Indian Gooseberry For Diabetes: ಮಧುಮೇಹ ಕಾಯಿಲೆ ಇದ್ದಾಗ ರೋಗಿಯು ಯಾವಾಗಲೂ ತನ್ನ ಆಹಾರ ಪದ್ಧತಿ ಮತ್ತು ಜೀವನಶೈಲಿಯತ್ತ ಗಮನ ಹರಿಸಬೇಕು.
Indian Gooseberry For Diabetes : ಮಧುಮೇಹ ತುಂಬಾ ಸಂಕೀರ್ಣವಾದ ಕಾಯಿಲೆಯಾಗಿದೆ. ಈ ಕಾಯಿಲೆ ಇದ್ದಾಗ ರೋಗಿಯು ಯಾವಾಗಲೂ ತನ್ನ ಆಹಾರ ಪದ್ಧತಿ ಮತ್ತು ಜೀವನಶೈಲಿಯತ್ತ ಗಮನ ಹರಿಸಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಿ ಜೀವಕ್ಕೆ ಅಪಾಯವಾಗಬಹುದು. ಮಧುಮೇಹದಿಂದಾಗಿ, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯಾಘಾತದ ಅಪಾಯವೂ ಹೆಚ್ಚುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಮಧುಮೇಹ ರೋಗಿಗಳು ತಮ್ಮ ಆರೋಗ್ಯವನ್ನು ಉತ್ತಮವಾಗಿ ಇರಿಸಿಕೊಳ್ಳಲು ನೆಲ್ಲಿಕಾಯಿಯನ್ನು ಸೇವಿಸಬೇಕು. ನೆಲ್ಲಿಕಾಯಿಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು ಕರೆಯಲಾಗುತ್ತದೆ.
ನೆಲ್ಲಿಕಾಯಿ ವಿಟಮಿನ್ ಸಿ, ಫೈಬರ್, ಕಾರ್ಬೋಹೈಡ್ರೇಟ್ ಗಳು, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನ ಆಗರವಾಗಿದೆ. ಇದರಿಂದಾಗಿ ಇದು ಸೂಪರ್ ಫುಡ್ ಎನ್ನಲಾಗುತ್ತದೆ.
ಮಧುಮೇಹ ರೋಗಿಗಳು ನೆಲ್ಲಿಕಾಯಿ ಜ್ಯೂಸ್ ತೆಗೆದು ಅದರಲ್ಲಿ ಅಲೋವೆರಾ ಜೆಲ್ ಮತ್ತು ಅಮೃತಬಳ್ಳಿ ರಸವನ್ನು ಬೆರೆಸಿ ಕುಡಿಯಬೇಕು. ಹೀಗೆ ಕುಡಿದರೆ ರಕ್ತದ ಸಕ್ಕರೆ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ.
ನೆಲ್ಲಿಕಾಯಿ ರಸವನ್ನು ಅರಿಶಿನದೊಂದಿಗೆ ಬೆರೆಸಿ ಕೂಡಾ ಕುಡಿಯಬಹುದು. ಹೀಗೆ ಸೇವಿಸಿದರೆ ಕೂಡಾ ಬ್ಲಡ್ ಶುಗರ್ ನಿಯಂತ್ರಣಕ್ಕೆ ಬರುವುದು. ನೆಲ್ಲಿಕಾಯಿಯನ್ನು ಹಾಗೆಯೇ ನೇರವಾಗಿ ಅಗಿದು ತಿನ್ನುವುದರಿಂದಲೂ ಡಯಾಬಿಟೀಸ್ ನಾರ್ಮಲ್ ಆಗುವುದು.
ಆಮ್ಲಾವನ್ನು ಹೊರತುಪಡಿಸಿ, ಕ್ಯಾರೆಟ್ ಜ್ಯೂಸ್, ಸೇಬಿನ ರಸ, ಸೌತೆಕಾಯಿ ರಸ ಅಥವಾ ಸೌತೆಕಾಯಿಯನ್ನು ಕೂಡಾ ಸೇವಿಸುವ ಮೂಲಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ ಪೇರಳೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಕುಡಿಯುವ ಮೂಲಕ ಕೂಡಾ ಬ್ಲಡ್ ಶುಗರ್ ನಾರ್ಮಲ್ ಮಾಡಬಹುದು. (ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)