1. ಎಚ್ಚರ! ಮರುಕಟ್ಟೆಯಲ್ಲಿ ಶುಗರ್ ಫ್ರೀ ಲೇಬಲ್ ಅಡಿ ಸಿಗುವ ಈ 4 ಪದಾರ್ಥಗಳು ನಿಮ್ಮ ತೊಂದರೆ ಮತ್ತಷ್ಟು ಹೆಚ್ಚಿಸುತ್ತವೆ!
2. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಹಲವು ಪದಾರ್ಥಗಳನ್ನು ಶುಗರ್ ಫ್ರೀ ಲೇಬಲ್ ಅಡಿ ಮಾರಾಟ ಮಾಡಲಾಗುತ್ತಿದೆ.
3. ಆದರೆ, ಅವುಗಳಲ್ಲಿನ ಬಹುತೇಕ ಆಹಾರ ಪದಾರ್ಥಗಳಲ್ಲಿ ಸಕ್ಕರೆ ಇರುತ್ತದೆ.
4. ಸಕ್ಕರೆ ಸೇವನೆಯಿಂದ ಕ್ಯಾಲೋರಿಗಳು ಮಾತ್ರ ಹೆಚ್ಚಾಗುತ್ತದೆ ಮತ್ತು ದೇಹಕ್ಕೆ ಯಾವುದೇ ಲಾಭ ಉಂಟಾಗುವುದಿಲ್ಲ.
5. ಇದರ ಅಧಿಕ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ಮತ್ತು ಅದನ್ನು ನಿಯಂತ್ರಿಸುವುದು ತುಂಬಾ ಕಷ್ಟಕರವಾಗಿರುತ್ತದೆ.
6. ಶುಗರ್ ಫ್ರೀ ಎಂದು ಭಾವಿಸಿ ನಾವು ಸೇವಿಸುವ ಕೆಲ ಪದಾರ್ಥಗಳನ್ನು ತಿಳಿದುಕೊಳ್ಳೋಣ ಬನ್ನಿ.
7. ಕೇಚಪ್ ಸೇವಿಸುವುದು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಅದು ಶುಗರ್ ಫ್ರೀಯಾಗಿರುವುದಿಲ್ಲ.
8. ಇತ್ತೀಚಿನ ದಿನಗಳಲ್ಲಿ ಮುಚ್ಚಿದ ಡಬ್ಬಿಗಳಲ್ಲಿ ಹಣ್ಣುಗಳು ಹೆಚ್ಚು ಮಾರಾಟವಾಗುತ್ತಿವೆ. ಆದರೆ ಅವು ಆರೋಗ್ಯಕ್ಕೆ ತುಂಬಾ ಹಾನಿಕಾರಕವಾಗಿವೆ.
9. ನಮಗೆ ರಿಫ್ರೇಶ್ ಮಾಡಲು ಮಾರಾಟಗೊಳ್ಳುವ ರಿಫ್ರೇಷಿಂಗ್ ಡ್ರಿಂಕ್ ಗಳಲ್ಲಿ ಸಕ್ಕರೆ ಪ್ರಮಾಣ ಅತಿ ಹೆಚ್ಚಾಗಿರುತ್ತೆ ನೆನಪಿಡಿ.
10. ಸುವಾಸಿಕ ಹಾಲು ಕೂಡ ಹೆಚ್ಚು ಮಾರಾಟಗೊಳ್ಳುತ್ತಿದೆ ಅದರಲ್ಲಿಯೂ ಕೂಡ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ.