ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ( ಆರ್ಐಎಲ್) ಟಿಫಾನಿ & ಕಂಪನಿ ಬ್ರಾಂಡ್ ಅನ್ನು ಭಾರತಕ್ಕೆ ತರಲು ಹೊರಟಿದೆ. ಆರ್ಐಎಲ್ ಘಟಕ ರಿಲಯನ್ಸ್ ಬ್ರಾಂಡ್ಸ್ ಮತ್ತು ಟಿಫಾನಿ ಜಂಟಿ ಉದ್ಯಮವು ದೇಶದಲ್ಲಿ ಅಮೆರಿಕದ ಐಷಾರಾಮಿ ಆಭರಣ ಮಳಿಗೆಗಳನ್ನು ತೆರೆಯಲು ಘೋಷಿಸಿದೆ.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಇತ್ತೀಚಿಗಷ್ಟೇ ವೀಡಿಯೋ ಸಂದೇಶದ ಮೂಲಕ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ಡಿಯೋರಾರನ್ನು ಬೆಂಬಲಿಸಿದ ಬೆನ್ನಲ್ಲೇ ಈಗ ಮುಖೇಶ್ ಪುತ್ರ ಅನಂತ್ ಅಂಬಾನಿ ಪ್ರಧಾನಿ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಒಂದು ಕಡೆ ಕಾಂಗ್ರೆಸ್ ಪಕ್ಷ ರಫೇಲ್ ಒಪ್ಪಂದದ ವಿಚಾರವಾಗಿ ಅನಿಲ್ ಅಂಬಾನಿ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿರುವ ಬೆನ್ನಲ್ಲೇ ಈಗ ರಿಲಯನ್ಸ್ ನ ಅಧ್ಯಕ್ಷ ಮುಖೇಶ್ ಅಂಬಾನಿ ಈಗ ಮುಂಬೈ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ಮಿಲಿಂದ್ ದಿಯೋರಾ ಅವರನ್ನು ಬೆಂಬಲಿಸಿದ್ದಾರೆ.
ಕಳೆದ ಕಳಪೆ 2018 ಋತುವಿನಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡವು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಕೇಶ್ ಅಂಬಾನಿ ಅವರ ನಿವ್ವಳ ಮೌಲ್ಯ ಕಳೆದ 12 ತಿಂಗಳಲ್ಲಿ 10 ಬಿಲಿಯನ್ ಡಾಲರ್ನಿಂದ 50 ಬಿಲಿಯನ್ ಡಾಲರ್ಗಳಿಗೆ ಏರಿಕೆಯಾಗಿದೆ. ಆ ಮೂಲಕ ಈಗ ಶ್ರೀಮಂತ ಕ್ರೀಡಾ ತಂಡದ ಮಾಲೀಕರಾಗಿ ಹೊರಹೊಮ್ಮಿದ್ದಾರೆ.
ಮುಖೇಶ್ ಅಂಬಾನಿ ಸ್ವಾಮ್ಯದ ರಿಲಯನ್ಸ್ ಇಂಡಸ್ಟ್ರೀಸ್ ಜುಲೈ-ಸೆಪ್ಟೆಂಬರ್ 2018 ರ ನಡುವೆ ಮೂರು ತಿಂಗಳಲ್ಲಿ ಒಟ್ಟು ನಿವ್ವಳ ಲಾಭ 9,516 ಕೋಟಿ ರೂ ಗಳಿಸಿದೆ.ಈ ಹಿಂದಿನ ಏಪ್ರಿಲ್-ಜುಲೈ ತ್ರೈಮಾಸಿಕ ಅವಧಿಯಲ್ಲಿ 9,459 ಕೋಟಿ ರೂ ನಿವ್ವಳ ಲಾಭ ಗಳಿಸಿತ್ತು.
ಫೋರ್ಬ್ಸ್ನ ಅತಿದೊಡ್ಡ ಬಿಲಿಯನೇರ್ ವ್ಯವಹಾರ ಮಹಿಳಾ ಪಟ್ಟಿಯಲ್ಲಿ ಇಶಾ ಅಂಬಾನಿ ಹೆಸರನ್ನು ಸೇರಿಸಲಾಯಿತು. 2018 ರಲ್ಲಿ, ಫೋರ್ಬ್ಸ್ ಉತ್ತರಾಧಿಕಾರಿಗಳ ಪಟ್ಟಿಯಲ್ಲಿ ಅವರು ಎರಡನೆಯ ಸ್ಥಾನದಲ್ಲಿದ್ದಾರೆ.
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಕೂಡಾ ಒಬ್ಬರು. ಮುಖೇಶ್ ಅಂಬಾನಿ ಈಗ ತನ್ನ ಮಗಳ ನಿಶ್ಚಿತಾರ್ಥಕ್ಕಾಗಿ ಇಟಲಿಯನ್ನು ಆಯ್ಕೆ ಮಾಡಿಕೊಂಡಿದೆ. ಇಶಾ ಅಂಬಾನಿ ಮತ್ತು ಆನಂದ್ ಪಿರಾಮಾಲ್ ಇಟಲಿಯ ಲೇಕ್ ಕೊಮೊದಲ್ಲಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.