ವಯನಾಡ್ ಸಂತ್ರಸ್ತರಿಗೆ ರಶ್ಮಿಕಾ ನೀಡಿದ ದೇಣಿಗೆ ಎಷ್ಟು ಗೊತ್ತಾ..?

Zee Kannada News Desk
Aug 04,2024


ಕೇರಳದಲ್ಲಿ ಪ್ರಕೃತಿ ಸೃಷ್ಟಿಸಿರುವ ಅನಾಹುತ ಅಷ್ಟಿಷ್ಟಲ್ಲ. ವಯನಾಡಿನಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಜನರು ಸಾವನ್ನಪ್ಪಿದ್ದಾರೆ. ಸೆಲಿಬ್ರಟಿಗಳು ಈ ಅವಘಡದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ತಮ್ಮ ಸಹಾಯ ಅಸ್ತ ಚಾಚುತ್ತಿದ್ದಾರೆ.

ಚಿತ್ರರಂಗದ ಗಣ್ಯರ ಸಂತಾಪ

ಈ ಘಟನೆಯಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ದುರಂತಕ್ಕೆ ಚಿತ್ರರಂಗದ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಸಂತ್ರಸ್ತರಿಗೆ ಧಾನ

ಚಿತ್ರರಂಗದ ಹಲವು ಗಣ್ಯರು ವಯನಾಡ್ ಘಟನೆಯ ಸಂತ್ರಸ್ತರಿಗೆ ಮತ್ತು ಕುಟುಂಬಗಳಿಗೆ ಸಹಾಯ ಮಾಡಲು ತಮ್ಮ ಕೈಲಾದಷ್ಟು ಹಣವನ್ನು ನೀಡುತ್ತಿದ್ದಾರೆ.

ರಶ್ಮಿಕಾ ಮಂದಣ್ಣ

ಕನ್ನಡದ ಜನಪ್ರಿಯ ನಾಯಕಿ ರಶ್ಮಿಕಾ ಮಂದಣ್ಣ ಕೂಡ ವಯನಾಡ್ ಸಂತ್ರಸ್ತರಿಗೆ ಸಹಾಯ ಮಾಡಲು ಮುಂದೆ ಬಂದಿದ್ದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿ

ಈ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರು ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಪ್ರಾರ್ಥನೆ

ಈ ಸಂಕಷ್ಟದ ಸಮಯದಲ್ಲಿ ಕೇರಳದ ಜನರೆಲ್ಲರೂ ಧೈರ್ಯದಿಂದಿರಬೇಕು, ಈ ದುರಂತದಿಂದ ಕೇರಳ ಶೀಘ್ರ ಚೇತರಿಸಿಕೊಳ್ಳಬೇಕು ಎಂದು ರಶ್ಮಿಕಾ ಮಂದಣ್ಣ ಪ್ರಾರ್ಥಿಸಿದ್ದಾರೆ.

ಸೇನಾ ಪಡೆಗೆ ಧನ್ಯವಾದ

ಈ ಘಟನೆಯಿಂದ ಸಾವಿರಾರು ಜನರನ್ನು ರಕ್ಷಿಸಿದ ಸೇನಾ ಪಡೆಗಳು ಮತ್ತು ವಿಪತ್ತು ಅಧಿಕಾರಿಗಳಿಗೆ ರಶ್ಮಿಕಾ ಧನ್ಯವಾದ ತಿಳಿಸಿದ್ದಾರೆ.

ಸಹಾಯ ಧನ

ಇನ್ನೂ, ಕಮಲ್ ಹಾಸನ್ 25 ಲಕ್ಷ ರೂ., ವಿಕ್ರಮ್ 20 ಲಕ್ಷ ರೂ., ಸೂರ್ಯ, ಜ್ಯೋತಿಕಾ ಹಾಗೂ ಕಾರ್ತಿ ಸೇರಿ 50 ಲಕ್ಷ ರೂ.ಗಳನ್ನು ಸಹಾಯ ಧನವಾಗಿ ನೀಡಿದ್ದಾರೆ.

VIEW ALL

Read Next Story