ಟೀಕೆ, ವಿವಾದಗಳ ನಡುವೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಹಾರ್ದಿಕ್ ಪಾಂಡ್ಯ: ವಿಶೇಷ ಪೂಜೆ ಸಲ್ಲಿಕೆಯ ವಿಡಿಯೋ ವೈರಲ್

IPL 2024 Hardik Pandya: IPL 2024 ರಲ್ಲಿ ಮುಂಬೈ ನಾಯಕನಾಗಿ ಪಂದ್ಯ ಆರಂಭಿಸಿದ ಹಾರ್ದಿಕ್, ಬ್ಯಾಕ್ ಟು ಬ್ಯಾಕ್ ಸೋಲು ಜೊತೆಗೆ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಹಾರ್ದಿಕ್ ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Written by - Bhavishya Shetty | Last Updated : Apr 5, 2024, 07:56 PM IST
    • ಟೀಕೆಗಳ ನಡುವೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಹಾರ್ದಿಕ್ ಪಾಂಡ್ಯ
    • IPL 2024 ರಲ್ಲಿ ಮುಂಬೈ ನಾಯಕನಾಗಿ ಪಂದ್ಯ ಆರಂಭಿಸಿದ ಹಾರ್ದಿಕ್
    • ಹಾರ್ದಿಕ್ ಪಾಂಡ್ಯ ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ
ಟೀಕೆ, ವಿವಾದಗಳ ನಡುವೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿದ ಹಾರ್ದಿಕ್ ಪಾಂಡ್ಯ: ವಿಶೇಷ ಪೂಜೆ ಸಲ್ಲಿಕೆಯ ವಿಡಿಯೋ ವೈರಲ್ title=
Hardik Pandya

IPL 2024 Hardik Pandya: ಸೋಲಿನಿಂದ ಕಂಗೆಟ್ಟಿರುವ ಹಾರ್ದಿಕ್ ಪಾಂಡ್ಯ, ಟೀಕೆಗಳ ನಡುವೆ ಸೋಮನಾಥ ದೇಗುಲಕ್ಕೆ ಭೇಟಿ ನೀಡಿ ಮಹಾದೇವನಿಗೆ ವಿಶೇಷ ಪೂಜೆ ಸಲ್ಲಿಸಿದ್ದು, ಅದರ ವಿಡಿಯೋ ವೈರಲ್ ಆಗುತ್ತಿದೆ.

IPL 2024 ರಲ್ಲಿ ಮುಂಬೈ ನಾಯಕನಾಗಿ ಪಂದ್ಯ ಆರಂಭಿಸಿದ ಹಾರ್ದಿಕ್, ಬ್ಯಾಕ್ ಟು ಬ್ಯಾಕ್ ಸೋಲು ಜೊತೆಗೆ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಹಾರ್ದಿಕ್ ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: AI ಚಾಲಿತ  ಗೇಮಿಂಗ್ ಲ್ಯಾಪ್‌ಟಾಪ್ ಬಿಡುಗಡೆ ಮಾಡಿದ HP : ವೈಶಿಷ್ಟ್ಯಗಳು, ಇನ್ನಿತರ ಮಾಹಿತಿ ಇಲ್ಲಿವೆ

ವೀಡಿಯೊದಲ್ಲಿ, ಹಾರ್ದಿಕ್ ಶಿವಲಿಂಗಕ್ಕೆ ಹಾಲಿ ಅಭಿಷೇಕ ಮಾಡುತ್ತಿರುವುದು ಕಂಡುಬಂದಿದೆ. ಈ ಮೂಲಕ, ಏಪ್ರಿಲ್ 7 ರಂದು ನಡೆಯಲಿರುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಮುಂಬೈ ಅದೃಷ್ಟ ಬದಲಾಗುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ನನ್ನ ತಾಳ್ಮೆ ಪರೀಕ್ಷಿಸಬೇಡಿ- ನಾಯಕತ್ವ ಕಳೆದುಕೊಂಡ ಶಾಹೀನ್ ಅಫ್ರಿದಿ ಹೀಗಂದಿದ್ದು ಯಾರಿಗೆ?

ಸೋಲಿನ ನಂತರ ಹಾರ್ದಿಕ್ ಪ್ರತಿಕ್ರಿಯೆ:

ಮೈದಾನದಲ್ಲಾಗಲಿ ಅಥವಾ ಸಾಮಾಜಿಕ ಜಾಲತಾಣದಲ್ಲಾಗಲಿ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ನಿರಂತರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿರುವ ಅವರು, “ಈ ತಂಡದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಒಂದು ವಿಷಯವಿದ್ದರೆ, ನಾವು ಎಂದಿಗೂ ಬಿಟ್ಟುಕೊಡುವುದಿಲ್ಲ. ನಾವು ಹೋರಾಡುತ್ತಲೇ ಇರುತ್ತೇವೆ, ಮುಂದುವರಿಯುತ್ತೇವೆ” ಎಂದು ಬರೆದುಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News