ಜಗತ್ತಿನ ಟಾಪ್ 10 ಸ್ಟೈಲಿಶ್ ಕ್ರಿಕೆಟಿಗರ ಪಟ್ಟಿಯಲ್ಲಿ ಕೆವಿನ್ ಪೀಟರ್ಸನ್ ಅಗ್ರಸ್ಥಾನದಲ್ಲಿದ್ದಾರೆ. ಇವರು ದಕ್ಷಿಣ ಆಫ್ರಿಕಾದ ಕ್ರಿಕೆಟ್ ವಿಮರ್ಶಕರಾಗಿದ್ದಾರೆ.
ಪ್ರಸ್ತುತ ಕ್ರಿಕೆಟ್ ಯುಗದಲ್ಲಿ ವಿರಾಟ್ ಕೊಹ್ಲಿ ಭಾರತ ಮತ್ತು ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ. ಇವರ ಸ್ಟೈಲಿಶ್ ಲುಕ್ ಯಾವ ಹೀರೋಗಳಿಗೂ ಕಮ್ಮಿಯಿಲ್ಲ.
ಕರ್ನಾಟಕದ ಹೆಮ್ಮೆಯ ಪ್ರತಿಭೆ, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ತಮ್ಮ ಉತ್ತಮ ಶೈಲಿಯ ಪ್ರಜ್ಞೆಯಿಂದ ವಿಶ್ವ ಕ್ರಿಕೆಟ್ ನ ಗಮನ ಸೆಳೆದಿದ್ದಾರೆ.
ಆಸ್ಟ್ರೇಲಿಯನ್ ಬೌಲರ್ ಪ್ಯಾಟ್ ಕಮ್ಮಿನ್ಸ್ ಸಖತ್ ಸ್ಟೈಲಿಶ್ ಆಗಿರುವ ಪ್ರತಿಭಾವಂತ ಕ್ರಿಕೆಟಿಗ.
ಮೈಕೆಲ್ ಕ್ಲಾರ್ಕ್ ಆಸ್ಟ್ರೇಲಿಯಾ ತಂಡದ ಅತ್ಯಂತ ಆಕರ್ಷಕ ಪುರುಷರಲ್ಲಿ ಒಬ್ಬರು. ಇವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ
ಆಸ್ಟ್ರೇಲಿಯಾದ ಆಲ್ ರೌಂಡರ್ ಎಲ್ಲಿಸ್ ಪೆರ್ರಿ ಅವರನ್ನು ವಿಶ್ವದ ಅತ್ಯಂತ ಆಕರ್ಷಕ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂದು ಪರಿಗಣಿಸಲಾಗಿದೆ. 27 ವರ್ಷದ ಈಕೆ ಫುಟ್ಬಾಲ್ ಮತ್ತು ಕ್ರಿಕೆಟ್ ನಲ್ಲಿ ತನ್ನ ರಾಷ್ಟ್ರವನ್ನು ಪ್ರತಿನಿಧಿಸುವ ಅಪರೂಪದ ಪ್ರತಿಭೆ ಎನ್ನಬಹುದು.
ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿಶ್ವದ ಅತ್ಯಂತ ಸ್ಟೈಲಿಶ್ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.
ಇಂಗ್ಲೆಂಡ್ ನ ಬೆನ್ ಸ್ಟೋಕ್ಸ್ ಅಗ್ರ ಆಲ್ ರೌಂಡರ್ ಕೂಡ ಹೌದು. ಇವರೂ ಸಹ ಈ ಪಟ್ಟಿಯಲ್ಲಿ 8 ನೇ ಸ್ಥಾನ ಪಡೆದುಕೊಂಡಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಕ್ರಿಸ್ ಗೇಲ್ ತಮ್ಮ ಪ್ರತಿಭೆಯಿಂದಲೇ ಗಮನಸೆಳೆದವರು.
ದಕ್ಷಿಣ ಆಫ್ರಿಕಾದ ಬ್ಯಾಟರ್ ಗಳಲ್ಲಿ ಅತಿ ಹೆಚ್ಚು ಗೆಲುವಿನ ಶೇಕಡಾವಾರು ಹೊಂದಿರುವ ಎಬಿ ಡಿವಿಲಿಯರ್ಸ್, ಕನ್ನಡಿಗರ ಫೇವರೇಟ್ ವಿದೇಶಿ ಕ್ರಿಕೆಟಿಗ ಎನ್ನಬಹುದು. ಆರ್ ಸಿ ಬಿ ಪರ ಎಂದೆಂದೂ ಬೆಂಬಲ ನೀಡುವ ಈ ಕ್ರಿಕೆಟಿಗನಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ