ಶ್ರೀರಸ್ತು ಶುಭಮಸ್ತು ಧಾರವಾಹಿ ನಟಿ ಭವ್ಯಶ್ರೀ ರೈ ಪತಿ ಯಾರು ಗೊತ್ತೇ? ಅವರೂ ಬಣ್ಣದ ಲೋಕದಲ್ಲೇ ಮಿಂಚುತ್ತಿದ್ದಾರೆ..
ಬಣ್ಣದ ಬದುಕಲ್ಲಿ ನಟನೆ ಮಾಡುತ್ತಾ ಅಲ್ಲೇ ಬದುಕನ್ನು ಕಟ್ಟಿಕೊಂಡವರು ಸಾವಿರಾರು ಮಂದಿ..
ನಟನೆಯಿಂದ ಬದುಕು ಸಾಗಿಸುತ್ತಿರುವವರು ಒಂದು ಕಡೆ ಆದರೆ.. ನಟನೆಯಿಂದ ಬಾಳಸಂಗಾತಿಯನ್ನೇ ಪಡೆದುಕೊಂಡವರು ಇದ್ದಾರೆ.
ಬಣ್ಣದ ಬದುಕಿಗೆ ಎಂಟ್ರಿಕೊಟ್ಟ ಮೇಲೆ ಜೋಡಿಯಾದವರು ಸಾಕಷ್ಟಿದ್ದಾರೆ.. ಉದಾಹರಣೆಗೆ ಯಶ್-ರಾಧಿಕಾ, ಅಂಬರೀಷ್-ಸುಮಲತಾ ಹೀಗೆ ಹಲವಾರು ಜೋಡಿಗಳಿವೆ.
ಅದರಲ್ಲಿ ಒಂದು ಜನಪ್ರಿಯ ಜೋಡಿ ಎಂದರೇ ಖ್ಯಾತ ಕಿರುತೆರೆ ನಟಿ ಭವ್ಯಶ್ರೀ ರೈ ಹಾಗೂ ಸುರೇಶ್ ರೈ..
ನಟಿ ಭವ್ಯಶ್ರೀ ಅವರು ಹಲವಾರು ನಂಬರ್ ಒನ್ ಸಿರೀಯಲ್‌ಗಳಲ್ಲಿ ನಟಿಸಿದ್ದಾರೆ.. ಮತ್ತು ನಟಿಸುತ್ತಿದ್ದಾರೆ..
ಇನ್ನು ನಟಿ ಭವ್ಯಶ್ರೀ ಎಷ್ಟು ಫೇಮಸ್ ಆಗಿದ್ದಾರೋ ಅವರ ಪತಿ ಕೂಡ ಅಷ್ಟೇ ದೊಡ್ಡ ಹೆಸರು ಮಾಡಿದ್ದಾರೆ..
ಈಗಲೂ ಕೂಡ ಹಲವು ಸಿರೀಯಲ್‌ಗಳಲ್ಲಿ ನಟಿಸುತ್ತಿದ್ದಾರೆ ನಟಿ ಭವ್ಯಶ್ರೀ ಪತಿ ಸುರೇಶ್ ರೈ..
ಜೀ ಕನ್ನಡದಲ್ಲಿ ಇತ್ತೀಚೆಗೆ ಪ್ರಸಾರವಾಗುತ್ತಿರೋ ಬ್ರಹ್ಮಗಂಟು ಸಿರೀಯಲ್‌ನಲ್ಲಿ ಹಿರಿಯ ಪಾತ್ರಧಾರಿಯಾಗಿ ಸುರೇಶ್ ರೈ ಕಾಣಿಸಿಕೊಂಡಿದ್ದಾರೆ.