ಶನಿ ಎಂದರೆ ಕರ್ಮಫಲದಾತ ಎಂದು ಹೇಳಲಾಗುತ್ತದೆ. ನ್ಯಾಯದ ದೇವರು, ಛಾಯಾಪುತ್ರ ಎಂಬೆಲ್ಲಾ ನಾಮಾಂಕಿತನಾದ ಈ ಗ್ರಹವು, ವ್ಯಕ್ತಿಯು ಮಾಡುವ ಕರ್ಮದ ಅನುಸಾರ ಫಲಗಳನ್ನು ನೀಡುತ್ತಾನೆ ಎಂದು ಜೋತಿಷ್ಯ ಹೇಳುತ್ತದೆ.

Bhavishya Shetty
Jul 14,2023


ಇನ್ನು ಅನೇಕ ಜನರು ಶನಿದೋಷ ನಿವಾರಣೆಗೆಂದು ಅನೇಕ ಪೂಜೆಗಳನ್ನು ಮಾಡುತ್ತಾರೆ. ಆದರೆ ನಾವಿಂದು ಹೇಳಹೊರಟಿರುವ ಈ ಐದು ದೇವಾಲಯಗಳಿಗೆ ಭೇಟಿ ನೀಡಿದರೆ ಶನಿದೋಷ ನಿವಾರಣೆಯಾಗುತ್ತದೆ.


ಮೊದಲನೇ ದೇವಾಲಯ ಮಹಾರಾಷ್ಟ್ರದಲ್ಲಿದೆ. ಶನಿ ಶಿಗ್ನಾಪುರ ಎಂಬ ದೇವಾಲಯಕ್ಕೆ ಒಮ್ಮೆ ಭೇಟಿ ಕೊಟ್ಟರೆ ಸಾಕು ಎಲ್ಲಾ ಶನಿದೋಷಗಳು ಒಂದೇ ದಿನದಲ್ಲಿ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆ ಇದೆ.


ದೆಹಲಿಯ ಶನಿಧಾಮದಲ್ಲಿ ಜಗತ್ತಿನಲ್ಲೇ ಅತಿ ಎತ್ತರದ ಶನಿದೇವರ ಪ್ರತಿಮೆ ಇದೆ. ಇಲ್ಲಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿದರೆ ಸಾಡೇಸಾತಿ ದೋಷದಿಂದ ಮುಕ್ತಿ ಸಿಗುತ್ತದೆ ಎಂದು ಹೇಳಲಾಗುತ್ತದೆ.


ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಕೃಷ್ಣ ಎಂಬ ಗ್ರಾಮದಲ್ಲಿ ಕೋಕಿಲ ಧಾಮವಿದೆ. ಇಲ್ಲಿಗೆ ಸಾಸಿವೆ ಎಣ್ಣೆಯನ್ನು ಅರ್ಪಿಸಿದರೆ ಸಾಡೇಸಾತಿ ಹಾಗೂ ಶನಿದೆಸೆಗೆ ಮುಕ್ತಿ ಸಿಗುತ್ತದೆ.


ತಮಿಳುನಾಡಿನ ತಿರುನಲ್ಲಾರು ದೇವಸ್ಥಾನ ತಂಜಾವೂರು ಜಿಲ್ಲೆಯಲ್ಲಿದೆ. ಈ ಶನಿ ದೇವಾಲಯಕ್ಕೆ ಭೇಟಿ ನೀಡಿದರೆ ಶನಿದೋಷ ನಿವಾರಣೆ ಆಗುತ್ತದೆ.


ನಮ್ಮ ರಾಜ್ಯದ ತುಮಕೂರು ಜಿಲ್ಲೆಯಲ್ಲಿರುವ ಶನಿ ದೇವಸ್ಥಾನವೂ ಬಹಳ ಪ್ರಸಿದ್ಧವಾಗಿದೆ.

VIEW ALL

Read Next Story