ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ?

DHFL Scam  Dheeraj Wadhawan Arrest:ಇದು ದೇಶದ ಅತಿದೊಡ್ಡ ಬ್ಯಾಂಕ್ ಹಗರಣ. ಇಲ್ಲಿ ನಡೆದಿರುವುದು 34,000 ಕೋಟಿ ರೂ.ಗಳ ಬ್ಯಾಂಕ್ ವಂಚನೆ ಹಗರಣ. ಈ ಹಗರಣದ ಆರೋಪಿ ಧೀರಜ್ ವಾಧವನ್  ಯಾರು? 

Written by - Ranjitha R K | Last Updated : May 16, 2024, 08:59 AM IST
  • ದೇಶದಲ್ಲಿ ಅನೇಕ ದೊಡ್ಡ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ
  • ಈ ಹಗರಣಗಳಲ್ಲಿ ಒಂದು DHFL ಹಗರಣ.
  • ಡಿಎಚ್‌ಎಫ್‌ಎಲ್ ಮಾಜಿ ರ್ದೇಶಕ ಧೀರಜ್ ವಾಧವನ್ ಯಾರು ?
ವಂಚನೆ ಹಗರಣದಲ್ಲಿ ನೀರಜ್ ಮೋದಿ, ವಿಜಯ್ ಮಲ್ಯರನ್ನೇ ಹಿಂದಿಕ್ಕಿದ ಭೂಪ !ಬ್ಯಾಂಕುಗಳಿಗೆ 34,000ಕೋಟಿ ವಂಚಿಸಿರುವ ಈ ಧೀರಜ್ ವಾಧವನ್ ಯಾರು ?  title=

DHFL Scam  Dheeraj Wadhawan Arrest: ದೇಶದಲ್ಲಿ ಅನೇಕ ದೊಡ್ಡ ಕಾರ್ಪೊರೇಟ್ ಮತ್ತು ಬ್ಯಾಂಕಿಂಗ್ ಹಗರಣಗಳು ನಡೆದಿವೆ.ಪಿಎನ್‌ಬಿ ಹಗರಣ, ಯೆಸ್ ಬ್ಯಾಂಕ್,ವಿಜಯ್ ಮಲ್ಯ ಹಗರಣಗಳಂತಹ ಹಗರಣಗಳು ದೇಶವನ್ನೇ ಬೆಚ್ಚಿಬೀಳಿಸಿದೆ.ಈ ಹಗರಣಗಳಲ್ಲಿ ಒಂದು DHFL ಹಗರಣ.34,000 ಕೋಟಿ ರೂ.ಗಳ ಈ ಬ್ಯಾಂಕಿಂಗ್ ವಂಚನೆ ಪ್ರಕರಣದಲ್ಲಿ ಡಿಎಚ್‌ಎಫ್‌ಎಲ್ ಮಾಜಿ  ರ್ದೇಶಕ ಧೀರಜ್ ವಾಧವನ್ ಅವರನ್ನು ಸಿಬಿಐ ಬಂಧಿಸಿದೆ.ದೆಹಲಿಯ ವಿಶೇಷ ನ್ಯಾಯಾಲಯವು ದೇಶದ ಅತಿದೊಡ್ಡ ಬ್ಯಾಂಕ್ ಹಗರಣದ ಪ್ರಕರಣದಲ್ಲಿ ಧೀರಜ್ ವಾಧವನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.  

ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ  :
ಡಿಎಚ್‌ಎಫ್‌ಎಲ್ ಸಾಲ ಹಗರಣದ ಆರೋಪಿ ಧೀರಜ್ ವಾಧವನ್ ವಂಚನೆ ಪ್ರಕರಣದಲ್ಲಿ ನೀರಜ್ ಮೋದಿ ಮತ್ತು ವಿಜಯ್ ಮಲ್ಯ ಅವರನ್ನು ಹಿಂದೆ ಹಾಕಿದ್ದಾರೆ. ವಾಧವಾನ್ ಸಹೋದರರ ಮೇಲೆ 34000 ಕೋಟಿ ರೂಪಾಯಿಗಳ ಬ್ಯಾಂಕ್ ಹಗರಣದ ಆರೋಪವಿದೆ.PNB ಹಗರಣದ ಆರೋಪಿ ನೀರಜ್ ಮೋದಿ ದೇಶಕ್ಕೆ 14,000 ಕೋಟಿ ರೂಪಾಯಿ ವಂಚಿಸಿದ್ದಾರೆ.ಕಿಂಗ್‌ಫಿಷರ್ ಮಾಲೀಕ ವಿಜಯ್ ಮಲ್ಯ ಎಸ್‌ಬಿಐ ಸೇರಿದಂತೆ ದೇಶದ ಹಲವು ಬ್ಯಾಂಕ್‌ಗಳಿಗೆ 9,900 ಕೋಟಿ ರೂ.ವಂಚಿಸಿದ್ದಾರೆ.ಇದೆಲ್ಲವನ್ನು ಬಿಟ್ಟು ಕಪಿಲ್ ಮತ್ತು ಧೀರಜ್ ವಾಧವನ್ 34,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮಾಡುವ ಮೂಲಕ ದೇಶದ ಅತಿದೊಡ್ಡ ಬ್ಯಾಂಕಿಂಗ್ ಹಗರಣ ಎಸಗಿದ್ದಾರೆ. 

ಇದನ್ನೂ ಓದಿ : ಕನ್ಫರ್ಮ್ ಟ್ರೈನ್ ಟಿಕೆಟ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ

ಧೀರಜ್ ವಾಧವನ್ ಯಾರು? : 
DHFL ಹಗರಣದ ತನಿಖೆ ನಡೆಸುತ್ತಿರುವ ಸಿಬಿಐ ಧೀರಜ್ ವಾಧವನ್ ಅವರನ್ನು ಬಂಧಿಸಿದೆ. 17 ಬ್ಯಾಂಕ್‌ಗಳ ಒಕ್ಕೂಟದಿಂದ 34,000 ಕೋಟಿ ರೂಪಾಯಿ ವಂಚನೆ ಆರೋಪದಲ್ಲಿ ಸಿಬಿಐ ಡಿಎಚ್‌ಎಫ್‌ಎಲ್ ವಿರುದ್ಧ ಪ್ರಕರಣ ದಾಖಲಿಸಿತ್ತು.ಧೀರಜ್ ವಾಧವನ್ DHFLನ ಪ್ರವರ್ತಕ ಮತ್ತು ನಿರ್ದೇಶಕರಾಗಿದ್ದರು.ಅವರನ್ನು DHFH ನ ಉನ್ನತ ನಿರ್ವಹಣಾ ತಂಡದಲ್ಲಿ ಸೇರಿಸಲಾಯಿತು.ಅವರ ಸಹೋದರ ಕಪಿಲ್ ವಾಧವನ್ ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.ಇಬ್ಬರೂ ಸಹೋದರರು,ಕೆಲವು ಉದ್ಯಮಿಗಳೊಂದಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟಕ್ಕೆ ವಂಚಿಸಿದ್ದಾರೆ. 

DHFL ದೇಶದ ಅತಿ ದೊಡ್ಡ ಹಗರಣವನ್ನು  ಮಾಡಿರುವುದು ಹೇಗೆ? :
ಡಿಎಚ್ಎಫ್‌ಎಲ್ ಹೆಸರಿನಲ್ಲಿ ಈ ಬ್ಯಾಂಕ್‌ಗಳಿಂದ 42,71 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ನಂತರ ವಾಧವನ್ ಸಹೋದರರು ಭಾರೀ ಮೊತ್ತವನ್ನು ವಂಚಿಸಿದ್ದಾರೆ. DHFLನ ಪುಸ್ತಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.  DHFL ನಿಂದ 24595 ಕೋಟಿ ರೂ.ಗಳನ್ನು ಹಿಂತೆಗೆದುಕೊಂಡು ಅದನ್ನು 66 ಕಂಪನಿಗಳು ಮತ್ತು ಅವರ ಸಹವರ್ತಿಗಳಿಗೆ ವಿತರಿಸಿದ್ದಾರೆ. ನಕಲಿ ಜನರ ಹೆಸರಿನಲ್ಲಿ 14,00 ಕೋಟಿ ರೂಪಾಯಿಗಳ ಸಾಲವನ್ನು ವಿತರಿಸಿದ್ದಾರೆ.  ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪ್ರಕಾರ,2010 ಮತ್ತು 2018 ರ ನಡುವೆ, DHFL 42,871 ಕೋಟಿ ರೂಪಾಯಿಗಳ ಸಾಲ ಪಡೆದಿದ್ದು, ಈ ಪೈಕಿ 34,615 ಕೋಟಿ ರೂ.ವಂಚಿಸಲಾಗಿದೆ. 2019 ರಲ್ಲಿ,ಈ ಸಾಲವನ್ನು ಎನ್‌ಪಿಎ ಎಂದು 2020ರಲ್ಲಿ ಇದನ್ನು ವಂಚನೆ ಎಂದು ಘೋಷಿಸಲಾಯಿತು.2019 ರಲ್ಲಿ,  ಫಂಡ್ ಡೈವರ್ಶನ್ ಬಗ್ಗೆ ಆರೋಪಗಳು ಕೇಳಿ ಬಂದವು. ಇದಾದ ನಂತರ ಧೀರಜ್ ಮತ್ತು ಕಪಿಲ್ ವಾಧವನ್ ಅವರ ಕೆಟ್ಟ ದಿನಗಳು ಪ್ರಾರಂಭವಾದವು. Special Review Audit ಮೂಲಕ ಇವರಿಬ್ಬರ ಮೋಸದ ಜಾಲವನ್ನು  ಬಹಿರಂಗಪಡಿಸಲಾಯಿತು.  

ಇದನ್ನೂ ಓದಿ : ಪ್ರಧಾನಿ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಮೋದಿ ಬಳಿ ಇರುವ ಮನೆ ಕಾರುಗಳೆಷ್ಟು ? ವರ್ಷಕ್ಕೆ ಪಾವತಿಸುವ ಆದಾಯ ತೆರಿಗೆ... ? ಸಂಪೂರ್ಣ ಮಾಹಿತಿ

ಕಂಪನಿ ಷೇರು ಮಾರುಕಟ್ಟೆ ಪಟ್ಟಿಯಿಂದ ಹೊರಕ್ಕೆ :  
ಹಗರಣ ಬಯಲಾದ ನಂತರ ಕಂಪನಿಯ ಷೇರುಗಳು ಕುಸಿಯಲಾರಂಭಿಸಿದವು. DHFL ಡೀಫಾಲ್ಟ್ ಸುದ್ದಿಯ ನಡುವೆ,ಕಂಪನಿಯ ಷೇರುಗಳು ಒಂದು ದಿನದಲ್ಲಿ 60 ಪ್ರತಿಶತದಷ್ಟು ಕುಸಿದವು.ಷೇರುಗಳು ಎಷ್ಟು ಕುಸಿದವು ಎಂದರೆ ಜೂನ್ 2021 ರಲ್ಲಿ, DHFL ಅನ್ನು ಷೇರು ಮಾರುಕಟ್ಟೆ ಪಟ್ಟಿಯಿಂದಲೇ  ತೆಗೆದುಹಾಕಲಾಯಿತು.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ 

Trending News