ವಿಶ್ವದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ 25 Whisky ಬ್ರಾಂಡ್ ಗಳು ಇಲ್ಲಿವೆ, ಇದರಲ್ಲಿ 13 ಭಾರತೀಯ ಬ್ರಾಂಡ್ ಗಳು

ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾಗುವ ವಿಸ್ಕಿ ಬ್ರಾಂಡ್ ಗಳು ಭಾರತದಲ್ಲಿವೆ. ಫೋರ್ಬ್ಸ್ ಪಟ್ಟಿಯಲ್ಲಿ ಸೇರಿಸಲಾದ ಈ 25 ವಿಸ್ಕಿ ಬ್ರಾಂಡ್‌ಗಳಲ್ಲಿ 13 ಬ್ರಾಂಡ್‌ಗಳು ಭಾರತೀಯ ವಿಸ್ಕಿಗಳಾಗಿವೆ. ಇದು ಮಾತ್ರವಲ್ಲ, ಭಾರತೀಯ ಕಂಪನಿಗಳು ಹೆಚ್ಚು ಮಾರಾಟವಾಗುವ ವಿಸ್ಕಿಯನ್ನು ಸಹ ತಯಾರಿಸುತ್ತವೆ.

Last Updated : Jul 8, 2020, 07:34 PM IST
ವಿಶ್ವದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ 25 Whisky ಬ್ರಾಂಡ್ ಗಳು ಇಲ್ಲಿವೆ, ಇದರಲ್ಲಿ 13 ಭಾರತೀಯ ಬ್ರಾಂಡ್ ಗಳು title=

ನವದೆಹಲಿ: ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಬ್ರಾಂಡ್ ಎಂದರೆ ಅದು ಮೆಕ್‌ಡೊವೆಲ್ಸ್. ಈ ಪಟ್ಟಿಯಲ್ಲಿ ಯಾವುದೇ ಒಂದು ಬ್ರಾಂಡ್ 1000 ಸೆಲ್ ಗಳನ್ನು ಮಾರಾಟ ಮಾಡಿದೆ ಎಂದರೆ ಅದರ ಅರ್ಥ ಕಂಪನಿ 10 ಲಕ್ಷ ಕೇಸ್ ಗಳನ್ನು ಮಾರಾಟ ಮಾಡಿದೆ ಎಂದರ್ಥ. ವರ್ಷ 2019ರಲ್ಲಿ ಮೆಕ್‌ಡೊವೆಲ್ಸ್ ಒಟ್ಟು 30,700 ಕೇಸ್ ಗಳನ್ನು ಮಾರಾಟ ಮಾಡಿದೆ. ಅಂದರೆ ಒಟ್ಟು 3070 ಕೋಟಿ ಕೇಸ್ ಗಳನ್ನು ಮಾರಾಟ ಮಾಡಿದೆ. ಯುನೈಟೆಡ್ ಬೆವ್ರೆಜಿಸ್ ಇದನ್ನು ತಯಾರಿಸುತ್ತದೆ.

ಆಫೀಸರ್ಸ್ ಚಾಯಿಸ್ ಎರಡನೇ ಸ್ಥಾನದಲ್ಲಿದ್ದು, ಇದು ಒಟ್ಟು 30600 ಕೇಸ್ ಗಳನ್ನು ಮಾರಾಟ ಮಾಡಿದೆ. ಇದನ್ನು ಎಲಾಯ್ಡ್ ಬ್ಲೆಂಡರ್ಸ್ ಡಿಸ್ಟಿಲರಿಸ್ ತಯಾರಿಸುತ್ತದೆ. ಮೂರನೇ ಸ್ಥಾನದಲ್ಲಿ ಇಂಪೀರಿಯಲ್ ಬ್ಲೂ ಇದ್ದು, ಇದನ್ನು ಪರ್ನಾಡ್ ರಿಕಾರ್ಡ್ ತಯಾರಿಸುತ್ತದೆ. ಇದು ಒಟ್ಟು 26,300 ಕೇಸ್ ಗಳ ಮಾರಾಟ ಮಾಡಿದೆ.

ರಾಯಲ್ ಸ್ಟ್ಯಾಗ್ ನಾಲ್ಕನೇ ಸ್ಥಾನದಲ್ಲಿದೆ. ಇದನ್ನು ಕೂಡ ಪರ್ನಾಡ್ ರಿಕಾರ್ಡ್ ತಯಾರಿಸುತ್ತದೆ. ಇದು ಒಟ್ಟು 22 ಸಾವಿರ ಕೇಸ್ ಗಳನ್ನು ಮಾರಾಟ ಮಾಡಿದೆ. ಐದನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ಕಂಪನಿಯಾಗಿರುವ ಡಿಯೊಜಿಯೋ ಬ್ರಾಂಡ್ ನ ಜಾನಿವಾಕರ್ ಇದೆ. ಇದು ಒಟ್ಟು 18,400 ಕೇಸ್ ಗಳನ್ನು ಮಾರಾಟ ಮಾಡಿದೆ.

ಆರನೇ ಸ್ಥಾನದಲ್ಲಿ ಅಮೆರಿಕಾದ ವಿಸ್ಕಿ ಬ್ರಾಂಡ್ ಆಗಿರುವ ಜಾಕ್ ಡೆನಿಯಲ್ಸ್ ಇದೆ. ಇದನ್ನು ಬ್ರೌನ್ ಫಾರ್ಮೈನ್ ಕಂಪನಿ ತಯಾರಿಸುತ್ತದೆ ಮತ್ತು ಈ ಕಂಪನಿ ಒಟ್ಟು 13,400 ಕೇಸ್ ಮಾರಾಟ ಮಾಡಿದೆ. ಏಳನೇ ಸ್ಥಾನದಲ್ಲಿ ಭಾರತೀಯ ಕಂಪನಿಯಾಗಿರುವ ಜಾನಿ ಡಿಸ್ಟಿಲರಿಸ್ ನ ಒರಿಜಿನಲ್ ಚಾಯಿಸ್ ಇದೆ. ಈ ಕಂಪನಿ ಒಟ್ಟು 12,700 ಕೇಸ್ ಮಾರಾಟ ಮಾಡಿದೆ.

ಎಂಟನೆ ಸ್ಥಾನದಲ್ಲಿ ಅಮೆರಿಕಾದ ಕಂಪನಿ ಬೀಮ್ ಸನಟೋರಿ ಕಂಪನಿಯ ಜಿಮ್ ಬೀಮ್ ಇದೆ. ಇದು ಒಟ್ಟು 10,400 ಕೇಸ್ ಗಳನ್ನು ಮಾರಾಟ ಮಾಡಿದೆ. ಒಂಬತ್ತನೇ ಸ್ಥಾನದಲ್ಲಿ ಯುನೈಟೆಡ್ ಬೆವರೆಜಿಸ್ ನ ಹೇವರ್ಡ್ಸ್ ಫೈನಲ್ ಇದೆ. ಇದು ಒಟ್ಟು 9600 ಕೇಸ್ ಗಳ ಮಾರಾಟ ಮಾಡಿದೆ.

ಹತ್ತನೇ ಸ್ಥಾನದಲ್ಲಿ ಭಾರತೆಯ ಕಂಪನಿ ರೈಡಿಕೋ ಖೇತಾನ್ ನ 8 ಪಿಎಂ ಇದೆ. ಈ ಕಂಪನಿ ಒಟ್ಟು 8,500 ಕೇಸ್ ಗಳನ್ನು ಮಾರಾಟ ಮಾಡಿದೆ. 11 ನೇ ಸ್ಥಾನದಲ್ಲಿ ಐರ್ಲೆಂಡ್ ನ ಪರ್ನಾಡ್ ರಿಕಾರ್ಡ್ ನ ಜೈಮ್ ಸನ್ ಇದೆ. ಇದು 8100 ಕೇಸ್ ಗಳನ್ನೂ ಮಾರಾಟ ಮಾಡಿದೆ.

12 ನೇ ಸ್ಥಾನದಲ್ಲಿ ಕೆನಡಾ ಕಂಪನಿಯಾಗಿರುವ ಕ್ರೌನ್ ರಾಯಲ್ (7900 ಕೇಸ್ ಮಾರಾಟ) ಇದೆ.
13 ನೇ ಸ್ಥಾನದಲ್ಲಿ ಸ್ಕಾಟ್ಲ್ಯಾಂಡ್ ನ ಕಂಪನಿಯಾಗಿರುವ ಬ್ಯಾಲೆಂಟೈನ್ಸ್ (7700 ಕೇಸ್ ಮಾರಾಟ) ಇದೆ.
14 ನೇ ಸ್ಥಾನದಲ್ಲಿ ಭಾರತೀಯ ಕಂಪನಿ ಬ್ಲೆಂಡರ್ಸ್ ಪ್ರೈಡ್ (7700 ಕೇಸ್ ಮಾರಾಟ) ಇದೆ. 15 ನೇ ಸ್ಥಾನದಲ್ಲಿ ಭಾರತೀಯ ಬ್ರಾಂಡ್ ಬ್ಯಾಗ್ ಪೈಪರ್ (6100 ಕೇಸ್ ಮಾರಾಟ) ಇದೆ.
16 ನೇ ಸ್ಥಾನದಲ್ಲಿ ಭಾರತೀಯ ಬ್ರಾಂಡ್ ರಾಯಲ್ ಚಾಲೆಂಜ್ (5500 ಕೇಸ್ ಮಾರಾಟ) ಇದೆ. 17 ನೇ ಸ್ಥಾನದಲ್ಲಿ ಓಲ್ಡ್ ಟ್ರ್ಯಾವರ್ನ್ (5300 ಕೇಸ್ ಮಾರಾಟ) ಇದೆ.
18 ನೇ ಸ್ಥಾನದಲ್ಲಿ ಜಪಾನ್ ಬಿಮ್ ಸಂಟೋರಿಯ ಕಂಪನಿಗೆ ಬ್ರಾಂಡ್ ಕಾಕುಬಿನ್ ( 5200 ಕೇಸ್ ಮಾರಾಟ) ಇದೆ. 19 ನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ನ ಶಿವಾಸ್ ರಿಗಲ್ (4400 ಕೇಸ್ ಮಾರಾಟ) ಇದೆ.
20 ನೇ ಸ್ಥಾನದಲ್ಲಿ ಭಾರತೀಯ ಬ್ರಾಂಡ್ ಬೆಂಗಳೂರು ಮಾಲ್ಟ್ (4200 ಕೇಸ್ ಮಾರಾಟ) ಇದೆ. 21ನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ನ ಗ್ರಾಂಟ್ಸ್ (4200 ಕೇಸ್ ಮಾರಾಟ) ಇದೆ.
22 ನೇ ಸ್ಥಾನದಲ್ಲಿ ಭಾರತೀಯ ಬ್ರಾಂಡ್ ಡೈರೆಕ್ಟರ್ಸ್ ಸ್ಪೆಷಲ್ (4200 ಕೇಸ್ ಮಾರಾಟ) ಇದೆ. 23 ನೇ ಸ್ಥಾನದಲ್ಲಿ ಜಪಾನ್ ನ ಬ್ಲಾಕ್ ನಿಕ್ಕಾ (3400 ಕೇಸ್ ಮಾರಾಟ) ಇದೆ.
24 ನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ಬ್ರಾಂಡ್ ಬಕಾರ್ಡಿ ವಿಲಿಯಂ ಲಾಸಂಸ್ (3300 ಕೇಸ್ ಮಾರಾಟ) ಇದೆ. 25 ನೇ ಸ್ಥಾನದಲ್ಲಿ ಸ್ಕಾಟ್ಲೆಂಡ್ ನ ಡೆವಾರ್ಸ್ (3000 ಕೇಸ್ ಮಾರಾಟ) ಇದೆ.

Trending News