ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗರು

ICC ODI ವಿಶ್ವಕಪ್’ನಲ್ಲಿ ಗರಿಷ್ಠ ಸಂಖ್ಯೆಯ ಸಿಕ್ಸರ್’ಗಳನ್ನು ಬಾರಿಸಿದ ಟಾಪ್ 10 ಬ್ಯಾಟ್ಸ್ಮನ್ಗಳ ವಿವರವನ್ನು ಈ ವರದಿಯಲ್ಲಿ ನೀಡಲಾಗಿದೆ.

ಹೆಚ್ಚು ಸಿಕ್ಸರ್ ಬಾರಿಸಿದ ಕ್ರಿಕೆಟಿಗರು

ಈ ವರದಿಯಲ್ಲಿ ಆಟಗಾರನ ಹೆಸರು, ಕ್ರಿಕೆಟ್ ಆಡಿದ ಅವಧಿ, ಆಡಿದ ಪಂದ್ಯ, ಎಷ್ಟು ಸಿಕ್ಸರ್ ಬಾರಿಸಿದ್ದಾರೆ ಎಂಬ ವಿಚಾರದ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಲಾಗಿದೆ

ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ದೈತ್ಯ ಆಟಗಾರ ಕ್ರಿಸ್ ಗೇಲ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಅವರು 2003ರಿಂದ 2019ತವರೆಗೆ ಆಡಿದ 35 ಪಂದ್ಯಗಳಲ್ಲಿ 49 ಸಿಕ್ಸರ್ ಬಾರಿಸಿದ್ದಾರೆ.

ಎಬಿ ಡಿವಿಲಿಯರ್ಸ್

ದಕ್ಷಿಣಾ ಆಫ್ರಿಕಾ ತಂಡದ ಆಟಗಾರ ಎಬಿ ಡಿವಿಲಿಯರ್ಸ್ ಎರಡನೇ ಸ್ಥಾನದಲ್ಲಿದ್ದು, ಇವರು 2007 ರಿಂದ 2015ರ ಅವಧಿಯಲ್ಲಿ 23 ಪಂದ್ಯಗಳಲ್ಲಿ 37 ಸಿಕ್ಸರ್ ಬಾರಿಸಿದ್ದಾರೆ.

ರಿಕಿ ಪಾಂಟಿಂಗ್

ಆಸ್ಟ್ರೇಲಿಯಾ ಆಟಗಾರ ರಿಕಿ ಪಾಂಟಿಂಗ್ 1996 ರಿಂದ 2011ರ ಅವಧಿಯಲ್ಲಿ ಆಡಿರುವ 46 ಪಂದ್ಯಗಳಲ್ಲಿ 31 ಸಿಕ್ಸರ್’ಗಳನ್ನು ಬಾರಿಸಿದ್ದಾರೆ.

ಬ್ರೆಂಡನ್ ಮೆಕಲಮ್

ನ್ಯೂಜಿಲೆಂಡ್’ನ ಬ್ರೆಂಡನ್ ಮೆಕಲಮ್ 2003 ರಿಂದ 2015 ರವರೆಗೆ ಆಡಿದ 34 ಪಂದ್ಯಗಳಲ್ಲಿ 29 ಸಿಕ್ಸರ್ ಬಾರಿಸಿದ್ದಾರೆ.

ಹರ್ಷಲ್ ಗಿಬ್ಸ್

ಸೌತ್ ಆಫ್ರಿಕಾ ತಂಡದ ಹರ್ಷಲ್ ಗಿಬ್ಸ್ 1999 ರಿಂದ 2007 ರ ಅವಧಿಯಲ್ಲಿ 25 ಪಂದ್ಯಗಳನ್ನಾಡಿದ್ದು, ಅದರಲ್ಲಿ 28 ಸಿಕ್ಸರ್ ಬಾರಿಸಿದ್ದಾರೆ.

ಸಚಿನ್ ತೆಂಡೂಲ್ಕರ್

ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ 1992 ರಿಂದ 2011ರವರೆಗೆ ಆಡಿದ 45 ಪಂದ್ಯಗಳಲ್ಲಿ 27 ಸಿಕ್ಸರ್ ಬಾರಿಸಿದ್ದಾರೆ.

ಸನತ್ ಜಯಸೂರ್ಯ

ಶ್ರೀಲಂಕಾದ ದಿಗ್ಗಜ ಬ್ಯಾಟ್ಸ್’ಮನ್ ಸನತ್ ಜಯಸೂರ್ಯ 1992 ರಿಂದ 2007ರವರೆ 38 ಪಂದ್ಯಗಳನ್ನಾಡಿದ್ದು ಅದರಲ್ಲಿ 27 ಸಿಕ್ಸರ್ ಸಿಡಿಸಿದ್ದಾರೆ.

ಇಯಾನ್ ಮೋರ್ಗಾನ್

ಇಯಾನ್ ಮೋರ್ಗಾನ್ ಇಂಗ್ಲೆಂಡ್ ತಂಡದ ಆಟಗಾರ. ಇವರು 2011 ರಿಂದ 2019ರವರೆಗೆ ಆಡಿದ 21 ಪಂದ್ಯಗಳಲ್ಲಿ 26 ಸಿಕ್ಸರ್ ಬಾರಿಸಿದ್ದಾರೆ

ಸೌರವ್ ಗಂಗೂಲಿ

ಭಾರತದ ಇನ್ನೋರ್ವ ದಿಗ್ಗಜ ಸೌರವ್ ಗಂಗೂಲಿ 1999 ರಿಂದ 2007ರವರೆಗೆ ಆಡಿದ 21 ಪಂದ್ಯಗಳಲ್ಲಿ 25 ಸಿಕ್ಸರ್ ಸಿಡಿಸಿದ್ದಾರೆ.

ಆರನ್ ಫಿಂಚ್

ಆಸ್ಟ್ರೇಲಿಯಾದ ಕ್ರಿಕೆಟಿಗ ಆರನ್ ಫಿಂಚ್ 2015 ರಿಂದ 2019 ಅವಧಿಯಲ್ಲಿ 17 ಪಂದ್ಯಗಳನ್ನಾಡಿದ್ದು 24 ಸಿಕ್ಸರ್ ಬಾರಿಸಿದ್ದಾರೆ.

VIEW ALL

Read Next Story