Type 2 Diabetes: ಈ ಬೆಳಗಿನ ಪಾನೀಯ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಿದ್ದಂತೆ!

Barley Water For Diabetes: ಪ್ರತಿದಿನ ಮಧುಮೇಹ ರೋಗಿಗಳು ಅವರು ಯಾವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಹಾಗೆಯೇ ಅವರು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಿಕೊಳ್ಳಬೇಕು. 

Written by - Yashaswini V | Last Updated : May 30, 2022, 08:29 AM IST
  • ಬಾರ್ಲಿ ನೀರಿನಲ್ಲಿ ಫೈಬರ್, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ವಿಟಮಿನ್ ಬಿ 6 ನಂತಹ ಅನೇಕ ಪ್ರಮುಖ ಪೋಷಕಾಂಶಗಳು ಕಂಡು ಬರುತ್ತವೆ.
  • ಬಾರ್ಲಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಬಾರ್ಲಿ ನೀರಿನಲ್ಲಿ ನಾರಿನ ಪ್ರಮಾಣವು ತುಂಬಾ ಹೆಚ್ಚಿರುವುದರಿಂದ ಇದು ಎಲ್ಲಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.
Type 2 Diabetes: ಈ ಬೆಳಗಿನ ಪಾನೀಯ ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ರಾಮಬಾಣವಿದ್ದಂತೆ! title=
Barley Water For Diabetes

ಮಧುಮೇಹಕ್ಕೆ ಬಾರ್ಲಿ ನೀರು: ರತದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲಿ ಮಧುಮೇಹವು ಗಂಭೀರ ಕಾಯಿಲೆಯ ರೂಪವನ್ನು ಪಡೆದುಕೊಂಡಿದೆ. ನಿತ್ಯ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಯಾರಿಗಾದರೂ ಒಮ್ಮೆ ಮಧುಮೇಹ ಬಂದರೆ, ನಂತರ ಜೀವನದುದ್ದಕ್ಕೂ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೇಗೆ ನಿಯಂತ್ರಿಸುವುದು ಎಂಬ ಚಿಂತೆ ಇರುತ್ತದೆ. ಆದರೆ, ಬೆಳಗ್ಗೆ ಬೇಗ ಎದ್ದು ಸ್ಪೆಷಲ್ ಡ್ರಿಂಕ್ಸ್ ಕುಡಿದರೆ ಡಯಾಬಿಟಿಸ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ. 

ಮಧುಮೇಹಿಗಳು ಪ್ರತಿದಿನ ಬೆಳಿಗ್ಗೆ ಬಾರ್ಲಿ ನೀರನ್ನು ಕುಡಿಯುವುದು ಪ್ರಯೋಜನಕಾರಿ:
ಹೌದು, ಡಯಾಬಿಟಿಸ್ ಸಮಸ್ಯೆ ಇರುವವರು ನಿತ್ಯ ಬೆಳಿಗ್ಗೆ ಬೇಗ ಎದ್ದು ಬಾರ್ಲಿ ನೀರನ್ನು ಕುಡಿಯುವುದು ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. ಮುಂಜಾನೆ ನೀವು ಎದ್ದ ನಂತರ ಇದನ್ನು ಕುಡಿದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣಕ್ಕೆ ಬರುವುದು ಮಾತ್ರವಲ್ಲದೆ ದಿನವಿಡೀ ಶಕ್ತಿಯುತವಾಗಿರಲು ಇದು ಸಹಕಾರಿ ಆಗಿದೆ. ಅಷ್ಟೇ ಅಲ್ಲ, ಬಾರ್ಲಿ ನೀರು ಜೀರ್ಣಾಂಗ ವ್ಯವಸ್ಥೆಯನ್ನು ಸಹ ಉತ್ತಮವಾಗಿರುತ್ತದೆ. ಜೊತೆಗ್ ತೂಕ ನಷ್ಟಕ್ಕೂ ಸಹಕಾರಿ ಆಗಿದೆ.

ಇದನ್ನೂ ಓದಿ- Health Care Tips: ಅಧಿಕ ರಕ್ತದೊತ್ತಡ ಇರುವವರು ಈ ಜ್ಯೂಸ್ ಖಂಡಿತ ಸೇವಿಸಬೇಕು, ಬಿಪಿ ನಿಯಂತ್ರಣದಲ್ಲಿರುತ್ತದೆ

ನೀವು ಟೈಪ್ 2 ಡಯಾಬಿಟಿಸ್‌ನಿಂದ ಬಳಲುತ್ತಿದ್ದರೆ, ನಿಮ್ಮ ಬ್ಲಡ್ ಶುಗರ್ ಲೆವೆಲ್ ಅನ್ನು ನಿಯಂತ್ರಿಸುವುದು ಬಹಳ ಮುಖ್ಯ. ರಕ್ತದಲ್ಲಿನ ಸಕ್ಕರೆಯ ಹೆಚ್ಚಳವು ವಿವಿಧ ತೊಡಕುಗಳಿಗೆ ಕಾರಣವಾಗಬಹುದು. ಮಧುಮೇಹವನ್ನು ನಿಯಂತ್ರಣದಲ್ಲಿಡಲು ಡಯಟ್ ಮತ್ತು ವ್ಯಾಯಾಮ ಉತ್ತಮ ಮಾರ್ಗವಾಗಿದೆ. ಇದಕ್ಕೆ ಬಾರ್ಲಿ ನೀರು ಕೂಡ ಪ್ರಯೋಜನಕಾರಿ ಆಗಿದೆ. 

ಬಾರ್ಲಿ ನೀರಿನ ಪ್ರಯೋಜನಗಳು:
ಫೈಬರ್, ಮೆಗ್ನೀಸಿಯಮ್, ಕಬ್ಬಿಣ, ಪೊಟ್ಯಾಸಿಯಮ್, ಪ್ರೋಟೀನ್ ಮತ್ತು ವಿಟಮಿನ್ ಬಿ 6 ನಂತಹ ಅನೇಕ ಪ್ರಮುಖ ಪೋಷಕಾಂಶಗಳು ಬಾರ್ಲಿ ನೀರಿನಲ್ಲಿ ಕಂಡುಬರುತ್ತವೆ. ಇದರೊಂದಿಗೆ ಬಾರ್ಲಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಮಧುಮೇಹದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿ,  ಮಧುಮೇಹವನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ಬಾರ್ಲಿ ನೀರಿನಲ್ಲಿ ನಾರಿನ ಪ್ರಮಾಣವು ತುಂಬಾ ಹೆಚ್ಚಿರುವುದರಿಂದ ಇದು ಎಲ್ಲಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. 

ಇದನ್ನೂ ಓದಿ- Drinking Water Before Brushing: ಬೆಳಗ್ಗೆ ಬ್ರಷ್ ಮಾಡದೆಯೇ ನೀರು ಕುಡಿಯುವುದು ಲಾಭಕಾರಿಯೇ ಅಥವಾ ಹಾನಿಕಾರಕ?

ಬಾರ್ಲಿ ನೀರನ್ನು ಹೇಗೆ ತಯಾರಿಸುವುದು?
ಮಧುಮೇಹ ನಿಯಂತ್ರಣಕ್ಕಾಗಿ ನೀವು ಬೇಯಿಸಿದ ನೀರನ್ನು ಕುಡಿಯಲು ಎರಡು ಮಾರ್ಗಗಳಿವೆ - ಒಂದು ಬಾರ್ಲಿ ಕಾಳುಗಳನ್ನು ಸೋಸಿರುವುದು ಮತ್ತು ಒಂದು ಸಿಹಿಕಾರಕ ಅಥವಾ ಹಣ್ಣಿನ ರಸದೊಂದಿಗೆ ಧಾನ್ಯವನ್ನು ಬೆರೆಸುವುದು.

ನೀವು ಬಾರ್ಲಿ ನೀರನ್ನು 2 ರೀತಿಯಲ್ಲಿ ಕುಡಿಯಬಹುದು, ಮೊದಲು ಬಾರ್ಲಿ ಧಾನ್ಯಗಳನ್ನು ಫಿಲ್ಟರ್ ಮಾಡಿ ಮತ್ತು ಹಣ್ಣಿನ ರಸದೊಂದಿಗೆ ಈ ಧಾನ್ಯವನ್ನು ಬೆರೆಸಿ, ಸೇವಿಸಬಹುದು. ಫಿಲ್ಟರ್ ಮಾಡಿದ ನಂತರ ನೀವು ಬಾರ್ಲಿ ನೀರನ್ನು ಸೇವಿಸಿದಾಗ, ಮೊದಲ ವಿಧಾನಕ್ಕೆ ಹೋಲಿಸಿದರೆ ಅದರಲ್ಲಿರುವ ಕ್ಯಾಲೊರಿಗಳ ಪ್ರಮಾಣವು ತುಂಬಾ ಕಡಿಮೆಯಾಗುತ್ತದೆ. ಬೆಳಿಗ್ಗೆ ಅಥವಾ ಊಟದ ನಂತರ ಒಂದು ಕಪ್ ಬಾರ್ಲಿ ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಧುಮೇಹ ರೋಗಿಗಳನ್ನು ಹೊರತುಪಡಿಸಿ, ತಮ್ಮ ತೂಕವನ್ನು ಕಡಿಮೆ ಮಾಡಲು ಬಯಸುವವರಿಗೆ ಇದು ಪ್ರಯೋಜನಕಾರಿಯಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News