Moringa Leaves: ನುಗ್ಗೆ ಸೊಪ್ಪನ್ನು ಈ ರೀತಿ ಬಳಸಿದರೆ ಸಿಗುತ್ತೆ ಹಲವು ಪ್ರಯೋಜನ

Benefits of Moringa Leaves: ಮೊರಿಂಗಾ ಎಳೆಗಳು ಎಂದು ಕರೆಯಲ್ಪಡುವ ನುಗ್ಗೆ ಸೊಪ್ಪು ಆರೋಗ್ಯಕ್ಕೆ ಒಂದಲ್ಲಾ, ಎರಡಲ್ಲಾ ಹಲವು ಪ್ರಯೋಜನಗಳನ್ನು ನೀಡುತ್ತದೆ. ನೀವೂ ಕೂಡ ಇದನ್ನು ನಿಮ್ಮ ಡಯಟ್ನಲ್ಲಿ ಸೇರಿಸಿದರೆ ಇದು ನಿಮ್ಮನ್ನು ಹಲವು ಆರೋಗ್ಯ ಸಮಸ್ಯೆಗಳಿಂದ ದೂರವಿರಿಸುತ್ತದೆ.

Written by - Yashaswini V | Last Updated : May 31, 2022, 08:28 AM IST
  • ನುಗ್ಗೆ ಸೊಪ್ಪಿನಲ್ಲಿ ಪೌಷ್ಟಿಕಾಂಶದ ಅಂಶಗಳಲ್ಲಿ ಸಮೃದ್ಧವಾಗಿದೆ.
  • ಈ ಕಾರಣದಿಂದಾಗಿ ಇದನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ.
  • ಅಲ್ಲದೆ, ಇದು ಅನೇಕ ರೋಗಗಳನ್ನು ತೊಡೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ.
Moringa Leaves: ನುಗ್ಗೆ ಸೊಪ್ಪನ್ನು ಈ ರೀತಿ ಬಳಸಿದರೆ ಸಿಗುತ್ತೆ ಹಲವು ಪ್ರಯೋಜನ  title=
Moringa Leaves Benefits

ನುಗ್ಗೆ ಸೊಪ್ಪಿನ ಪ್ರಯೋಜನಗಳು: ಭಾರತದಲ್ಲಿ ಅನೇಕ ವಿಧದ ಹಣ್ಣುಗಳು ಮತ್ತು ತರಕಾರಿಗಳು ಲಭ್ಯವಿವೆ, ಅವುಗಳು ತುಂಬಾ ಪೌಷ್ಟಿಕವಾಗಿರುತ್ತವೆ ಮತ್ತು ಅವುಗಳನ್ನು ಔಷಧವಾಗಿಯೂ ಬಳಸಲಾಗುತ್ತದೆ, ಅಂತಹ ತರಕಾರಿಗಳಲ್ಲಿ ಮೊರಿಂಗಾ ಎಲೆಗಳು ಅಂದರೆ ನುಗ್ಗೆ ಸೊಪ್ಪು ಕೂಡ ಒಂದು. ಹೆಚ್ಚಿನ ಜನರು ಇದನ್ನು ಡ್ರಮ್ ಸ್ಟಿಕ್ ಎಲೆಗಳು ಎಂಬ ಹೆಸರಿನಿಂದಲೂ ಕರೆಯುತ್ತಾರೆ. 

ನುಗ್ಗೆ ಸೊಪ್ಪಿನಲ್ಲಿ ಪೌಷ್ಟಿಕಾಂಶದ ಅಂಶಗಳಲ್ಲಿ ಸಮೃದ್ಧವಾಗಿದೆ, ಈ ಕಾರಣದಿಂದಾಗಿ ಇದನ್ನು ಸೂಪರ್ಫುಡ್ ಎಂದು ಕರೆಯಲಾಗುತ್ತದೆ. ಅಲ್ಲದೆ, ಇದು ಅನೇಕ ರೋಗಗಳನ್ನು ತೊಡೆದುಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ದೇಹವು ಫಿಟ್ ಮತ್ತು ಆರೋಗ್ಯಕರವಾಗಿರುತ್ತದೆ. ಇಂದು ಈ ಲೇಖನದಲ್ಲಿ ಮೊರಿಂಗಾ ಅಂದರೆ ಡ್ರಮ್ ಸ್ಟಿಕ್ ಎಲೆಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ...

ಇದನ್ನೂ ಓದಿ- Side Effects Of Tea: ನೀವು ಚಹಾ ಪ್ರಿಯರೆ! ಹಾಗಂತ ಅತಿಯಾಗಿ ಸೇವಿಸಿದರೆ ತಪ್ಪಿದ್ದಲ್ಲ ಅಪಾಯ!

ನುಗ್ಗೆ ಸೊಪ್ಪಿನ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ :
ಹೃದಯಾಘಾತದ ಅಪಾಯದಿಂದ ರಕ್ಷಣೆ:

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೃದಯ ಸಂಬಂಧಿತ ಕಾಯಿಲೆಗಳಿಗೆ  ತುತ್ತಾಗುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ ಮೊರಿಂಗಾ ಎಲೆಗಳನ್ನು ಸೇವಿಸುವುದು ಪ್ರಯೋಜನಕಾರಿಯಾಗಿದೆ. ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ, ಇದು ಹೃದಯವನ್ನು ಸದೃಢವಾಗಿರಿಸುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯಕ:
ಅಧಿಕ ರಕ್ತದೊತ್ತಡದ ದೂರುಗಳನ್ನು ಹೊಂದಿರುವ ಜನರಿಗೆ ಡ್ರಮ್ ಸ್ಟಿಕ್ ಎಲೆಗಳು ತುಂಬಾ ಪ್ರಯೋಜನಕಾರಿ. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಅದನ್ನು ಆರೋಗ್ಯಕರವಾಗಿಸುತ್ತದೆ.ಇದು ನಿಮ್ಮ ದೇಹವನ್ನು ಆರೋಗ್ಯಕರವಾಗಿಸಲು ಮತ್ತು ದೇಹವನ್ನು ರೋಗ ಮುಕ್ತವಾಗಿಸುವಲ್ಲಿ ತುಂಬಾ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- Type 2 Diabetes: ಈ ಬೆಳಗಿನ ಪಾನೀಯ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಿದ್ದಂತೆ!

ತೂಕವೂ ನಿಯಂತ್ರಣ:
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ತೂಕ ಹೆಚ್ಚಾಗುವುದರ ಬಗ್ಗೆ ತುಂಬಾ ಚಿಂತಿತರಾಗಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ, ಡ್ರಮ್ ಸ್ಟಿಕ್ ರಸವು ಪ್ರಯೋಜನಕಾರಿಯಾಗಿದೆ. ನುಗ್ಗೆ ಸೊಪ್ಪು ದೇಹದ ತೂಕವನ್ನು ಕಡಿಮೆ ಮಾಡುವುದರ ಜೊತೆಗೆ ತೂಕವನ್ನು ನಿಯಂತ್ರಣದಲ್ಲಿಡಲು ಸಹಕಾರಿ ಆಗಿದೆ. ತೂಕ ಹೆಚ್ಚಾಗುವುದರಿಂದ ತೊಂದರೆ ಇರುವವರು ಇದರ ರಸವನ್ನು ದಿನನಿತ್ಯ ಸೇವಿಸಬೇಕು, ಜೊತೆಗೆ ಇದನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಬಹಳಷ್ಟು ಪ್ರಯೋಜನವನ್ನು ಪಡೆಯಬಹುದಾಗಿದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News