‘ಬಿಗ್ ಬಾಸ್’ ಮನೆಯಲ್ಲಿ ಈ ವಾರ ಹೈಡ್ರಾಮಾ ನಡೆದಿದ್ದು, ಎಲಿಮಿನೇಟ್ ಆದರೂ ಭಾಗ್ಯಶ್ರೀ ಅವರಿಗೆ ಮನೆಯೊಳಗಿರುವ ‘ಭಾಗ್ಯ’ ಸಿಕ್ಕಿದೆ.
ಹೌದು, ಕಿರುತೆರೆ ನಟಿ ಭಾಗ್ಯಶ್ರೀ ‘ಬಿಗ್ ಬಾಸ್’ 10ನೇ ಸೀಸನ್ ಮನೆಯಿಂದ ಎಲಿಮಿನೇಟರ್ ಆಗಿದ್ದರೂ ಹೊರಹೋಗದ ಉಳಿದುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕೊನೆ ಗಳಿಗೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರೇಕ್ಷಕರ ಮನವಿ ಮೇರೆಗೆ ಈ ವಾರ ಯಾವುದೇ ಎಲಿಮಿನೇಟ್ ಇಲ್ಲವೆಂದು ಘೋಷಿಸುವ ಮೂಲಕ ಕಿಚ್ಚ ಸುದೀಪ್ ಅಚ್ಚರಿ ಮೂಡಿಸಿದರು.
ಈ ವೇಳೆ ಎಲಿಮಿನೇಟರ್ ಆಗಿದ್ದ ಭಾಗ್ಯಶ್ರೀ ಅವರು ‘ಬಿಗ್ ಬಾಸ್’ ಮನೆಯ ಬಾಗಿಲವರೆಗೂ ಹೋಗಿ ವಾಪಸ್ ಮರಳಿದ್ದಾರೆ.
ಭಾಗ್ಯಶ್ರೀ ಈ ವಾರ ಎಲಿಮಿನೇಟ್ ಆಗಿದ್ದು, ಇಶಾನಿ ಸೇಫ್ ಎಂದು ಕಿಚ್ಚ ಸುದೀಪ್ ಹೇಳಿದ್ದರು. ಈ ವೇಳೆ ಭಾಗ್ಯಶ್ರೀ ಗೇಟ್ ಬಳಿ ಬಂದರೂ ಬಾಗಿಲು ತೆರೆಯದೇ ಗೊಂದಲಕ್ಕೆ ಒಳಗಾದರು.
ಈ ವೇಳೆ ಭಾಗ್ಯಶ್ರೀ ಅವರನ್ನು ಮನೆಯೊಳಗೆ ಕರೆದ ಸುದೀಪ್ ಅವರು 3 ಮಂದಿಯನ್ನು ನಾಮಿನೇಟ್ ಮಾಡಲು ಸೂಚಿಸಿದರು.
ನೀವು ಪ್ರೇಕ್ಷಕರ ಮನವಿ ಮೇರೆಗೆ ಹೊರ ಹೋಗುತ್ತಿಲ್ಲ. ನೀವು ನಾಮಿನೇಟ್ ಮಾಡಿದವರು ನಾಮಿನೇಟ್ ಆಗಿಲ್ಲವೆಂದು ಕಿಚ್ಚ ಸುದೀಪ್ ಸ್ಪಷ್ಟಪಡಿಸಿದರು.
ಈ ಮೂಲಕ ಇನ್ನೂ 1 ವಾರ ಮನೆಯೊಳಗೆ ಇರುವ ಭಾಗ್ಯ ಭಾಗ್ಯಶ್ರೀಗೆ ದೊರಕಿತು.