ನ್ಯಾಷನಲ್ ಕ್ರಶ್ ಎಂದೇ ಕರೆಸಿಕೊಳ್ಳುವ ರಶ್ಮಿಕಾ ಮಂದಣ್ಣ ಸೌತ್ ಫಿಲಿಂ ಇಂಡಸ್ಟ್ರಿಯ ಬಹು ಬೇಡಿಕೆಯ ನಟಿ.
ಸದ್ಯ ರಶ್ಮಿಕಾ ಮಂದಣ್ಣ ಕಾಲಿವುಟಡ್, ಟಾಲಿವುಡ್ ಹಾಗು ಬಾಲಿವುಡ್ ಅಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ.
ಮೂಲತಹಃ ಕೊಡಗಿನವರಾಗಿರುವ ರಶ್ಮಿಕಾ ಮಂದಣ್ಣ ಸಾಂಪ್ರದಾಯಿಕ ಕೊಡಗು ಶೈಲಿಯಲ್ಲಿ ಸೀರೆಯನ್ನುಟ್ಟು ಎಲ್ಲರ ಗಮನ ಸೆಳೆದಿದ್ದಾರೆ.
ಸಾಲು ಸಾಲು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ರಶ್ಮಿಕಾ ಬಿಡುವು ಸಿಕ್ಕಾಗಲೆಲ್ಲಾ ಕೊಡಗಿಗೆ ಹೋಗಿ ಕಾಲ ಕಳೆಯುತ್ತಾರೆ.
ಕೂರ್ಗ್ ಶೈಲಿನಲ್ಲಿ ಸೀರೆಯನ್ನುಟ್ಟು ಫೋಟೊಸ್ಗೆ ಪೋಸ್ ಕೊಟ್ಟಿರುವ ರಶ್ಮಿಕಾ ಅವರ ಫೋಟೊಸ್ ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಲೈಕ್ಸ್ ಹರಿದು ಬರುತ್ತಿದೆ.
ಕನ್ನಡದ ಕಿರೀಕ್ ಪಾರ್ಟಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ರಶ್ಮಿಕಾ ಕಾಲಿಟ್ಟರು. ಮೊದಲನೇ ಸಿನಿಮಾವೇ ಸಿಕ್ಕಾಪಟ್ಟೆ ಹಿಟ್ ಆಗಿ ನಟಿಗೆ ಜನಪ್ರಿಯತೆ ತಂದುಕೊಟ್ಟಿತ್ತು.
ರಣಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾದ ಮೂಲಕ ರಶ್ಮಿಕಾ ಬಾಲಿವುಡ್ಗೆ ಎಂಟ್ರಿ ಕೊಟ್ಟರು. ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು.
ಸದ್ಯ ರಶ್ಮಿಕಾ ಮಂದಣ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ಗೆ ಜೋಡಿಯಾಗಿ ಪುಷ್ಪಾ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ.