ಧಾರ್ಮಿಕ ನಂಬಿಕೆಗಳ ಪ್ರಕಾರ, ಮನೆಯಲ್ಲಿ ತುಳಸಿ ಹಚ್ಚಹಸಿರಾಗಿ ಸಮೃದ್ಧಿಯಿಂದ ಬೆಳೆದರೆ ಅಲ್ಲಿ ಸಂಪತ್ತಿನ ಕೊರತೆ ಇರುವುದಿಲ್ಲ. ಅಂತಹ ಮನೆಯಲ್ಲಿ ಮಹಾಲಕ್ಷ್ಮೀ ನೆಲೆಸುತ್ತಾಳೆ ಎಂಬ ನಂಬಿಕೆ ಇದೆ.
ಎಷ್ಟೇ ಕಾಳಜಿ ವಹಿಸಿದರೂ, ಚಳಿಗಾಲದಲ್ಲಿ ತುಳಸಿ ಸಸ್ಯ ಬೇಗ ಒಣಗುತ್ತದೆ. ಇದನ್ನು ತಪ್ಪಿಸಲು ಕೆಲವು ಸಿಂಪಲ್ ಟ್ರಿಕ್ಸ್ ಸಹಕಾರಿ ಆಗಿದೆ.
ಚಳಿಗಾಲದಲ್ಲಿ ತುಳಸಿ ಸಸ್ಯಕ್ಕೆ ತಣ್ಣೀರು ಹಾಕುವ ಬದಲಿಗೆ ಉಗುರು ಬೆಚ್ಚಗಿನ ನೀರು ಹಾಕಿ. ಇದರಿಂದ ತುಳಸಿ ಸಸ್ಯ ಒಣಗುವುದಿಲ್ಲ.
ಚಳಿಗಾಲದಲ್ಲಿ ಬೇರಿನ ಸುತ್ತಲೂ ವಾರಕ್ಕೆರಡು ಬಾರಿ ಆದರೂ ಮಣ್ಣನ್ನು ಸಡಿಲಗೊಳಿಸಿ.
ಹೂವಿನ ಕುಂಡದಲ್ಲಿ (ಸ್ವಲ್ಪ ದೊಡ್ಡದಾಗಿದ್ದರೆ ಉತ್ತಮ) ಮಣ್ಣಿನೊಂದಿಗೆ ಸ್ವಲ್ಪ ಮರಳು ಮಿಶ್ರಣ ಮಾಡಿ ಅದರಲ್ಲಿ ತುಳಸಿ ಸಸ್ಯವನ್ನು ನೆಡಿ.
ಸಸ್ಯ ಬೆಳವಣಿಗೆಗೆ ನೀರು ಅವಶ್ಯಕ. ಆದರೆ, ಚಳಿಗಾಲದಲ್ಲಿ ಹೆಚ್ಚು ನೀರು ಹಾಕಿದರೆ ಸಸ್ಯ ಬೇರಿನಿಂದಲೇ ಕೊಳೆಯುತ್ತದೆ. ಹಾಗಾಗಿ ಅನಗತ್ಯವಾಗಿ ನೀರು ಹಾಕುವುದನ್ನು ತಪ್ಪಿಸಿ.
ಚಳಿಗಾಲದಲ್ಲಿ ಅತಿಯಾದ ಹಿಮ, ಇಬ್ಬರಿಯಿಂದಾಗಿ ತುಳಸಿ ಗಿಡ ಒಣಗುತ್ತದೆ. ಇದನ್ನು ತಪ್ಪಿಸಲು ತುಳಸಿ ಸಸ್ಯಕ್ಕೆ ಒಂದು ಕೆಂಪು ಬಗ್ಗೆಯನ್ನು ಸುತ್ತಿ.
ಕೆಲವರು ತುಳಸಿ ಸೋಂಪಾಗಿ ಬೆಳೆಯಲಿ ಎನ್ನುವ ಉದ್ದೇಶದಿಂದ ಯೂರಿಯಾದಂತಹ ಗೊಬ್ಬರ ಬಳಸುತ್ತಾರೆ. ಆದರೆ, ತುಳಸಿ ಸಸ್ಯಕ್ಕೆ ಗೊಬ್ಬರ ಬಳಸುವುದೇ ಆದರೆ, ಸಾವಯವ ಗೊಬ್ಬರವನ್ನು ಮಾತ್ರ ಬಳಸಿ.