ಗ್ರಹಗಳು ಶುಭ ಮತ್ತು ಅಶುಭ ಫಲ ನೀಡುವ ಹಿಂದೆ ಬೇರೆ ಬೇರೆ ಕಾರಣಗಳಿರುತ್ತವೆ. ಅವುಗಳಲ್ಲಿ ವ್ಯಕ್ತಿಯ ಅಭ್ಯಾಸಗಳು ಕೂಡಾ ಸೇರಿವೆ.
ಪ್ರತಿ ಕೆಲಸದಲ್ಲಿಯೂ ಸೋಮಾರಿತನ ತೋರಿದರೆ ಶನಿ ದೇವನಿಗೆ ಕೋಪ ಬಂದು ಜಾತಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಬೇರೆಯವರನ್ನು ಅವಮಾನಿಸಿದರೆ, ತೊಂದರೆ ನೀಡಿದರೆ ರಾಹು ಕೆಟ್ಟ ಪರಿಣಾಮವನ್ನು ಬೀರುತ್ತಾನೆ.
ಮನೆ, ದೇವರಕೋಣೆ ಮತ್ತು ಅಡುಗೆ ಮನೆಯಲ್ಲಿ ಶುಚಿತ್ವ ಕಾಪಾಡದೇ ಹೋದರೆ ಲಕ್ಷ್ಮೀ, ಅನ್ನಪೂರ್ಣೆಯ ಕೋಪಕ್ಕೆ ಕಾರಣವಾಗುತ್ತದೆ.
ಗಿಡ ಮರಗಳಿಗೆ ಹಾನಿ ಮಾಡಿದರೆ ನವ ಗ್ರಹಗಳು ಕೂಡಾ ಸಿಟ್ಟಾಗುತ್ತವೆ.
ವಿನಾ ಕಾರಣ ತಡ ರಾತ್ರಿವರೆಗೆ ಎಚ್ಚರವಾಗಿದ್ದರೆ ಚಂದ್ರನ ಮೇಲೆ ಪರಿಣಾಮ ಬೀರುತ್ತದೆ.
ಎಲ್ಲೆಂದರಲ್ಲಿ ಉಗುಳುವ ಅಭ್ಯಾಸವಿದ್ದರೆ ಸೂರ್ಯ ದೋಷವನ್ನು ಉಂಟು ಮಾಡುತ್ತದೆ.
ಪದೇ ಪದೇ ಉಗುರು ಕಚ್ಚುವ ಅಭ್ಯಾಸ ಜಾತಕದಲ್ಲಿ ರಾಹು ಮತ್ತು ಶನಿಯನ್ನು ದುರ್ಬಲಗೊಳಿಸುತ್ತದೆ.
ಹೀಗೆ ನಮ್ಮ ಕೆಲವು ಅಭ್ಯಾಸಗಳೇ ಜಾತಕ ದೋಷಕ್ಕೆ ಕಾರಣವಾಗಿರುತ್ತವೆ.