ಈ ಕಾಯಿಲೆಗಳಿಗೆ ಮದ್ದು ಶಂಖ ಪುಷ್ಪ ನೆನೆಸಿಟ್ಟ ನೀರು

ಶಂಖ ಪುಷ್ಪ

ಶಂಖ ಪುಷ್ಪದ ನೀರನ್ನು ಸೇವಿಸುವುದರಿಂದ ಅನೇಕ ಕಾಯಿಲೆಗಳಿಗೆ ಪರಿಹಾರವಾಗಿ ಕೆಲಸ ಮಾಡುತ್ತದೆ.

ನರಗಳ ಆರೋಗ್ಯಕ್ಕೆ

ಶಂಖ ಪುಷ್ಪದ ನೀರು ನರಗಳನ್ನು ಶಾಂತವಾಗಿಸುವ ಕೆಲಸ ಮಾಡುತ್ತದೆ. ಇದರಿಂದ ಸ್ಟ್ರೋಕ್ ಆಗುವ ಅಪಾಯ ತಪ್ಪುತ್ತದೆ.

ತ್ವಚೆಯ ಆರೋಗ್ಯಕ್ಕೆ

ತ್ವಚೆಯನ್ನು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ದೇಹ ನಿರ್ವಿಷವಾಗುತ್ತದೆ. ಹಾಗಾಗಿ ತ್ವಚೆಯ ಅಂದ ಹೆಚ್ಚುತ್ತದೆ.

ಜ್ವರ

ಜ್ವರದ ಸಂದರ್ಭದಲ್ಲಿಯೂ ಈ ಹೂವಿನ ನೀರು ಬಹಳಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು.

ಮಧುಮೇಹ

ಶಂಖ ಪುಷ್ಪ ಹೂವಿನಲ್ಲಿ ಆಂಟಿ ಆಕ್ಸಿಡೆಂಟ್, ಅಂತು ಬ್ಯಾಕ್ಟೀರಿಯಲ್, ಆಂಟಿ ಫಂಗಲ್ ಗುಣ ಇರುತ್ತದೆ. ಅಲ್ಲದೆ ಇದು ಮಧುಮೇಹ ರೋಗಿಗಳಿಗೂ ಸಹಾಯಕ.

ಜೀರ್ಣಕ್ರಿಯೆ

ಶಂಖ ಪುಷ್ಪ ಹೂವಿನ ಸೇವನೆಯಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆಯುತ್ತದೆ. ಇದರಿಂದ ಗ್ಯಾಸ್, ಆಸಿಡಿಟಿ, ಮಲಬದ್ದತೆ ಮುಂತಾದ ಸಮಸ್ಯೆಯಿಂದ ಕೂಡಾ ಮುಕ್ತಿ ಸಿಗುತ್ತದೆ.

ತೂಕ ಇಳಿಕೆಗೆ

ದೇಹ ತೂಕ ಇಳಿಸಲು ಕೂಡಾ ಇದು ಸಹಾಯ ಮಾಡುತ್ತದೆ.

ಹೀಗೆ ಸೇವಿಸಿ

4-5 ಶಂಖ ಪುಷ್ಪದ ಹೂವನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ಪೂರ್ತಿ ಹಾಕಿಡಿ. ಬೆಳಿಗ್ಗೆ ಇದನ್ನು ಫಿಲ್ಟರ್ ಮಾಡಿ ಕುಡಿಯಿರಿ. ಅಗತ್ಯ ಎನಿಸಿದರೆ ಈ ನೀರಿಗೆ ನಿಂಬೆ ಮತ್ತು ಜೇನುತುಪ್ಪ ಸೇರಿಸಬಹುದು.

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು,ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

VIEW ALL

Read Next Story