ಕರಾವಳಿ ಸುಂದರಿ ನಟಿ ಶಿಲ್ಪಾ ಶೆಟ್ಟಿ ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರು.
ಶಿಲ್ಪಾ ಶೆಟ್ಟಿ ಪ್ರಸ್ತುತ ಟಿವಿ ಶೋಗೆ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಿಯಾಲಿಟಿ ಶೋಗಳ ಜೊತೆ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯವಾಗಿರುವ ನಟಿ ಆಗಾಗ ಫೊಟೋಶೂಟ್ ಮಾಡಿಸುತ್ತಿರುತ್ತಾರೆ.
ಸಧ್ಯ ಶಿಲ್ಪಾ ಕೆಂಪು ಸೀರೆಯುಟ್ಟು ಕ್ಯಾಮರಾಗೆ ಪೋಸ್ ನೀಡಿದ್ದು, ಈ ಕುರಿತ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಫೋಟೋಸ್ ನೋಡಿದ್ರೆ, ವಯಸ್ಸು ಹೆಚ್ಚಾದಂತೆ ಶಿಲ್ಪಾ ಶೆಟ್ಟಿ ಸೌಂದರ್ಯ ಹೆಚ್ಚುತ್ತಲೇ ಇದೆ ಅಂತ ಅನಿಸುತ್ತದೆ.
ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿಗೆ ಕನ್ನಡ ಸಿನಿರಂಗದಲ್ಲೂ ಒಳ್ಳೆಯ ಫಾಲೋಯಿಂಗ್ ಇದೆ. ಪ್ರಿತ್ಸೋದು ತಪ್ಪಾ ಸಿನಿಮಾ ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇಂಡಸ್ಟ್ರಿಗೆ ಕಾಲಿಟ್ಟು 30 ವರ್ಷಗಳೇ ಕಳೆದರೂ 50ರ ಸಮೀಪಕ್ಕೆ ಬಂದರೂ ಶಿಲ್ಪಾ ಕ್ರೇಜ್ ಸ್ವಲ್ಪವೂ ಕಡಿಮೆಯಾಗಿಲ್ಲ.
ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ನಟಿ ಶಿಲ್ಪಾ ಆಗಾಗ ತಮ್ಮ ಫಿಟ್‌ನೆಸ್ ಮತ್ತು ಗ್ಲಾಮರ್ ಮೂಲಕ ಸುದ್ದಿಯಲ್ಲಿರುತ್ತಾರೆ.