೇವರು

ಭಾನುವಾರ ಸೂರ್ಯ ದೇವರ ಆರಾಧನೆಯ ದಿನ. ಈ ದಿನ ಭಕ್ತಿಯಿಂದ ಪೂಜೆ ಮಾಡುವುದರಿಂದ ಜೀವನದಲ್ಲಿ ಯಶಸ್ಸು ಸಿಗುತ್ತದೆ.

ನಷ್ಟ ಉಂಟಾಗುತ್ತದೆ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಭಾನುವಾರದಂದು ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಈ ವಿಷಯಗಳ ಬಗ್ಗೆ ಕಾಳಜಿ ವಹಿಸದಿದ್ದರೆ ಯಾವುದೇ ವ್ಯಕ್ತಿಯು ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಸೂರ್ಯದೇವರ ಆಶೀರ್ವಾದ

ಜ್ಯೋತಿಷ್ಯವು ಭಾನುವಾರದಂದು ಕೆಲವು ಪರಿಹಾರಗಳನ್ನು ಉಲ್ಲೇಖಿಸಿದೆ. ಅದನ್ನು ಮಾಡುವ ಮೂಲಕ ವ್ಯಕ್ತಿಯು ಸೂರ್ಯದೇವರ ಆಶೀರ್ವಾದ ಪಡೆಯುತ್ತಾರೆ.

ಪ್ರಗತಿಗೆ ದಾರಿ

ಭಾನುವಾರ ಸೂರ್ಯದೇವರ ಆರಾಧನೆಯ ದಿನ. ಈ ದಿನದ ವಿಶೇಷ ಪೂಜೆ ಮತ್ತು ಕ್ರಮಗಳು ವ್ಯಕ್ತಿಯ ಪ್ರಗತಿಗೆ ದಾರಿ ತೆರೆಯುತ್ತದೆ.

ಸೂರ್ಯದೇವರಿಗೆ ಕೋಪ

ಸೂರ್ಯದೇವರಿಗೆ ಕೋಪ ತರುವಂತಹ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.

ಕಪ್ಪು & ನೀಲಿ ಬಟ್ಟೆ

ಭಾನುವಾರದಂದು ಬಟ್ಟೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಈ ದಿನ ಅಪ್ಪಿತಪ್ಪಿಯೂ ಕಪ್ಪು ಮತ್ತು ನೀಲಿ ಬಟ್ಟೆಗಳನ್ನು ಧರಿಸಬಾರದು. ಇದರಿಂದ ಸೂರ್ಯದೇವನಿಗೆ ಕೋಪ ಬರುತ್ತದೆ.

ತಾಮ್ರ ಮಾರಾಟ

ಭಾನುವಾರದಂದು ವ್ಯಕ್ತಿ ಅಪ್ಪಿತಪ್ಪಿಯೂ ತಾಮ್ರವನ್ನು ಮಾರಾಟ ಮಾಡಬಾರದು. ಇದರಿಂದ ವ್ಯಕ್ತಿಯ ಜಾತಕದಲ್ಲಿ ಸೂರ್ಯನು ದುರ್ಬಲನಾಗುತ್ತಾನೆ.

ಪಶ್ಚಿಮ ದಿಕ್ಕು

ಭಾನುವಾರದಂದು ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ಪ್ರಯಾಣಿಸಬಾರದು. ಈ ರೀತಿ ಮಾಡುವುದು ತುಂಬಾ ಅಶುಭವೆಂದು ಪರಿಗಣಿಸಲಾಗಿದೆ.

ಮನೆ ನಿರ್ಮಾಣದ ಸಾಮಗ್ರಿ

ಭಾನುವಾರ ಕೆಲವು ವಸ್ತುಗಳನ್ನು ಖರೀದಿಸಬಾರದು. ನೀವು ಮನೆ ನಿರ್ಮಿಸುತ್ತಿದ್ದರೆ ಮನೆ ನಿರ್ಮಾಣದ ಸಾಮಗ್ರಿಗಳನ್ನು ಖರೀದಿಸಬಾರದು. ಇದರಿಂದ ಕೆಲಸದಲ್ಲಿ ಅಡೆತಡೆಗಳು ಉಂಟಾಗುತ್ತವೆ.

ನಾನ್‌ವೆಜ್‌ ತಿನ್ನಬಾರದು

ಭಾನುವಾರ ಯಾವುದೇ ಕಾರಣಕ್ಕೂ ನಾನ್‌ವೆಜ್‌ ತಿನ್ನಬಾರದು ಯಾರಾದರೂ ಹೀಗೆ ಮಾಡಿದರೆ ಅವರ ಜಾತಕದಲ್ಲಿ ಸೂರ್ಯನು ದುರ್ಬಲನಾಗುತ್ತಾನೆ.

VIEW ALL

Read Next Story