ಆರ್ಥಿಕ ಸಂಕಷ್ಟ

ಶನಿ ದೋಷವಿರುವ ವ್ಯಕ್ತಿಗೆ ಇದ್ದಕ್ಕಿದ್ದಂತೆ ದೈಹಿಕ ಕಾಯಿಲೆ ಮತ್ತು ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ.

Puttaraj K Alur
Oct 16,2024

ಒತ್ತಡ ಹೆಚ್ಚಾಗುತ್ತದೆ

ಶನಿ ದೋಷ ಸಂಭವಿಸಿದ ತಕ್ಷಣ ವ್ಯಕ್ತಿಯ ಜೀವನದಲ್ಲಿ ಇದ್ದಕ್ಕಿದ್ದಂತೆ ಕೆಲಸದ ಹೊರೆ ಮತ್ತು ಒತ್ತಡ ಹೆಚ್ಚಾಗುತ್ತದೆ.

ಅಶುಭ ಪರಿಣಾಮ

ಶನಿಯು ಜಾತಕದಲ್ಲಿದ್ದಾಗ ಶೀಘ್ರವೇ ಅಶುಭ ಪರಿಣಾಮ ನೀಡಲು ಪ್ರಾರಂಭಿಸುತ್ತದೆ. ಇದರಿಂದ ವ್ಯಕ್ತಿಯು ಹೆಚ್ಚು ಕೋಪಗೊಳ್ಳಲು ಪ್ರಾರಂಭಿಸುತ್ತಾನೆ. ಧಾರ್ಮಿಕ ಕೆಲಸ ಮಾಡಬೇಕೆಂದು ಅನಿಸುವುದಿಲ್ಲ & ಆ ವ್ಯಕ್ತಿ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾನೆ.

ಗೌರವಕ್ಕೆ ಚ್ಯುತಿ

ಶನಿಯ ದುಷ್ಪರಿಣಾಮಗಳಿಂದ ವ್ಯಕ್ತಿಯು ಸುಳ್ಳು ಅಥವಾ ವಂಚನೆ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಾನೆ. ಇದರಿಂದ ಸಮಾಜದಲ್ಲಿ ಆತನ ಗೌರವಕ್ಕೆ ಚ್ಯುತಿ ಬರುತ್ತದೆ.

ಉದ್ಯೋಗದಲ್ಲಿ ಸಮಸ್ಯೆ

ಶನಿಯ ಅಶುಭ ಪ್ರಭಾವದಿಂದ ಉದ್ಯೋಗದಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆ ವ್ಯಕ್ತಿಯ ಕೆಲಸ ಕಳೆದುಹೋಗುತ್ತದೆ ಅಥವಾ ಪ್ರಗತಿ ನಿಲ್ಲುತ್ತದೆ.

ಸಾಸಿವೆ ಎಣ್ಣೆ

ಶನಿ ದೋಷವನ್ನು ಕಡಿಮೆ ಮಾಡಲು ಶನಿವಾರ ಶನಿದೇವನಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಬೇಕು. ಸಾಸಿವೆ ಎಣ್ಣೆಯ ದೀಪ ಹಚ್ಚಿ ಭಕ್ತಿಯಿಂದ ಪ್ರಾರ್ಥಿಸಬೇಕು.

ದಾನ ಮಾಡಬೇಕು

ಶನಿವಾರ ಶನಿದೋಷದ ಅಶುಭ ಪರಿಣಾಮವನ್ನ ಕಡಿಮೆ ಮಾಡಲು ಕಬ್ಬಿಣದ ವಸ್ತುಗಳು, ಕಪ್ಪು ಬಟ್ಟೆ, ಉಂಡೆ, ಸಾಸಿವೆ ಎಣ್ಣೆ & ಪಾದರಕ್ಷೆ ಇತ್ಯಾದಿಗಳನ್ನು ದಾನ ಮಾಡಬೇಕು.

ಮೀನಿಗೆ ಹಿಟ್ಟು

ಶನಿವಾರ ಮೀನಿಗೆ ಹಿಟ್ಟು ತಿನ್ನಿಸುವುದರಿಂದ ಶನಿದೋಷವು ನಿವಾರಣೆಯಾಗುತ್ತದೆ ಎಂದು ನಂಬಲಾಗಿದೆ.

ಅಶ್ವತ್ಥ ಮರಕ್ಕೆ ನೀರು

ಶನಿವಾರ ಬೆಳಗ್ಗೆ ಅಶ್ವತ್ಥ ಮರಕ್ಕೆ ನೀರನ್ನು ಅರ್ಪಿಸಬೇಕು ಮತ್ತು ಸಂಜೆ ಎಳ್ಳು ಅಥವಾ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಬೇಕು. ಸ್ವಲ್ಪ ಕಪ್ಪು ಎಳ್ಳನ್ನೂ ದೀಪಕ್ಕೆ ಹಾಕಬೇಕು.

VIEW ALL

Read Next Story