2020ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿ ಈಕೆ... Forbesನ ಈ ಪಟ್ಟಿಯಲ್ಲಿ ಯಾರು ಯಾರಿಗೆ ಸ್ಥಾನ?

2020ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಕಲಾವಿದರ ಪಟ್ಟಿಯನ್ನು Forbes ನಿಯತಕಾಲಿಕೆ ಬಿಡುಗಡೆ ಮಾಡಿದೆ. ಮಹಿಳಾ ಕಲಾವಿದರ ಪಟ್ಟಿಯಲ್ಲಿ Sofia Vergara ಮೊದಲ ಸ್ಥಾನದಲ್ಲಿದ್ದಾರೆ. ಸೋಫಿಯಾ ಈ ವರ್ಷ 315 ಕೋಟಿ ರೂ. ಗಳಿಕೆ ಮಾಡಿದ್ದಾರೆ.

Last Updated : Oct 5, 2020, 01:55 PM IST
  • ಯಾವುದೇ ಭಾರತೀಯ ನಟಿ ಈ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.
  • ಎಮಿಲಿ ಬ್ಲಾಂಟ್ ಇದೆ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾಳೆ.
  • ಅಕ್ಷಯ್ ಕುಮಾರ್ ಕೂಡ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
2020ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ನಟಿ ಈಕೆ... Forbesನ ಈ ಪಟ್ಟಿಯಲ್ಲಿ ಯಾರು ಯಾರಿಗೆ ಸ್ಥಾನ? title=

ನವದೆಹಲಿ: ವಾರ್ಷಿಕವಾಗಿ ಅತಿ ಹೆಚ್ಚು ಗಳಿಕೆ ಮಾಡಿದ ಕಲಾವಿದರ ಪಟ್ಟಿಯನ್ನು ಫೋರ್ಬ್ಸ್ (Forbes) ನಿಯತಕಾಲಿಕೆ ಬಿಡುಗಡೆ ಮಾಡಿದೆ. ಮಹಿಳಾ ಕಲಾವಿದರ ಪಟ್ಟಿಯಲ್ಲಿ ನಟಿ ಸೋಫಿಯಾ ವರಗಾರಾ ಶಿರ್ಷ ಸ್ಥಾನದಲ್ಲಿದ್ದಾರೆ. ಸೋಫಿಯಾ ಸೇರಿದಂತೆ ಈ ಪಟ್ಟಿಯಲ್ಲಿ ಏಂಜಲೀನಾ ಜೋಲಿ, ಗಾಲ್ ಗೈಡಾಟ್ ಹಾಗೂ ಮೆಲಿಸಾ ಮೆಕಾರ್ಥಿ ಕೂಡ ಈ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ.

ಒಂದೇ ವರ್ಷದಲ್ಲಿ 315 ಕೋಟಿ ರೂ. ಗಳಿಕೆ
ಫೋರ್ಬ್ಸ್ ಪ್ರಕಾರ, ಈ ವರ್ಷ ಸೋಫಿಯಾ ವರಗಾರಾ ವಿಶ್ವದ ಅತಿ ಹೆಚ್ಚು ಗಳಿಕೆ ಮಾಡಿದ ನಟಿಯಾಗಿದ್ದಾರೆ. ಅವರು ಒಂದು ವರ್ಷದ ಅವಧಿಯಲ್ಲಿ 43 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದು, ಇದು 315 ಕೋಟಿ ರೂ.ಗೆ ಸಮನಾಗಿದೆ.

ಇದನ್ನು ಓದಿ- ವಿಶ್ವದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ 25 Whisky ಬ್ರಾಂಡ್ ಗಳು ಇಲ್ಲಿವೆ, ಇದರಲ್ಲಿ 13 ಭಾರತೀಯ ಬ್ರಾಂಡ್ ಗಳು

ಯಾವುದೇ ಭಾರತೀಯ ನಟಿ ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ
ಈ ಬಾರಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ನಟಿಯರಲ್ಲಿ ಏಂಜೆಲೀನಾ ಜೋಲಿ ($ 35.5 ಮಿಲಿಯನ್), ಗಾಲ್ ಗೈಡಾಟ್ ($31 ಮಿಲಿಯನ್), ಮೆಲಿಸಾ ಮೆಕಾರ್ಥಿ ($25 ಮಿಲಿಯನ್), ಮೆರಿಲ್ ಸ್ಟ್ರಿಪ್ ($24 ಮಿಲಿಯನ್), ಎಮಿಲಿ ಬ್ಲಾಂಟ್ ($22.5 ಮಿಲಿಯನ್), ನಿಕೊಲ್ ಕಿಡ್ ಮೇನ್ ($ 22 ಮಿಲಿಯನ್). ಎಲೆನ್ ಪಾಂಪಿಯೋ ($19 ಮಿಲಿಯನ್), ಎಲಿಜಾಬೆತ್ ಮಾಸ್ ($16 ಮಿಲಿಯನ್ ) ಹಾಗೂ ವಾಯೋಲಾ ಡೇವಿಸ್ ($15.5 ಮಿಲಿಯನ್) ಶಾಮೀಲಾಗಿದ್ದಾರೆ.

ಇದನ್ನು ಓದಿ- ಫೋರ್ಬ್ಸ್ ನ 100 ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಕೊಹ್ಲಿಗೆ ಸ್ಥಾನ...!

ಫೋರ್ಬ್ಸ್ ಪ್ರಕಾರ, ವರ್ಗರಾ 'ಮಾಡರ್ನ್ ಫ್ಯಾಮಿಲಿ' ಮತ್ತು 'ಅಮೇರಿಕಾ ಗಾಟ್ ಟ್ಯಾಲೆಂಟ್' ನಿಂದ ಹೆಚ್ಚಿನ ಹಣ ಗಳಿಸಿದ್ದಾರೆ. ಈ ಸಂಪಾದನೆಯಲ್ಲಿ ಅವರ ಅನುಮೋದನೆ ಒಪ್ಪಂದಗಳನ್ನು ಸಹ ಸೇರಿಸಲಾಗಿದೆ. ಅವರು ಪ್ರದರ್ಶನದ ಪ್ರತಿ ಸಂಚಿಕೆಯಿಂದ, 500,000 ಡಾಲರ್ ಗಳಿಸಿದ್ದಾರೆ. ಆದರೆ ಅವರು 'ಅಮೇರಿಕಾ ಗಾಟ್ ಟ್ಯಾಲೆಂಟ್' ನ ಪ್ರತಿ ಋತುವಿನಿಂದ 10 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದಾರೆ. ಇದೇ ವೇಳೆ ಜೋಲಿ ಮಾರ್ವೆಲ್ ಅವರ ಚಲನಚಿತ್ರ ದಿ ಎಟರ್ನಲ್ಸ್ ನಿಂದ ತನ್ನ ಹೆಚ್ಚಿನ ಗಳಿಕೆ ($ 35.5 ಮಿಲಿಯನ್) ಮಾಡಿದ್ದಾರೆ.

ಎಮಿಲಿ ಬ್ಲಾಂಟ್ ಈ ಪಟ್ಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದಾರೆ
ಕಳೆದ ವರ್ಷ, ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿದ್ದ ಸ್ಕಾರ್ಲೆಟ್ ಜೋಹಾನ್ಸನ್ $ 56 ಮಿಲಿಯನ್ ಗಳಿಸಿದ್ದರು. ಈ ಪಟ್ಟಿಯಲ್ಲಿ ಬ್ಲಂಟ್ ಹೊಸ ನಟಿಯಾಗಿದ್ದಾರೆ. 'ಎ ಕ್ವಾಯಿಟ್ ಪ್ಲೇಸ್: ಭಾಗ 2' ಮತ್ತು ಡಿಸ್ನಿಯ ಮುಂದಿನ ಚಿತ್ರ 'ಜಂಗಲ್ ಕ್ರೂಸ್' ಚಿತ್ರಕ್ಕಾಗಿ ಅವರಿಗೆ ಉತ್ತಮ ಸಂಭಾವನೆ ನೀಡಲಾಗಿದೆ. ಇದರೊಂದಿಗೆ, ಅವರು ಈ ಪಟ್ಟಿಯಲ್ಲಿ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಷಯ್ ಕುಮಾರ್ ಹೆಸರೂ ಕೂಡ ಶಾಮೀಲಾಗಿದೆ
ಈ ವರ್ಷಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ನಟಿಯಾರು ಒಟ್ಟು 254 ಮಿಲಿಯನ್ ಡಾಲರ್ ಗಳಿಕೆ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಇದು ಶೇ.20ರಷ್ಟು ಕಡಿಮೆಯಾಗಿದೆ.  ಇನ್ನೊಂದೆಡೆ ಈ ಬಾರಿ ಅತಿ ಹೆಚ್ಚು ಗಳಿಕೆ ಮಾಡಿದ ಟಾಪ್ 10 ನಟರ ಒಟ್ಟು ಗಳಿಕೆ 545 ಮಿಲಿಯನ್ ಡಾಲರ್ ಆಗಿದೆ.  ಡ್ವೇನ್ ಜಾನ್ಸನ್ 87.5 ಮಿಲಿಯನ್ ಡಾಲರ್ ಗಳಿಕೆ ಮಾಡುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಪಟ್ಟಿಯಲ್ಲಿ ಏಕಮಾತ್ರ ಭಾರತೀಯ ನಟರಾಗಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪುರುಷರ ಈ ಪಟ್ಟಿಯಲ್ಲಿ ರಯಾನ್ ರೆನಾಲ್ದ್ಸ್, ಮಾರ್ಕ್ ವಾಲ್ಹ್ ಬರ್ಗ್, ಬೆನ್ ಎಫ್ಲೆಕ್, ವಿನ್ ಡಿಸೇಲ್, ಲಿನ್ ಮ್ಯಾನುಅಲ್ ಮಿರಾಂಡಾ, ವಿಲ್ ಸ್ಮಿತ್, ಆಡಮ್ ಸ್ಯಾನ್ಡ್ಲಾರ್ ಹಾಗೂ ಜ್ಯಾಕಿ ಚೈನ್ ಶಾಮೀಲಾಗಿದ್ದಾರೆ.

Trending News