ಇವು ರೈಲು ಸಾರಿಗೆ ಇಲ್ಲದ ದೇಶಗಳು!

ಕುವೈತ್

ಕುವೈತ್ ಸಮೃದ್ದ ದೇಶವಾಗಿದ್ದರೂ, ರಸ್ತೆ ಸಾರಿಗೆಯು ಪ್ರಾಬಲ್ಯ ಹೊಂದಿದೆ. ಇಲ್ಲಿಯವರೆಗೆ ಯಾವುದೇ ರೈಲು ಸೇವೆ ಇಲ್ಲ. ಆದಾಗ್ಯೂ, ಕುವೈತ್‌ನಿಂದ ಓಮನ್‌ಗೆ ರೈಲು ಮಾರ್ಗವನ್ನು ನಿರ್ಮಿಸುವ ಯೋಜನೆ ಇದೆ.

ಮೊನಾಕೊ

ಮೊನಾಕೊದ ಭೂದೃಶ್ಯವು ಸಂಪೂರ್ಣವಾಗಿ ನಗರೀಕರಣಗೊಂಡಿರುವುದರಿಂದ ರೈಲ್ವೆ ನಿರ್ಮಾಣವು ಸವಾಲಾಗಿದೆ. ಅಲ್ಲಿನ ಜನರು ಬಸ್ ಮತ್ತು ಟ್ಯಾಕ್ಸಿಗಳಂತಹ ರಸ್ತೆ ಸಾರಿಗೆಯನ್ನು ಅವಲಂಬಿಸಿದ್ದಾರೆ.

ಯೆಮೆನ್

ಯೆಮೆನ್‌ನ ಆರ್ಥಿಕ ಸಮಸ್ಯೆಗಳಿಂದಾಗಿ ರೈಲು ಜಾಲವು ಕಾರ್ಯಸಾಧ್ಯವಾಗಿಲ್ಲ. ಸರಕು ಮತ್ತು ಜನರ ಸಾಗಣೆಗಾಗಿ ದೇಶವು ಸಂಪೂರ್ಣವಾಗಿ ರಸ್ತೆ ಸಾರಿಗೆಯ ಮೇಲೆ ಅವಲಂಬಿತವಾಗಿದೆ.

ಐಸ್ಟ್ಯಾಂಡ್

ಹಿಮನದಿಗಳಿಗೆ ಹೆಸರುವಾಸಿಯಾದ ಐಸ್‌ಲ್ಯಾಂಡ್‌ನಲ್ಲಿ ಯಾವುದೇ ರೈಲು ಸಾರಿಗೆ ಇಲ್ಲ. ಸಣ್ಣ ಜನಸಂಖ್ಯೆ ಮತ್ತು ಸವಾಲಿನ ಭೂಪ್ರದೇಶವು ರೈಲ್ವೇ ನಿರ್ವಹಣೆಯನ್ನು ಸವಾಲಾಗಿ ಒಡ್ಡಿದೆ.

ಪಪುವಾ ನ್ಯೂ ಗಿನಿಯಾ

ದಟ್ಟವಾದ ಕಾಡುಗಳಿಂದಾಗಿ ಪಪುವಾ ನ್ಯೂಗಿನಿಯಾ ರೈಲುಮಾರ್ಗಗಳನ್ನು ನಿರ್ಮಿಸುವುದು ಕಷ್ಟಕರವಾಗಿದೆ. ಅಲ್ಲಿನ ಜನರು ಹೆಚ್ಚಾಗಿ ವಾಯು ಮತ್ತು ಸಮುದ್ರ ಸಾರಿಗೆಯನ್ನು ಅವಲಂಬಿಸಿದ್ದಾರೆ.

ಭೂತಾನ್

ಪೂರ್ವ ಹಿಮಾಲಯದಲ್ಲಿ ನೆಲೆಗೊಂಡಿರುವ ಭೂತಾನ್‌ನ ಎತ್ತರದ ಪರ್ವತ ಹಾದಿಗಳು ಮತ್ತು ಕಡಿದಾದ ಕಣಿವೆಗಳು ರೈಲ್ವೆ ನಿರ್ಮಾಣಕ್ಕೆ ಸವಾಲುಗಳನ್ನು ಒಡ್ಡುತ್ತದೆ.

ಅಂಡೋರಾ

ಪೈರಿನೀಸ್‌ ಪರ್ವತಗಳಲ್ಲಿ ನೆಲೆಗೊಂಡಿರುವ ಅಂಡೋರಾ ಜನಸಂಖ್ಯೆಯ ಪ್ರಕಾರ 11ನೇ ಚಿಕ್ಕ ದೇಶವಾಗಿದೆ. ವ್ಯಾಪಕವಾದ ರೈಲ್ವೆ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಲಿಲ್ಲ.

ಸೈಪಸ್‌

ಸೈಪಸ್‌ನಲ್ಲಿ ಯಾವುದೇ ರೈಲು ಸೇವೆ ಇಲ್ಲ. ಇಲ್ಲಿ 1905 ರಿಂದ 1951 ರವರೆಗೆ ರೈಲು ಕಾರ್ಯನಿರ್ವಹಿಸಿದ್ದು. ನಂತರ ಆರ್ಥಿಕ ಕಾರಣಗಳಿಂದ ಸ್ಥಗಿತಗೊಂಡಿದೆ ಎಂದು ಹೇಳಲಾಗುತ್ತದೆ.

VIEW ALL

Read Next Story