ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಸಮಸ್ಯೆ ಅನೇಕ ಜನರನ್ನು ಕಾಡುತ್ತಿದೆ. ಹುರಿದ ಮತ್ತು ಮಸಾಲೆಯುಕ್ತ ಆಹಾರವನ್ನು ಸೇವಿಸಿದ ತಕ್ಷಣ ಬಾದಿಸುವ ಈ ಸಮಸ್ಯೆಗೆ ನಾವಿಂದು ಸುಲಭ ಪರಿಹಾರವನ್ನು ನೀಡಲಿದ್ದೇವೆ.
ಅಸಿಡಿಟಿ ಸಮಸ್ಯೆಯನ್ನು ಹೋಗಲಾಡಿಸಲು ಕೊತ್ತಂಬರಿ ಬೀಜ ತುಂಬಾ ಪರಿಣಾಮಕಾರಿ. ಅಸಿಡಿಟಿ ಸಮಸ್ಯೆ ಇರುವವರು ಕೊತ್ತಂಬರಿ ನೀರನ್ನು ಕುಡಿಯಬಹುದು.
ಅಡುಗೆ ಮನೆಯಲ್ಲಿರುವ ಇಂಗು ಗ್ಯಾಸ್ ಸಮಸ್ಯೆಯಿಂದ ಪರಿಹಾರ ನೀಡುವಲ್ಲಿ ಪರಿಣಾಮಕಾರಿಯಾಗಿದೆ. ಇಂಗನ್ನು ಬೆಚ್ಚನೆಯ ನೀರಿನಲ್ಲಿ ಮಿಶ್ರಣ ಮಾಡಿ ಕುಡಿದರೆ, ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಶುಂಠಿಯಲ್ಲಿರುವ ಗುಣಗಳು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಕಾರಿ. ಶುಂಠಿ ತುಂಡುಗಳನ್ನು ನೀರಿನಲ್ಲಿ ಕುದಿಸಿ, ಉಗುರು ಬೆಚ್ಚಗಾದಾಗ, ಅದನ್ನು ಫಿಲ್ಟರ್ ಮಾಡಿ ಕುಡಿಯಬಹುದು.
ಗ್ಯಾಸ್ ಸಮಸ್ಯೆ ಇದ್ದರೆ ಮಜ್ಜಿಗೆ ಕುಡಿಯಬಹುದು. ಇದರಲ್ಲಿರುವ ಲ್ಯಾಕ್ಟಿಕ್ ಆಮ್ಲವು ಆಮ್ಲೀಯತೆಯನ್ನು ಕಡಿಮೆ ಮಾಡಲು ಸಹಾಯಕವಾಗಿದೆ.
ಲೇಖನದಲ್ಲಿ ನೀಡಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.