ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡೇಶ್ವರಿ ವರ್ಧಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.
ಈ ವರ್ಷ ಚಾಮುಂಡೇಶ್ವರಿ ವರ್ಧಂತಿಯನ್ನು 2023ರ ಜುಲೈ 10ರಂದು ಸೋಮವಾರ ಆಚರಿಸಲಾಗುತ್ತಿದೆ.
ಶಕ್ತಿ ಪೀಠಗಳಲ್ಲಿ ಒಂದಾದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಇಂದು ವಿಶೇಷ ಪೂಜೆ ನೆರವೇರಿತು.
ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಚಾಮುಂಡೇಶ್ವರಿ ವರ್ಧಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾತ್ರವಲ್ಲ, ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇಗುಲದಲ್ಲಿಯೂ ಇಂದು ವಿಶೇಷ ಪೂಜೆ ನೆರವೇರಿತು.
ಶ್ರೀರಂಗಪಟ್ಟಣದ ಚಾಮುಂಡೇಶ್ವರಿ ದೇಗುಲದಲ್ಲಿ ನಾನಾ ಬಗೆಯ ಹೂವು, ತರಕಾಗಿಗಳಿಂದ ತಾಯಿಯ ಮಂದಿರವನ್ನು ಅಲಂಕರಿಸಲಾಗಿತ್ತು.
ತಾಯಿ ಚಾಮುಂಡೇಶ್ವರಿ ದೇವಿಗೆ ಶಾಕಾಂಬರಿ ಅಲಂಕಾರ ಮಾಡಲಾಗಿತ್ತು.
ಹಲವು ಬಗೆಯ ತರಕಾರಿ, ಹಲವು ಬಗೆಯ ಹೂ ಬಳಸಿ ದೇಗುಲದ ಗರ್ಭಗುಡಿ ಮತ್ತು ಪ್ರಾಂಗಣದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ತಾಯಿ ಚಾಮುಂಡೇಶ್ವರಿ ವರ್ಧಂತಿ ಹಿನ್ನಲೆಯಲ್ಲಿ ತಾಯಿಯ ದಿನದ ವಿಶೇಷ ಅಲಂಕಾರ ನೋಡಲು ಭಕ್ತರ ದಂಡೇ ಆಗಮಿಸಿತ್ತು.
ದರ್ಶನಕ್ಕೆ ಬಂದ ಭಕ್ತರಿಗೆ ದೇಗಲದಲ್ಲಿ ಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.