ಟೀಂ ಇಂಡಿಯಾದ ರನ್ ಮೆಷಿನ್ ಎಂದೇ ಖ್ಯಾತಿ ಪಡೆದ ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ಎಂದೂ ಕಾಳಜಿ ವಹಿಸುತ್ತಾರೆ.
ತಮ್ಮ ಫೇವರೇಟ್ ಫುಡ್ ಚೋಲೆ ಭಟೂರೆ ತಿಂದರೂ ಸಹ ಜಿಮ್ ನಲ್ಲಿ ಸತತ ಕೆಲ ಗಂಟೆಗಳ ಕಾಲ ಕಸರತ್ತು ಮಾಡುತ್ತಾರೆ ಕಿಂಗ್ ಕೊಹ್ಲಿ.
ಹೀಗಾಗಿಯೇ ಮೊಸರು, ಡೈರಿ ಉತ್ಪನ್ನಗಳು, ಗೋಧಿ ಹಿಟ್ಟಿನ ಚಪಾತಿಗಳನ್ನು ಕೊಹ್ಲಿ ಸೇವಿಸುವುದಿಲ್ಲ. ಪ್ರತೀ ಆಹಾರವನ್ನು ಸಹ ಸಾಕಷ್ಟು ಎಚ್ಚರಿಕೆಯನ್ನು ವಹಿಸಿ ಸೇವನೆ ಮಾಡುತ್ತಾರೆ.
ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳನ್ನು ಕೊಹ್ಲಿ ಸೇವಿಸುವುದಿಲ್ಲ. ಬದಲಾಗಿ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವ ಆಹಾರ ಸೇವಿಸುತ್ತಾರೆ.
ಅನ್ನ ದೇಹಕ್ಕೆ ಶಕ್ತಿ ತುಂಬುವ ಆಹಾರ ಎನ್ನಬಹುದು. ಆದರೆ ಕೊಹ್ಲಿ ಸಾಮಾನ್ಯವಾಗಿ ಬಳಕೆ ಮಾಡುವ ಅನ್ನವನ್ನು ಸೇವಿಸುವುದಿಲ್ಲ.
ಸಾಮಾನ್ಯ ಅಕ್ಕಿಯಿಂದ ಮಾಡಿದ ಅನ್ನದ ಬದಲು ಸ್ಪೆಷಲ್ ಅನ್ನವನ್ನು ಕೊಹ್ಲಿ ಸೇವಿಸುತ್ತಾರೆ. ಈ ಅಕ್ಕಿ ಗ್ಲುಟನ್ ಮುಕ್ತವಾಗಿರುತ್ತದೆ.
ಆಹಾರ ಸಂಸ್ಕರಣಾ ಘಟಕದಲ್ಲಿ ವಿಶೇಷ ರೀತಿಯಲ್ಲಿ ತಯಾರಿಸಲಾಗುವ, ಕಾರ್ಬೋಹೈಡ್ರೇಟ್ ಗಳಲ್ಲಿ ಕಡಿಮೆ ಮತ್ತು ಸರಳವಾದ ರುಚಿಯನ್ನು ಹೊಂದಿರುವ ಅಕ್ಕಿಯನ್ನು ಸೇವನೆ ಮಾಡುತ್ತಾರೆ.
ಈ ವಿಶೇಷ ಅನ್ನವನ್ನು ಸಾಮಾನ್ಯ ವ್ಯಕ್ತಿ ಮುಟ್ಟೋದು ಕಷ್ಟ. ಏಕೆಂದರೆ ಈ ಅಕ್ಕಿಯ ಬೆಲೆ ಕೆಜಿಗೆ ಸುಮಾರು 400 ರಿಂದ 500 ರೂ.ಇದೆ.