UPS ಪಿಂಚಣಿ

ಯೂನಿಫೈಡ್‌ ಪೆನ್ಶನ್‌ ಸ್ಕೀಂ(UPS) ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ಮೂಲಕ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರ್ಕಾರಿ ನೌಕರರ ಹಿತ ಕಾಯ್ದಿದೆ.

Puttaraj K Alur
Aug 28,2024

ಹಣಕಾಸು ಭದ್ರತೆ

ಈ ಏಕೀಕೃತ ಪಿಂಚಣಿ ಯೋಜನೆಯು ಸರ್ಕಾರಿ ನೌಕರರಿಗೆ ಹಣಕಾಸು ಭದ್ರತೆಯ ಜೊತೆಗೆ ಸಾಮಾಜಿಕ ಗೌರವ ನೀಡಲಿದೆ.

ಶೇ.50ರಷ್ಟು ಪಿಂಚಣಿ

ಕನಿಷ್ಠ 25 ವರ್ಷ ಸೇವೆ ಪೂರೈಸಿದ ಉದ್ಯೋಗಿಗೆ, ನಿವೃತ್ತಿಯ ಹಿಂದಿನ 12 ತಿಂಗಳ ಸರಾಸರಿ ಮೂಲ ವೇತನದ ಶೇ.50ರಷ್ಟು ಪಿಂಚಣಿ ದೊರೆಯಲಿದೆ.

ಶೇ.60ರಷ್ಟು ಪಿಂಚಣಿ

ಒಂದು ವೇಳೆ ಉದ್ಯೋಗಿ ಮೃತರಾದರೆ ಅವರ ಕುಟುಂಬಕ್ಕೆ ಶೇ.60ರಷ್ಟು ಪಿಂಚಣಿ ದೊರೆಯಲಿದೆ.

ಮಾಸಿಕ 10 ಸಾವಿರ ಪಿಂಚಣಿ

ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, ನಿವೃತ್ತಿಯಾಗುವವರಿಗೆ & ನಿವೃತ್ತಿಯ ಬಳಿಕ ಮಾಸಿಕ 10 ಸಾವಿರ ಪಿಂಚಣಿ ದೊರೆಯಲಿದೆ.

ಸೇವಾ ಅವಧಿ

ಕಡಿಮೆ ಸೇವಾ ಅವಧಿ ಹೊಂದಿದ ಉದ್ಯೋಗಿಯ ಸೇವಾ ಅವಧಿಗೆ ಅನುಗುಣವಾಗಿ ಪಿಂಚಣಿ ದೊರೆಯಲಿದೆ.

UPS ಪಿಂಚಣಿ ವ್ಯವಸ್ಥೆ

UPS ಪಿಂಚಣಿ ವ್ಯವಸ್ಥೆಯಲ್ಲಿ ನೌಕರರ ಕೊಡುಗೆ ಶೇ.10ರಷ್ಟಿದ್ದರೆ, ಕೇಂದ್ರ ಸರ್ಕಾರದ ಪಾಲು ಶೇ.18.5ರಷ್ಟು ಸಿಗಲಿದೆ.

ಪ್ರಧಾನಿ ಮೋದಿ ಹೇಳಿದ್ದೇನು?

ಸರ್ಕಾರಿ ನೌಕರರ ಯೋಗಕ್ಷೇಮ ಕಾಪಾಡುವ ಕುರಿತ ನಮ್ಮ ಬದ್ಧತೆ ಹೀಗಿಯೇ ಮುಂದುವರೆಯಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

VIEW ALL

Read Next Story