1. Lip Lock Science: ಮುತ್ತು ಕೊಡುವುದರ ಹಿಂದೆ ಅಡಗಿರುವ ಈ ರಹಸ್ಯ ನಿಮಗೆ ತಿಳಿದೆಯಾ?
2. ಚುಂಬನದ ಹಿಂದೆಯೂ ಕೂಡ ಒಂದು ವಿಜ್ಞಾನ ಇದೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಚುಂಬನ ನೀಡಿದ ಬಳಿಕ ರಾಸಾಯನಿಕಗಳು ಹಾಗೂ ತತ್ವಗಳ ವಿನಿಮಯವಾಗುತ್ತದೆ.
3. ಒಂದು ಮುತ್ತು ಕೇವಲ ಮುತ್ತಾಗಿರುವುದಿಲ್ಲ. ಇದಕ್ಕಾಗಿ ಶರೀರದ 30 ಖಂಡಗಳು ಸಕ್ರೀಯವಾಗುತ್ತವೆ. ಹಾಗಾದರೆ ಬನ್ನಿ ಕಿಸ್ ಹಿಂದೆ ಇರುವ ವಿಜ್ಞಾನವೇನು ತಿಳಿದುಕೊಳ್ಳೋಣ ಬನ್ನಿ.
4. ವಿಜ್ಞಾನಿಗಳ ಪ್ರಕಾರ 10 ಸೆಕೆಂಡ್ ಅವಧಿಯ 'Kiss' ವೇಳೆ 8 ಕೋಟಿ ಬ್ಯಾಕ್ಟೀರಿಯಾಗಳು ಪರಸ್ಪರರ ಶರೀರದಲ್ಲಿ ಪರಸ್ಪರ ವಿನಿಮಯವಾಗುತ್ತವೆ ಎಂದು ಹೇಳಿದರೆ ನೀವೂ ಬೆಚ್ಚಿಬೀಳಬಹುದು.
5. ತುಟಿಗಳು ಶರೀರದ ಅತ್ಯಂತ ಎಕ್ಸ್ಪೋಸ್ದ್ ಅಂಗವಾಗಿದೆ ಮತ್ತು ಇದು ಮನುಷ್ಯರಲ್ಲಿ ಕಾಮದ ಭಾವನೆ ಮೂಡಿಸುತ್ತದೆ. ಮನುಷ್ಯರ ತುಟಿಗಳು ಪ್ರಾಣಿಗಳ ವಿಪರೀತ ಎಂಬಂತೆ ಹೊರಗಡೆ ಚಾಚಿಕೊಂಡಿವೆ.
6. ತುಟಿಗಳಲ್ಲಿ ಸಂವೇದನೆ ಹೆಚ್ಚಿಸುವ ನರಗಳ ಭಡಿಮಾರವೇ ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಈ ನರಗಳ ಸ್ಪರ್ಶ ಮಾತ್ರದಿಂದ ಮೆದುಳಿಗೆ ಸಿಗ್ನಲ್ ತಲುಪಿಸುತ್ತದೆ ಮತ್ತು ಇದರಿಂದ ಸುಖದ ಅನುಭವ ಹೆಚ್ಚಾಗುತ್ತದೆ
7. ಚುಂಬನ ನಮ್ಮ ಮೆದುಳಿನ ಒಂದು ದೊಡ್ಡ ಭಾಗವನ್ನು ಸಕ್ರೀಯಗೊಳಿಸುತ್ತದೆ. ಇದರಿಂದ ಆಕಸ್ಮಿಕವಾಗಿ ನಮ್ಮ ಮೆದುಳು ಸಕ್ರೀಯಗೊಂಡು ಕಾರ್ಯನಿರ್ವಹಿಸಲು ಆರಂಭಿಸುತ್ತದೆ. ಮುಂದೆ ಏನಾಗಲಿದೆ ಎಂಬುದನ್ನು ಮೆದುಳು ಆಲೋಚಿಸಲು ಆರಂಭಿಸುತ್ತದೆ.
8. ಕಿಸ್ ಪ್ರಭಾವದಿಂದ ನಮ್ಮ ಶರೀರದಲ್ಲಿರುವ ಹಾರ್ಮೋನ್ ಗಳು ಹಾಗೂ ನ್ಯೂರೋಟ್ರಾನ್ಸ್ಮೀಟರ್ ಗಳು ಮಿಲ್ ರೀತಿ ತಿರುಗಲಾಂಭಿಸುತ್ತವೆ. ಇದರಿಂದ ನಮ್ಮ ಯೋಜನೆ ಹಾಗೂ ಇಮೊಶನ್ ಮೇಲೆ ಪ್ರಭಾವ ಉಂಟಾಗಲು ಶುರುವಾಗುತ್ತದೆ.
9. ಇಬ್ಬರ ತುಟಿಗಳು ಪರಸ್ಪರ ಸೇರಿದಾಗ 9 ಮಿಲಿಗ್ರಾಂ ನೀರು, 0.7 ಮಿಲಿಗ್ರಾಂ ಪ್ರೋಟೀನ್, 0.18 ಮಿಲಿಗ್ರಾಂ ಆರ್ಗ್ಯಾನಿಕ್ ಕಂಪೌಂಡ್ ಗಳು, 0.71 ಮಿಲಿಗ್ರಾಂ ವಿವಿಧ ರೀತಿಯ ಫ್ಯಾಟ್ ಗಳು ಹಾಗೂ 0.45 ಮಿಲಿಗ್ರಾಂ ಸೋಡಿಯಂ ಕ್ಲೋರೈಡ್ ಗಳು ವಿನಿಮಯಗೊಳ್ಳುತ್ತವೆ.
10. ಶರೀರದ ಕ್ಯಾಲೋರಿ ಬರ್ನ್ ಮಾಡುವ ಕೆಲಸ ಕೂಡ ಕಿಸ್ ಮಾಡುತ್ತದೆ. ಕಿಸ್ ಮಾಡುವ ಜೋಡಿ ನಿಮಿಷಕ್ಕೆ 2 ರಿಂದ 26 ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಈ ಸುಖದ ಅನುಭವದ ವೇಳೆ ಸುಮಾರು 30 ವಿವಿಧ ರೀತಿಯ ಖಂಡಗಳ ಬಳಕೆಯಾಗುತ್ತವೆ.