ಕಣ್ಣಿನಲ್ಲಿ ಕಾಣುವ ಈ ಲಕ್ಷಣಗಳಿಂದಲೇ ಕಂಡುಕೊಳ್ಳಿ ನೀವು ಡಯಾಬಿಟಿಕ್ ಎನ್ನುವುದನ್ನು

Diabetes symptoms in eyes:ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ದೊಡ್ಡ ಮಟ್ಟದ  ಹಾನಿಯನ್ನುಂಟುಮಾಡುತ್ತದೆ. ಮಧುಮೇಹ ರೋಗಿಗಳ ದೃಷ್ಟಿಯಲ್ಲಿ ಕಂಡುಬರುವ ಮಧುಮೇಹದ ಲಕ್ಷಣಗಳು ಇಲ್ಲಿದೆ. 

Written by - Ranjitha R K | Last Updated : Mar 20, 2024, 05:54 PM IST
  • ಮಧುಮೇಹವು ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ
  • ಮಧುಮೇಹಿಗಳು ಹೆಚ್ಚಿನ ರೋಗಗಳ ಅಪಾಯವನ್ನು ಎದುರಿಸುತ್ತಾರೆ.
  • ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ.
ಕಣ್ಣಿನಲ್ಲಿ ಕಾಣುವ ಈ ಲಕ್ಷಣಗಳಿಂದಲೇ ಕಂಡುಕೊಳ್ಳಿ ನೀವು ಡಯಾಬಿಟಿಕ್ ಎನ್ನುವುದನ್ನು   title=

Diabetes symptoms in eyes : ಮಧುಮೇಹವು ಚಯಾಪಚಯ ಅಸ್ವಸ್ಥತೆಯಾಗಿದ್ದು ಅದು ವ್ಯಕ್ತಿಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತರರಿಗೆ ಹೋಲಿಸಿದರೆ ಮಧುಮೇಹಿಗಳು ಹೆಚ್ಚಿನ ರೋಗಗಳ ಅಪಾಯವನ್ನು ಎದುರಿಸುತ್ತಾರೆ. ಏಕೆಂದರೆ ಅವರ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಮಧುಮೇಹದ ಲಕ್ಷಣಗಳನ್ನು ನೋಡುವುದಾದರೆ  ಆಯಾಸ, ಅತಿಯಾದ ಬಾಯಾರಿಕೆ ಮತ್ತು ಕಿರಿಕಿರಿಯಂತಹ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ದೊಡ್ಡ ಮಟ್ಟದ  ಹಾನಿಯನ್ನುಂಟುಮಾಡುತ್ತದೆ. ಮಧುಮೇಹ ರೋಗಿಗಳ ದೃಷ್ಟಿಯಲ್ಲಿ ಕಂಡುಬರುವ ಮಧುಮೇಹದ ಲಕ್ಷಣಗಳು ಇಲ್ಲಿದೆ. 

ಮಂದ ದೃಷ್ಟಿ : 
ಮಧುಮೇಹ ರೋಗಿಗಳ ದೃಷ್ಟಿ ಮಸುಕಾಗಬಹುದು. ಮಧುಮೇಹ ಇದ್ದಾಗ  ಯಾವುದೂ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆರಂಭದಲ್ಲಿಯೇ ಈ ಲಕ್ಷಣವನ್ನು ಗುರುತಿಸಿಕೊಂಡರೆ ಮಧುಮೇಹವನ್ನು ನಿಯಂತ್ರಿಸುವುದು ಸಾಧ್ಯವಾಗುತ್ತದೆ 

ಇದನ್ನೂ ಓದಿ : ಗಂಭೀರ ಕಣ್ಣಿನ ಕಾಯಿಲೆಯಿಂದ ಬಳಲುತ್ತಿರುವ ನಟಿ ಪರಿಣಿತಿ ಚೋಪ್ರಾ ಪತಿ ! ಎದುರಾಗಿದೆ ದೃಷ್ಟಿ ಹೀನವಾಗುವ ಅಪಾಯ !

ಕಣ್ಣುಗಳಲ್ಲಿ ಊತ : 
ಡಯಾಬಿಟಿಕ್ ರೆಟಿನೋಪತಿ ರೋಗಿಯ ಕಣ್ಣುಗಳಲ್ಲಿ ಊತವನ್ನು ಉಂಟುಮಾಡಬಹುದು. ಇದರಿಂದಾಗಿ ಕಣ್ಣುಗಳು ಊದಿಕೊಂಡಂತೆ ಮತ್ತು ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.

ರಾತ್ರಿ ಹೊತ್ತಿನಲ್ಲಿ ಕಾಣಿಸದೆ ಇರುವುದು : 
ಅನೇಕ ಬಾರಿ ಮಧುಮೇಹ ರೋಗಿಗಳಿಗೆ ರಾತ್ರಿಯಲ್ಲಿ ಸರಿಯಾಗಿ ಮತ್ತು ಸ್ಪಷ್ಟವಾಗಿ ಕಾಣಿಸುವುದಿಲ್ಲ. ರಾತ್ರಿ ಹೊತ್ತಿನಲ್ಲಿ ನೋಡುವಾಗ ಮಸುಕು ಮಸುಕಾಗಿ ಕಾಣಿಸುತ್ತದೆ.  

ರೆಟಿನಾದಲ್ಲಿ ಕಲೆಗಳು :
ಕಣ್ಣಿನ ರೆಟಿನಾದಲ್ಲಿ ಕೆಂಪು ಮತ್ತು ಕಪ್ಪು ಚುಕ್ಕೆಗಳು ಕಂಡು ಬಂದರೆ ಅದು  ಮಧುಮೇಹದ ಲಕ್ಷಣವಾಗಿರಬಹುದು. ಈ ಕಾರಣದಿಂದಾಗಿ, ವ್ಯಕ್ತಿಯ ದೃಷ್ಟಿ ಮಂದವಾಗಬಹುದು. 

ಇದನ್ನೂ ಓದಿ : ಈ ಪುಡಿಯನ್ನು ಈ ರೀತಿ ಸೇವಿಸಿದರೆ ರಾತ್ರಿ ಬೆಳಗಾಗುವುದರೊಳಗೆ ದೇಹದಿಂದ ಹೊರ ಬೀಳುತ್ತದೆ ಕೆಟ್ಟ ಕೊಲೆಸ್ಟ್ರಾಲ್

ಬಣ್ಣ ಗೋಚರಿಸುವುದಿಲ್ಲ : 
ರಕ್ತದಲ್ಲಿನ ಅಧಿಕ ಸಕ್ಕರೆಯ ಮಟ್ಟದಿಂದಾಗಿ, ಬಣ್ಣಗಳನ್ನು ಗೋಚರಿಸುವುದು ಕಷ್ಟವಾಗಬಹುದು. ಈ ಕಾರಣದಿಂದಾಗಿ, ಅನೇಕ ಬಾರಿ ಬಣ್ಣಗಳು ಸರಿಯಾಗಿ ಕಾಣಿಸುವುದಿಲ್ಲ.  

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News