ಸಿಂಪಲ್‌ ಆಗಿ ಕಾಣುತ್ತಿರುವ ರಶ್ಮಿಕಾ ಸೀರೆಯ ಬೆಲೆ ಎಷ್ಟು ಗೊತ್ತಾ..?

Zee Kannada News Desk
Jul 16,2024


ರಕ್ಷಿತ್‌ ಶೆಟ್ಟಿಯವರ ಕಿರೀಕ್‌ ಪಾರ್ಟಿ ಸಿನಿಮಾದ ಮೂಲಕ ಫಿಲಿಂ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಇಂದು ಬಹು ಬೇಡಿಕೆಯ ನಟಿ.

ಸಾಲು ಸಾಲು ಅವಕಾಶ

ಅನಿಮಾಲ್‌, ಪುಷ್ಪಾ ಸೇರಿದಂತೆ ರಶ್ಮಿಕಾ ಸೂಪರ್‌ ಬ್ಲಾಕ್‌ ಬಸ್ಟರ್‌ ಸಿನಿಮಾಗಳಲ್ಲಿ ನಟಿಸಿ ಸಾಲು ಸಾಲು ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ.

ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್

ಸದ್ಯ ಪುಷ್ಪ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ರಶ್ಮಿಕಾ... ಶುಕ್ರವಾರದಿಂದ ಭಾನುವಾರದವರೆಗೆ ನಡೆದ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಕಾರ್ಯಕ್ರಮಾದಲ್ಲಿ ಭಾಗಿಯಾಗಿದ್ದರು.

ಶುಭ ಆಶರ್ವಾದ

ಜುಲೈ 12 ರಂದು ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದ ರಶ್ಮಿಕಾ, ಮರುದಿನ ನಡೆದ ಶುಭ ಆಶರ್ವಾದ ಸಮಾರಂಭದಲ್ಲೂ ಪಾಲ್ಗೊಂಡಿದ್ದರು.

ರಾಯಲ್ ಬ್ಲೂ ಸೀರೆ

ಶುಭ್ ಆಶೀರ್ವಾದ ಸಮಾರಂಭದಲ್ಲಿ ರಶ್ಮಿಕಾ ರಾಯಲ್ ಬ್ಲೂ ಸೀರೆಯಲ್ಲಿ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದರು.

ತುಂಬಾ ಕ್ಯಾಸ್ಟ್ಲಿ

ಈ ಸಂಭ್ರಮಾಚರಣೆಯಲ್ಲಿ ರಶ್ಮಿಕಾ ತೊಟ್ಟಿರುವ ನೇವಿ ಬ್ಲೂ ಕಲರ್ ಸೀರೆ ಸಿಂಪಲ್ ಆಗಿ ಕಂಡರೂ ಈ ಸೀರೆ ತುಂಬಾ ಕ್ಯಾಸ್ಟ್ಲಿ ಆಗಿರುವುದು ನೆಟಿಜನ್ ಗಳಿಗೆ ಅಚ್ಚರಿ ಮೂಡಿಸಿದೆ.

ಸೀರೆ ಬೆಲೆ

ಇತ್ತೀಚಿನ ಮಾಹಿತಿ ಪ್ರಕಾರ ರಶ್ಮಿಕಾ ಉಟ್ಟಿರುವ ಸೀರೆ 1.28 ಲಕ್ಷ ರೂ. ಸದ್ಯ ರಶ್ಮಿಕಾ ಫೋಟೋಗಳು ವೈರಲ್ ಆಗಿವೆ.

ಅಮೂಲ್ಯವಾದ ಸೀರೆ

ರಶ್ಮಿಕಾ ಈ ಅಮೂಲ್ಯವಾದ ಸೀರೆಯಲ್ಲಿ ಸರಳವಾಗಿ ಕಾಣುತ್ತಿದ್ದರು ಮತ್ತು ನೀಲಮಣಿಗಳು ಮತ್ತು ವಜ್ರಗಳಿಂದ ಹೊದಿಸಿದ ಸುಂದರವಾದ ಸೀರೆಯನ್ನು ನಟಿ ಉಟ್ಟಿದ್ದರು.

VIEW ALL

Read Next Story