ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಕೇಂದ್ರ ಬಜೆಟ್ ಮಂಡಿಸಿದರು.
ಹೊಸ ವಿಧಾನದಲ್ಲಿ ಆದಾಯ ತೆರಿಗೆ ಸ್ಲ್ಯಾಬ್ನಲ್ಲಿ ತುಸು ಬದಲಾವಣೆಯನ್ನು ಮಾಡಲಾಗಿದೆ.
0-3 ಲಕ್ಷ ರೂ. ಆದಾಯಕ್ಕೆ ಯಾವುದೇ ರೀತಿಯ ತೆರಿಗೆ ಇರುವುದಿಲ್ಲ
3 ರಿಂದ 7 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.5ರಷ್ಟು ತೆರಿಗೆ
7 ರಿಂದ 10 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.10ರಷ್ಟು ತೆರಿಗೆ
10-12 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ15ರಷ್ಟು ತೆರಿಗೆ
12-15 ಲಕ್ಷ ರೂ. ವರೆಗಿನ ಆದಾಯದ ಮೇಲೆ ಶೇ.20ರಷ್ಟು ತೆರಿಗೆ
15 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಆದಾಯಕ್ಕೆ ಶೇ.30ರಷ್ಟು ತೆರಿಗೆ