'ಹೆಪಟೈಟಿಸ್ ಎ'ಗೆ 12 ಬಲಿ, ಈ ಮಾರಣಾಂತಿಕ ಕಾಯಿಲೆಯ ಲಕ್ಷಣಗಳಿವು!

Hepatitis A: ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಹೆಪಟೈಟಿಸ್ ಎ ವೇಗವಾಗಿ ಹೆಚ್ಚುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಹೆಪಟೈಟಿಸ್ ಎ ಏಕೆ  ಪ್ರಕರಣಗಳು ಏಕೆ ಹೆಚ್ಚಾಗುತ್ತಿವೆ, ಮಾರಣಾಂತಿಕ ಕಾಯಿಲೆ ಹೆಪಟೈಟಿಸ್ ಎ ರೋಗಲಕ್ಷಣಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : May 20, 2024, 11:58 AM IST
  • ಹೆಪಟೈಟಿಸ್ ಎ ರೋಗವು ಯಾವುದೇ ಗಂಭೀರ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ.
  • ಆದರೆ, ಹೆಪಟೈಟಿಸ್ ಎ ವೈರಸ್ ನೇರವಾಗಿ ಯಕೃತ್ತಿನ ಮೇಲೆ ದಾಳಿ ಮಾಡುತ್ತದೆ
  • ಇದರಿಂದಾಗಿ ಕೆಲವು ರೋಗಿಗಳು ಕಾಮಾಲೆಗೆ ಒಳಗಾಗಬಹುದು. ಇನ್ನೂ ಕೆಲವರಿಗೆ ಯಕೃತ್ ಹಾನಿಯಾಗಬಹುದು.
'ಹೆಪಟೈಟಿಸ್ ಎ'ಗೆ 12 ಬಲಿ, ಈ ಮಾರಣಾಂತಿಕ ಕಾಯಿಲೆಯ ಲಕ್ಷಣಗಳಿವು!  title=

Hepatitis A Symptoms: ಕಳೆದ ಕೆಲ ತಿಂಗಳುಗಳಲ್ಲಿ ಕರ್ನಾಟಕದ ನೆರೆಯ ರಾಜ್ಯ ಕೇರಳದಲ್ಲಿ ಹೆಪಟೈಟಿಸ್ ಎ ಪ್ರಕರಣಗಳು (Hepatitis A cases in Kerala) ವೇಗವಾಗಿ ಹೆಚ್ಚಾಗುತ್ತಿದೆ. ಪಿತ್ತಜನಕಾಂಗಕ್ಕೆ ಹಾನಿಯುಂಟು ಮಾಡುವ ಹೆಪಟೈಟಿಸ್ ಎ ಕಾಯಿಲೆಯಿಂದ ಇದುವರೆಗೆ 12 ಜನರು ಮೃತಪಟ್ಟಿದ್ದಾರೆ.  

ಲಭ್ಯವಿರುವ ಮಾಹಿತಿಯ ಪ್ರಕಾರ, ಕೇರಳದ ಮಲಪ್ಪುರಂ, ಎರ್ನಾಕುಲಂ, ಕೋಝಿಕ್ಕೋಡ್ ಮತ್ತು ತ್ರಿಶೂರ್ ಪ್ರದೇಶಗಳಲ್ಲಿ ಹೆಪಟೈಟಿಸ್ ಎ ಪ್ರಕರಣಗಳು (Hepatitis A cases) ವೇಗವಾಗಿ ಹೆಚ್ಚಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ ಸುಮಾರು 2000 ಪ್ರಕರಣಗಳು ಪತ್ತೆಯಾಗಿದ್ದು ಪರಿಸ್ಥಿತಿಯ ಮೇಲೆ ತೀವ್ರ ನಿಗಾ ಇರಿಸಿರುವ ಕೇರಳ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ. 

ಹೆಪಟೈಟಿಸ್ ಎ ಕಾಯಿಲೆ: 
ಹೆಪಟೈಟಿಸ್ ಎ ರೋಗವು (Hepatitis A Disease) ಯಾವುದೇ ಗಂಭೀರ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಆದರೆ, ಹೆಪಟೈಟಿಸ್ ಎ ವೈರಸ್ ನೇರವಾಗಿ ಯಕೃತ್ತಿನ (Liver) ಮೇಲೆ ದಾಳಿ ಮಾಡುತ್ತದೆ, ಇದರಿಂದಾಗಿ ಕೆಲವು ರೋಗಿಗಳು ಕಾಮಾಲೆಗೆ ಒಳಗಾಗಬಹುದು. ಇನ್ನೂ ಕೆಲವರಿಗೆ ಯಕೃತ್ ಹಾನಿಯಾಗಬಹುದು. ಆರಂಭದಲ್ಲಿಯೇ 
ಈ ಸಮಸ್ಯೆಯನ್ನು ಗುರುತಿಸಿ ಸರಿಯಾಗಿ ಚಿಕಿತ್ಸೆ ಪಡೆಯದಿದ್ದರೆ ಇದು ಸಾವಿಗೂ ಕಾರಣವಾಗಬಹುದು. 

ಇದನ್ನೂ ಓದಿ- ದೇಹದಲ್ಲಿ ರಕ್ತದ ಅಂಶವನ್ನು ಹೆಚ್ಚಿಸಲಿವೆ ಈ 5 ಆಹಾರಗಳು...!

ಹೆಪಟೈಟಿಸ್ ಎ  ಮಾರಣಾಂತಿಕ ಸ್ವರೂಪ ಪಡೆಯಲು ಕಾರಣವೇನು? 
ಆರೋಗ್ಯ ತಜ್ಞರ ಪ್ರಕಾರ, ಕಲುಷಿತ ಆಹಾರ, ಕಲುಷಿತ ನೀರಿನ ಸೇವನೆ ಹೆಪಟೈಟಿಸ್ ಎ  ಮಾರಣಾಂತಿಕ ಸ್ವರೂಪವನ್ನು ಪಡೆಯಲು ಪ್ರಮುಖ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. 

ಹೆಪಟೈಟಿಸ್ ಎ ರೋಗದ ಲಕ್ಷಣಗಳೇನು?
ಮೊದಲೇ ತಿಳಿಸಿದಂತೆ ಹೆಪಟೈಟಿಸ್ ಎ ರೋಗವು ಯಾವುದೇ ಗಂಭೀರ ರೋಗ ಲಕ್ಷಣಗಳನ್ನು ಒಳಗೊಂಡಿರುವುದಿಲ್ಲ. ಆದರೂ, ಹೆಪಟೈಟಿಸ್ ಎ ರೋಗದ ಕೆಲವು ಸಾಮಾನ್ಯ ಲಕ್ಷಣಗಳೆಂದರೆ... 
>> ಏನೇ ತಿಂದರೂ ವಾಂತಿಯಾಗುವುದು 
>> ಆಯಾಸ/ದೌರ್ಬಲ್ಯ 
>> ತೀವ್ರ ಹೊಟ್ಟೆ ನೋವು 
>> ಹಸಿವಿನ ಕೊರತೆ 
>> ಅತಿಯಾದ ಜ್ವರ 
>> ಗಾಢ ಬಣ್ಣದ ಮೂತ್ರ 
>> ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು
>> ತೀವ್ರ ತುರಿಕೆ ಸಮಸ್ಯೆ 

ಇದನ್ನೂ ಓದಿ- Period Abnormalities: ಋತುಚಕ್ರದ ಸಮಯದಲ್ಲಿ ಈ ಐದು ಅಸಹಜತೆಗಳನ್ನು ಎಂದಿಗೂ ನಿರ್ಲಕ್ಷಿಸಬೇಡಿ!!

ಹೆಪಟೈಟಿಸ್ ಎ ಚಿಕಿತ್ಸೆ: 
ಹೆಪಟೈಟಿಸ್ ಎ ತಡೆಗಟ್ಟಲು ಚಿಕಿತ್ಸೆ ಲಭ್ಯವಿದೆ. ಹೆಪಟೈಟಿಸ್ ಎ ಲಸಿಕೆ ಅಥವಾ ಇಮ್ಯುನೊಗ್ಲಾಬ್ಯುಲಿನ್ ಎಂಬ ಪ್ರತಿಕಾಯದ ಚುಚ್ಚುಮದ್ದು ಈ ವೈರಸ್‌ನ ಸಂಪರ್ಕಕ್ಕೆ ಬಂದ ಎರಡು ವಾರಗಳಲ್ಲಿ ಈ ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ ಎಂದು ವೈದ್ಯರು ಸಲಹೆ ನೀಡುತ್ತಾರೆ. 

ಹೆಪಟೈಟಿಸ್ ಎ ನಿಂದ ದೂರ ಉಳಿಯಲು ಏನು ಮಾಡಬೇಕು? 
* ಆಗಾಗ್ಗೆ ಕೈ ತೊಳೆಯುತ್ತಿರಿ. 
* ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. 
* ಚೆನ್ನಾಗಿ ಕುದಿಸಿ ಶೋಧಿಸಿದ ನೀರನ್ನಷ್ಟೇ ಕುಡಿಯಿರಿ. 
* ಹೊರಗಿನ ಶೌಚಾಲಯಗಳನ್ನು ಬಳಸುವುದನ್ನು ತಪ್ಪಿಸಿ. 
* ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಿ. 
* ವಾಂತಿ, ಅತಿಸಾರದ ಸಂದರ್ಭದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News