ವಿಟಮಿನ್ ‘ಸಿ’ ನಮ್ಮ ದೇಹ, ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿ. ವಿಟಮಿನ್ ‘ಸಿ’ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ.
ದೇಹಕ್ಕೆ ರೋಗನಿರೋಧಕ ಶಕ್ತಿ ನೀಡುವ ವಿಟಮಿನ್ ‘ಸಿ’ಯನ್ನು ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಹಾನಿಯಾಗುತ್ತದೆ.
ದೇಹದಲ್ಲಿ ವಿಟಮಿನ್ ‘ಸಿ’ ಅಧಿಕವಾದಾಗ ದೇಹದಲ್ಲಿ ಕಬ್ಬಿಣದ ಪ್ರಮಾಣ ಹೆಚ್ಚಾಗುತ್ತದೆ. ಈ ಕಾರಣದಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ.
ವಿಟಮಿನ್ ‘ಸಿ’ ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಮೂತ್ರಪಿಂಡ ಹಾಳಾಗುತ್ತದೆ.
ವಿಟಮಿನ್ ‘ಸಿ’ ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ಬೆಳೆಯುವ ಅಪಾಯವು ಹೆಚ್ಚಾಗುತ್ತದೆ.
ವಿಟಮಿನ್ ‘ಸಿ’ ಹೊಟ್ಟೆಯನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬಿಕೊಳ್ಳುತ್ತದೆ.
ವಿಟಮಿನ್ ‘ಸಿ’ ಅತಿಯಾಗಿ ಸೇವಿಸುವುದರಿಂದ ತಲೆನೋವು ಉಂಟಾಗುತ್ತದೆ.
ವಿಟಮಿನ್ ‘ಸಿ’ಯ ಅತಿಯಾದ ಸೇವನೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ.